»   » ಬಾಲಿವುಡ್ 'ಹೀ ಮ್ಯಾನ್' ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಬಾಲಿವುಡ್ 'ಹೀ ಮ್ಯಾನ್' ಧರ್ಮೇಂದ್ರ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

'ಆಕ್ಷನ್ ಕಿಂಗ್', 'ಹೀ ಮ್ಯಾನ್' ಅಂತಲೇ ಜನಪ್ರಿಯರಾಗಿರುವ ಬಾಲಿವುಡ್ ನಟ ಧರ್ಮೇಂದ್ರ ಅನಾರೋಗ್ಯಕ್ಕೀಡಾಗಿದ್ದಾರೆ. ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರುವ ನಟ ಧರ್ಮೇಂದ್ರ ಅವರನ್ನ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

79 ವರ್ಷದ ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ದಿನಗಳಿಂದ ಕ್ಷೀಣಿಸಿದೆ. 2010 ರಲ್ಲೂ, ಹಠಾತ್ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರಿಗೆ ಚಂದೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಧರ್ಮೇಂದ್ರ ಬಣ್ಣ ಹಚ್ಚುವುದನ್ನೂ ಕಡಿಮೆ ಮಾಡಿದ್ದರು.

Bollywood Actor Dharmendra unwell; hospitalized in Mumbai

ತಮ್ಮ ಮಕ್ಕಳಿಗಾಗಿ 'ಯಮ್ಲಾ ಪಗ್ಲಾ ದೀವಾನಾ' ಸೀರೀಸ್ ನಲ್ಲಿ ಅಭಿನಯಿಸಿದ ಧರ್ಮೇಂದ್ರ ರಿಯಾಲಿಟಿ ಶೋವೊಂದಕ್ಕೆ ತೀರ್ಪುಗಾರರಾಗಿದ್ದರು. ಸದಾ ಹುರುಪಿನಿಂದಿರುತ್ತಿದ್ದ ಧರ್ಮೇಂದ್ರ ಈಗ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದಾರೆ. [ಕುಡಿದು ಕುಡಿದೇ ಹಾಳಾದೆ: ಹಿರಿಯ ನಟನ ಪ್ರಲಾಪ]

'ಚುಪ್ಕೆ ಚುಪ್ಕೆ', 'ಶೋಲೆ', 'ಫೂಲ್ ಔರ್ ಪಥರ್', 'ಜುಗ್ನು', 'ದೋಸ್ತ್' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದವರು ಧರ್ಮೇಂದ್ರ. ಆದಷ್ಟು ಬೇಗ ಧರ್ಮೇಂದ್ರ ಗುಣಮುಖರಾಗಲಿ ಅನ್ನೋದು ಎಲ್ಲರ ಆಶಯ. (ಏಜೆನ್ಸೀಸ್)

English summary
Bollywood Actor Dharmendra has been admitted to Breach Candy Hospital in Mumbai today. According to the reports, The Actor was not feeling well and he complained of extreme weakness.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada