For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಬ್ರಹ್ಮ ಮಿಶ್ರಾ ಅನುಮಾನಾಸ್ಪದ ಸಾವು

  |

  ಹಲವು ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸಿದ್ದ ನಟ ಬ್ರಹ್ಮ ಮಿಶ್ರಾ ಇಂದು ಮುಂಬೈನ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

  ಮುಂಬೈನ ವರ್ಸೋವಾನಲ್ಲಿ ಫ್ಲ್ಯಾಟ್‌ ಒಂದರಲ್ಲಿ ಬ್ರಹ್ಮ ಮಿಶ್ರಾ ವಾಸವಾಗಿದ್ದರು. ಕೆಲ ದಿನಗಳಿಂದ ಅವರು ನೆರೆ-ಹೊರೆಯವರಿಗೆ ಕಾಣದಿದ್ದಾಗ ಪೊಲೀಸರಿಗೆ ಮಾಹಿತಿ ತಿಳಿಸಲಾಗಿತ್ತು. ಪೊಲೀಸರು ಬಂದು ಮನೆ ತೆಗೆದಾಗ ಬ್ರಹ್ಮ ಮಿಶ್ರಾ ಮೃತ ದೇಹ ಪತ್ತೆಯಾಗಿದೆ. ನಟನ ಮೃತ ದೇಹ ಕೊಳೆಯುವ ಹಂತದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಅಕ್ಷಯ್ ಕುಮಾರ್, ಅಮೀರ್ ಖಾನ್, ಹೃತಿಕ್ ರೋಷನ್, ಸುಶಾಂತ್ ಸಿಂಗ್ ರಜಪೂತ್, ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ಧಿಖಿ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಬ್ರಹ್ಮ ಮಿಶ್ರಾ ನಟಿಸಿದ್ದಾರೆ. ಜನಪ್ರಿಯ ಹಿಂದಿ ವೆಬ್ ಸರಣಿ 'ಮಿರ್ಜಾಪುರ್‌'ನಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಬ್ರಹ್ಮ ಮಿಶ್ರಾ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅವರ ಮೃತ ದೇಹವನ್ನು ಮುಂಬೈನ ವಿಲೆ ಪಾರ್ಲೆಯ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿಗೆ ಕಾರಣ ತಿಳಿಯಲಿದೆ.

  ನಟಿ ಶ್ವೇತಾ ತಿವಾರಿ, ಶ್ರಿಯಾ ಪಿಲ್ಗಾಂವ್ಕರ್, ನಟ ರಿಜ್ವಾನ್ ಸಿಖಂಧರ್ ಇನ್ನೂ ಹಲವರು ಬ್ರಹ್ಮ ಮಿಶ್ರಾ ನಿಧನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

  ಬ್ರಹ್ಮ ಮಿಶ್ರಾ, 'ಕೇಸರಿ', 'ಸೂಪರ್ 30', 'ಹಸೀನ್ ದಿಲ್‌ರುಬಾ', 'ಮಾಂಝಿ; ದಿ ಮೌಂಟೇನ್ ಮ್ಯಾನ್', 'ದಂಗಲ್', 'ಬದ್ರಿನಾಥ್‌ ಕಿ ದುಲ್ಹನಿಯಾ', ''ಚೋರ್ ಚೋರ್ ಸೂಪರ್ ಚೋರ್', 'ಬರೋಮಾಸ್' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ 'ಮಿರ್ಜಾಪುರ್', 'ನಾಟ್ ಫಿಟ್', 'ಆಫೀಸ್ v/s ಆಫೀಸ್' ವೆಬ್ ಸರಣಿಗಳಲ್ಲಿ ನಟಿಸಿದ್ದರು.

  English summary
  Bollywood actor Brahma Mishra found dead in his Mumbai flat on December 02. He acted in many films with stars like Akshay Kumar, Hritik Roshan, Aamir Khan and many.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X