For Quick Alerts
  ALLOW NOTIFICATIONS  
  For Daily Alerts

  ದಿಗ್ವಿಜಯ್ ಸಿಂಗ್ ಮದುವೆಗೆ ಸನ್ನಿ ಲಿಯೋನ್ ಬಟ್ಟೆ ಬಿಚ್ಚಬೇಕಂತೆ!

  |

  ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮದುವೆಗೂ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ನಗ್ನ ನರ್ತನಕ್ಕೂ ಎಲ್ಲಿಂದೆಲ್ಲಿ ಸಂಬಂಧ.

  ಲೋಕಸಭಾ ಚುನಾವಣೆಯ ಈ ಹೊಸ್ತಿಲಲ್ಲಿ ವಿರೋಧ ಪಕ್ಷದವರ ಕರಾಮತ್ತು ಇದಾಗಿರಬಹುದಾ, ಪುಕ್ಸಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಗಾಳಿಸುದ್ದಿಯನ್ನು ವಿರೋಧಿಗಳು ಹರಿಯ ಬಿಟ್ಟಿರಬಹುದಾ ಎಂದು ನೀವು ಅಂದುಕೊಂಡರೆ ಅದು ತಪ್ಪು.

  ವಿಚಾರ ಏನಂದರೆ, ಬಾಯಿ ತೆಗೆದರೆ ವಿವಾದಕಾರಿ ಹೇಳಿಕೆಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟ ಕಮ್ ನಿರ್ದೇಶಕ ಕಮಲ್ ರಶೀದ್ ಖಾನ್ ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೀಡಾಗಿದೆ. ಕಮಲ್ ಖಾನ್ ಹೇಳಿಕೆಯಿಂದ ಸನ್ನಿ ಲಿಯೋನ್ ಮಾತ್ರ ಫುಲ್ ಗರಂ ಆಗಿದ್ದಾರೆ. (ಸನ್ನಿ ಹಾಟ್ ಚಿತ್ರ ವೆಬ್ ಸೈಟಿನಲ್ಲಿ ಲಗ್ಗೆ)

  ಟಿವಿ ಪತ್ರಕರ್ತೆ ಅಮೃತಾ ರೈ ಜೊತೆಗೆ ನನಗೆ ಸಂಬಂಧವಿರುವುದು ನಿಜ. ನಾನು ಆಕೆಯನ್ನು ಮದುವೆಯಾಗುತ್ತಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಕಮಲ್ ಖಾನ್ ಆಡಬಾರದ ಮಾತನ್ನು ಆಡಿ ಬಿಟ್ಟಿದ್ದಾರೆ.

  ಕಮಲ್ ಖಾನ್ ಹೇಳಿದ್ದೇನು? ಮುಂದೆ ಓದಿ..

  ದಿಗ್ವಿಜಯ್ ಸಿಂಗ್ ಮದುವೆ

  ದಿಗ್ವಿಜಯ್ ಸಿಂಗ್ ಮದುವೆ

  ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಅವರ ಟ್ವೀಟ್ ನಿಂದ ತಿಳಿಯಿತು. ಬಾಲಿವುಡ್ ನಟಿ ಸನ್ನಿ ಲಿಯೋನ್ ದಿಗ್ವಿಜಯ್ ಮದುವೆಗೆ ಬಟ್ಟೆ ಬಿಚ್ಚಿ ಕುಣಿಯಲು ಮುಂದಾದರೆ ಸನ್ನಿಗೆ ಕಾಂಗ್ರೆಸ್ ಪಕ್ಷ ಏನಾದರೂ ಕೊಡುಗೆ ನೀಡಬೇಕು - ಕಮಲ್ ಖಾನ್

  ಒಂದು ಕೋಟಿ

  ಒಂದು ಕೋಟಿ

  ದಿಗ್ವಿಜಯ್ ಸಿಂಗ್ ಮದುವೆ ಆರಕ್ಷತೆ ಪಾರ್ಟಿಯಲ್ಲಿ ಸನ್ನಿ ಬಟ್ಟೆ ಬಿಚ್ಚಿ ಕುಣಿದರೆ ಕಾಂಗ್ರೆಸ್ ಹೈಕಮಾಂಡ್ ತನ್ನ ಪಾರ್ಟಿ ಫಂಡಿನಿಂದ ಆಕೆಗೆ ಒಂದು ಕೋಟಿ ಕೊಡಲು ಸಿದ್ದವಿದೆಯಾ ? ಕಾಂಗ್ರೆಸ್ ಸಿದ್ದವಿಲ್ಲದಿದ್ದರೆ ನಾನು ಒಂದು ಕೋಟಿ ನೀಡಲು ಸಿದ್ದ ಎಂದು ಕಮಲ್ ಖಾನ್ ಟ್ವೀಟ್ ಮಾಡಿದ್ದಾರೆ.

  ಕಾಂಗ್ರೆಸ್ ಗಪ್ ಚುಪ್

  ಕಾಂಗ್ರೆಸ್ ಗಪ್ ಚುಪ್

  ಬಾಲಿವುಡ್ ನಟನ ಈ ವಿವಾದಕಾರಿ ಹೇಳಿಕೆಗೆ ಕಾಂಗ್ರೆಸ್ ಇದುವರೆಗೆ ಏನೂ ಪ್ರತಿಕ್ರಿಯಿಸಿಲ್ಲ. ಈ ಹಿಂದೆ ಸನ್ನಿ ಲಿಯೋನ್ ಬಗ್ಗೆ ಲೇವಡಿ ಮಾಡಿದ್ದ ದಿಗ್ವಿಜಯ್ ಸಿಂಗ್ ಕೂಡಾ ಇದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

  ಸನ್ನಿ ಕೆಂಡಾಮಂಡಲ

  ಸನ್ನಿ ಕೆಂಡಾಮಂಡಲ

  ಕಮಲ್ ಖಾನ್ ಹೇಳಿಕೆಯಿಂದ ಸಿಟ್ಟಾಗಿರುವ ಸನ್ನಿ ಲಿಯೋನ್ ತನ್ನ ವಕೀಲರ ಮೂಲಕ ನೋಟೀಸ್ ನೀಡಿದ್ದು ಮುಂಬೈ ಬಾಂದ್ರಾ ಪೊಲೀಸ್ ಸ್ಟೇಷನ್ ಮೆಟ್ಟಲೇರಲಿದ್ದೇನೆಂದು ಟ್ವೀಟ್ ಮಾಡಿದ್ದಾರೆ.

  ಕಮಲ್ ಖಾನ್ ಕಿರಿಕಿರಿ ಹೊಸದೇನಲ್ಲ

  ಕಮಲ್ ಖಾನ್ ಕಿರಿಕಿರಿ ಹೊಸದೇನಲ್ಲ

  ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಗ್ಗೆ ಈ ಹಿಂದೆ ಕೂಡಾ ಕಮಲ್ ಖಾನ್ ಬೇಕಾಬಿಟ್ಟಿ ಹೇಳಿಕೆ ನೀಡಿದ್ದರು. ರೇಪ್ ಅಪರಾಧವಲ್ಲ, ಬದಲಿಗೆ ಅದು ಅಚಾನಕ್ ಆಗಿ ನಡೆಯುವ ಕಾಮ ಪ್ರಕ್ರಿಯೆ ಎಂದು ಸನ್ನಿ ಟ್ವೀಟಿಗೆ ಕಮಲ್ ಖಾನ್ ಸಮಾ ತರಾಟೆ ತೆಗೆದುಕೊಂಡಿದ್ದರು. ಕಮಲ್ ಖಾನ್ ಈ ಹಿಂದೆ ರಜನೀಕಾಂತ್ ಮತ್ತು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ವಿರುದ್ದ ಕೂಡಾ ಮಾತನಾಡಿದ್ದರು.

  English summary
  Bollywood actor Kamal Khan ready to pay One Crore to Sunny Leone if she ready to perform strip show in AICC General Secretary Digvijay Singh marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X