For Quick Alerts
  ALLOW NOTIFICATIONS  
  For Daily Alerts

  ಹಣ ಡಬಲ್: ಟೋಪಿ ಹಾಕಿಸಿಕೊಂಡ ಹಿಂದಿ ನಟನಾರು?

  |

  ಹಣ ಕಂಡರೆ ಹೆಣವೂ ಬಾಯಿ ಬಿಡುತ್ತಂತೆ. ನೀವು ಇಡುವ ಠೇವಣಿ ಹಣಕ್ಕೆ ನಾವು ಗ್ಯಾರಂಟಿ, ಕೆಲವೇ ದಿನಗಳಲ್ಲಿ ನಿಮ್ಮ ಹಣ ಡಬಲ್ ಮಾಡಿ ಕೊಡುತ್ತೇವೆ ಎಂದು ಜನರನ್ನು ಯಾಮಾರಿಸುವ ವ್ಯವಹಾರಗಳು ನಡೆಯುತ್ತಲೇ ಇರುತ್ತದೆ, ಮುಂದೆಯೂ ನಡೆಯುತ್ತದೆ. ಏಕೆಂದರೆ ಹಣದ ಮೇಲಿನ ವ್ಯಾಮೋಹವೇ ಅಂತದ್ದು.

  ಹಣ ಕಳೆದುಕೊಂಡ ಅದೆಷ್ಟೋ ಉದಾಹರಣೆಗಳು ಕಣ್ಣು ಮುಂದೆ ಇದ್ದರೂ ಹಣದ ದುರಾಸೆಗೆ ಬಿದ್ದು ತಾವು ಕಷ್ಟ ಪಟ್ಟು ಕೂಡಿಸಿಟ್ಟ ಹಣ ಅದು ಪಿಎಫ್ ದುಡ್ಡಾಗಿರ ಬಹುದು, ಗ್ರಾಚ್ಯುಟಿ, ಮದುವೆಗೆ ಕೂಡಿಟ್ಟ ದುಡ್ಡು ಆಗಿರಬಹುದು ಅದನ್ನೆಲ್ಲಾ ಕಳೆದು ಕೊಂಡು ಕಣ್ಣೀರುಡುವ ಉದಾಹರಣೆಗಳು ಒಂದಲ್ಲಾ.. ಎರಡಲ್ಲಾ..

  ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಮೋಸ ಮಾಡುವವರು ಬರೀ ಉದ್ಯಮಿಗಳೇ ಆಗಿರಬೇಕಾಗಿಲ್ಲ. ಖಾವಿ ವೇಷಧಾರಿಗಳೂ ಇದ್ದಾರೆ.

  ಗುಜರಾತ್ ಮೂಲದ ಉದ್ಯಮಿಯೊಬ್ಬರಿಗೆ ಕೋಲಾರದ ಮದುವತ್ತಿ ಆಶ್ರಮದ ಕಪಟ ಸನ್ಯಾಸಿ ಗಣೇಶಾಚಾರ್ಯ ಸ್ವಾಮೀಜಿ ಆಲಿಯಾಸ್ ಅನಂತಾಚಾರ್ಯ ಸ್ವಾಮಿ ಸುಮಾರು 47 ಲಕ್ಷ ರೂಪಾಯಿ ಉಂಡೆ ನಾಮ ತಿಕ್ಕಿದ ಘಟನೆ ಇನ್ನೂ ನಮ್ಮ ಕಣ್ಣ ಮುಂದೆ ಇದೆ.

  ವಿಷಯಕ್ಕೆ ಬರುವುದಾದರೆ, ಇದು ತೆರೆಯ ಮೇಲೆ ತನ್ನ ಪಾತ್ರಗಳಿಂದ ಹತ್ತಾರು ಜನರಿಗೆ ಆದರ್ಶಪ್ರಾಯನಾಗಿರ ಬೇಕಾಗಿದ್ದ ಬಾಲಿವುಡ್ ನಟನೊಬ್ಬ ಹಣದ್ವಿಗುಣದ ಆಮಿಷಕ್ಕೆ ಬಲಿಯಾಗಿ ಲಕ್ಷ ಲಕ್ಷ ಯಾಮಾರಿಸಿ ಕೊಂಡ ಕಹಾನಿ...

  ಅಕ್ಷಯ್ ಖನ್ನಾ

  ಅಕ್ಷಯ್ ಖನ್ನಾ

  ಜನಸಾಮಾನ್ಯರು ಯಾಮಾರಿಸಿಕೊಂಡ ಕಥೆ ಒಂದೆಡೆಯಾದರೆ ಇದು ಬಾಲಿವುಡ್ ನಟನೊಬ್ಬನ ಕಥೆ. ಹಿರಿಯ ಹಿಂದಿ ನಟ ವಿನೋದ್ ಖನ್ನಾ ಸುಪುತ್ರ ಅಕ್ಷಯ್ ಖನ್ನಾಗೆ ಹಣ ಡಬಲ್ ಮಾಡಿ ಕೊಡುವುದಾಗಿ ಸಂಸ್ಥೆಯೊಂದು ನಂಬಿಸಿ ಸರಿಯಾಗಿ ಟೋಪಿ ಹಾಕಿದೆಯಂತೆ.

  ಪೊಲೀಸರಿಗೆ ದೂರು

  ಪೊಲೀಸರಿಗೆ ದೂರು

  ಹಾಗಂತ ಖುದ್ದು ಅಕ್ಷಯ್ ಖನ್ನಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮುಂಬೈನ ಇಕಾನಮಿಕ್ ಅಫೆನ್ಸ್ ವಿಂಗ್ (EOW) ನಲ್ಲಿ ಶನಿವಾರ (ಅ 19) ಈ ಸಂಬಂಧ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ಶುರು ಹಚ್ಚಿಕೊಂಡಿದ್ದಾರೆ.

  ಇಂಟೆಕ್ ಇಮೇಜಸ್

  ಇಂಟೆಕ್ ಇಮೇಜಸ್

  ಖನ್ನಾ ಹಣ ಹೂಡಿದ್ದ ಸಂಸ್ಥೆಯ (ಇಂಟೆಕ್ ಇಮೇಜಸ್) ಅಧ್ಯಕ್ಷ, ಆತನ ಪತ್ನಿ ಮತ್ತು ಆ ಸಂಸ್ಥೆಯ ನಿರ್ದೇಶಕರ ಮಾತಿನ ಮೋಡಿಗೆ ಮರುಳಾದ ಅಕ್ಷಯ ಖನ್ನ ಬರೋಬ್ಬರಿ ಐವತ್ತು ಲಕ್ಷ ರೂಪಾಯಿ ಹಣ ಹೂಡಿದ್ದರು. ಹಣ ಹೂಡಿಸಿಕೊಂಡ ಸಂಸ್ಥೆಯವರು ನಲವತ್ತೈದು ದಿನಗಳಲ್ಲಿ ಐವತ್ತು ಲಕ್ಷ ರೂಪಾಯಿ ಹೂಡಿಕೆ ಹಣವು ಡಬಲ್ ಆಗಿ ಒಂದು ಕೋಟಿ ಆಗುತ್ತದೆ.

  ದಿನಸಿ ಪದಾರ್ಥದ ಮಾರುಕಟ್ಟೆ

  ದಿನಸಿ ಪದಾರ್ಥದ ಮಾರುಕಟ್ಟೆ

  ದಿನಸಿ ಪದಾರ್ಥದ ವಹಿವಾಟಿನ ಮಾರುಕಟ್ಟೆ ಮೇಲೆ ನಿಮ್ಮ ಹಣವನ್ನು ಹೂಡಲಾಗುವುದು ಎಂದು ಅಕ್ಷಯ್ ಖನ್ನಾನನ್ನು ನಂಬಿಸಿದ್ದಾರೆ. ಕಿಸ್ಸಾ.. ಪೈಸಾಕಾ.. ಅಲ್ವಾ..ಅಕ್ಷಯ್ ಬಲೀಕಾ ಬಕ್ರಾ ಆಗಿ ಈಗ ಪೊಲೀಸ್ ಸ್ಟೇಷನ್ ಅಲಿಯುವಂತಾಗಿದೆ. ತನ್ನ ವಕೀಲರ ಮೂಲಕ ಮುಂಬೈನ ಮಲಬಾರ್ ಹಿಲ್ಸ್ ಪೊಲೀಸ್ ಠಾಣೆಗೆ ತೆರಳಿ ಅಕ್ಷಯ್ ದೂರು ನೀಡಿದ್ದಾರೆ.

  ಪೊಲೀಸರ ಇನ್ವೆಸ್ಟಿಗೇಶನ್

  ಪೊಲೀಸರ ಇನ್ವೆಸ್ಟಿಗೇಶನ್

  ಪೊಲೀಸರು ಸಂಸ್ಥೆಯ ಮತ್ತು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ಮೇಲೆ ದೂರು ದಾಖಲಿಸಿಕೊಂಡು ಅಕ್ಷಯ್ ಖನ್ನಾಗೆ ಟೀ ಕೊಟ್ಟು ಆಪ್ ಚಿಂತಾ ಮತ್ ಕರೋ.. ಮೈ ಹೂ..ನಾ ಎಂದು ಭರವಸೆಯ ಮಾತನ್ನಾಡಿ ಕಳುಹಿಸಿ ಕೊಟ್ಟಿದ್ದಾರೆ, ಜೊತೆಗೆ ವಿಚಾರಣೆಯನ್ನೂ ಶುರು ಮಾಡಿದ್ದಾರೆ.

  English summary
  The Economic Offences Wing (EOW) of Mumbai Police on Saturday launched an investigation into a complaint of cheating filed by Bollywood actor Akshaye Khanna against a firm. Akashaye alleged he invested Rs 50 lakh in the firm on the advice of its president and his wife and director who assured him of doubling the amount by investing it in the commodity market. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X