For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಹೊರಹಾಕಿದ ಆಸಕ್ತಿಕರ ಸಂಗತಿ

  |

  ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಎಷ್ಟು ಖ್ಯಾತರಾಗಿದ್ದಾರೋ ಅವರಷ್ಟೇ ಖ್ಯಾತರು ಅವರ ಬಾಡಿಗಾರ್ಡ್ ಶೇರಾ. ಹೆಸರಿಗೆ ತಕ್ಕಂತೆ ಭಯ ಹುಟ್ಟಿಸುವ ಮುಖಭಾವ, ಅಜಾನುಬಾಹು, ದೈತ್ಯ ದೇಹಿ ಶೇರಾ ಸುಮಾರು 26 ವರ್ಷಗಳಿಂದಲೂ ಸಲ್ಮಾನ್ ಖಾನ್‌ಗೆ ಭದ್ರತೆ ಒದಗಿಸುತ್ತಿದ್ದಾರೆ.

  ಗುರ್ಮೀತ್ ಸಿಂಗ್ ಜಾಲಿ ಹೆಸರಿನ ಶೇರಾ 1995 ರಲ್ಲಿ ಮೊದಲ ಬಾರಿಗೆ ಸಲ್ಮಾನ್ ಖಾನ್‌ಗಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿರುವ ಈ ಸೆಲೆಬ್ರಿಟಿ ಬಾಡಿಗಾರ್ಡ್, ಸಲ್ಮಾನ್ ಖಾನ್ ಅನ್ನು ತಾವು ಮೊದಲು ಭೇಟಿ ಆಗಿದ್ದು ಹೇಗೆ ಅದಕ್ಕೆ ಮುಂಚೆ ಏನು ಮಾಡುತ್ತಿದ್ದೆ ಎಂಬುದೆಲ್ಲವನ್ನೂ ಹೇಳಿಕೊಂಡಿದ್ದಾರೆ.

  1987 ರಲ್ಲಿಯೇ ಬಾಡಿಬಿಲ್ಡಿಂಗ್‌ನಲ್ಲಿ ಮುಂಬೈನಲ್ಲಿ ಹೆಸರು ಮಾಡಿದ್ದ ಶೇರಾ ವಿದೇಶದಿಂದ ಭಾರತಕ್ಕೆ ಬರುವ ಹಾಲಿವುಡ್ ನಟ-ನಟಿಯರಿಗೆ ತಾತ್ಕಾಲಿಕ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. 1995 ರಲ್ಲಿ ಅವರು ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡಲು ಆರಂಭಿಸಿದರು.

  ಸಲ್ಮಾನ್ ಅನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?

  ಸಲ್ಮಾನ್ ಅನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?

  'ಹಾಲಿವುಡ್ ಹಾಡುಗಾರ್ತಿ ವ್ಹೀಫೀಲ್ಡ್ ಭಾರತಕ್ಕೆ ಬಂದಾಗ ನಾನು ಅವರ ಬಾಡಿಗಾರ್ಡ್ ಆಗಿದ್ದೆ ಆಗಲೇ ನಾನು ಮೊದಲ ಬಾರಿಗೆ ಸಲ್ಮಾನ್ ಖಾನ್‌ರನ್ನು ನೋಡಿದ್ದು. ಆ ನಂತರ ಮ್ಯಾಟ್ರಿಕ್ಸ್, ಸ್ಪೀಡ್ ಸಿನಿಮಾಗಳ ಹೀರೋ ಕೀನು ರೀವ್ಸ್ ಭಾರತಕ್ಕೆ ಬಂದಾಗ ಎರಡನೇ ಬಾರಿ ನಾನು ಸಲ್ಮಾನ್ ಖಾನ್ ಅನ್ನು ಭೇಟಿಯಾದೆ. ಕೀನು ರೀವ್ಸ್ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಸಹ ಬಂದಿದ್ದರು' ಎಂದಿದ್ದಾರೆ ಶೇರಾ.

  ಸಾಯುವವರೆಗೆ ಸಲ್ಮಾನ್ ಜೊತೆ ಇರುತ್ತೇನೆ: ಶೇರಾ

  ಸಾಯುವವರೆಗೆ ಸಲ್ಮಾನ್ ಜೊತೆ ಇರುತ್ತೇನೆ: ಶೇರಾ

  ಆ ನಂತರ ಸಲ್ಮಾನ್ ಖಾನ್ ಚಂಢೀಗಡದಲ್ಲಿ ಶೋ ಒಂದನ್ನು ಮಾಡಿದರು ಅದಕ್ಕೆ ನಾನು ಬಾಡಿಗಾರ್ಡ್ ಆಗಿ ಸಂಘಟಕರಿಂದ ನೇಮಕವಾಗಿದ್ದೆ. ಆ ಕಾರ್ಯಕ್ರಮದ ನಂತರ ಇಂದಿನವರೆಗೆ ನಾನು ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿದ್ದೇನೆ ಎಂದು ಶೇರಾ ಹೇಳಿದ್ದಾರೆ. ಅಷ್ಟೇ ಅಲ್ಲ 'ಸಾಯುವವರೆಗೆ ಸಲ್ಮಾನ್ ಖಾನ್ ನೆರಳಾಗಿಯೇ ಇರುತ್ತೇನೆ' ಎಂದು ಸಹ ಶೇರಾ ಹೇಳಿದ್ದಾರೆ.

  ಸಿನಿಮಾವನ್ನು ಅರ್ಪಿಸಿದ್ದ ಸಲ್ಮಾನ್ ಖಾನ್

  ಸಿನಿಮಾವನ್ನು ಅರ್ಪಿಸಿದ್ದ ಸಲ್ಮಾನ್ ಖಾನ್

  ಶೇರಾ, ಸಲ್ಮಾನ್ ಖಾನ್‌ಗೆ ಕೇವಲ ಬಾಡಿಗಾರ್ಡ್ ಮಾತ್ರವೇ ಅಲ್ಲದೆ ಕುಟುಂಬ ಸದಸ್ಯರೂ ಆಗಿಬಿಟ್ಟಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಶೇರಾ ಇಲ್ಲದ ಸಂದರ್ಭಗಳು ಬಹಳ ಅಪರೂಪ. 2011 ರಲ್ಲಿ ಸಲ್ಮಾನ್ ಖಾನ್ 'ಬಾಡಿಗಾರ್ಡ್' ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾವನ್ನು ತಮ್ಮ ಬಾಡಿಗಾರ್ಡ್ ಶೇರಾಗೆ ಅರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು ಶೇರಾ.

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?
  ಟೈಗರ್ ಸೆಕ್ಯುರಿಟೀಸ್ ಸಂಸ್ಥೆಯ ಮಾಲೀಕ

  ಟೈಗರ್ ಸೆಕ್ಯುರಿಟೀಸ್ ಸಂಸ್ಥೆಯ ಮಾಲೀಕ

  ಸೆಲೆಬ್ರಿಟಿ ಬಾಡಿಗಾರ್ಡ್ ಆಗಿರುವ ಶೇರಾ, 'ಟೈಗರ್ ಸೆಕ್ಯುರಿಟೀಸ್' ಹೆಸರಿನ ಭದ್ರತಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಳೆದ ಭಾರಿ ಹಾಲಿವುಡ್ ಗಾಯಕ ಜಸ್ಟಿನ್ ಬೀಬರ್ ಭಾರತಕ್ಕೆ ಬಂದಾಗ ಇದೇ ಟೈಗರ್ ಸೆಕ್ಯುರಿಟೀಸ್ ಜಸ್ಟಿನ್‌ಗೆ ಭದ್ರತೆ ಒದಗಿಸಿತ್ತು. 2019 ರಲ್ಲಿ ಶಿವಸೇನೆ ಪಕ್ಷ ಸೇರಿಕೊಂಡರು ಶೇರಾ.

  English summary
  Salman Khan's bodyguard Shera told where and how he first met Salman Khan. He has been body guard of Salman for 26 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X