»   » ನಟಿ ಐಶ್ವರ್ಯಾ ರೈ ಆಸ್ತಿ ಎಷ್ಟಿದೆ ಗೊತ್ತಾ?

ನಟಿ ಐಶ್ವರ್ಯಾ ರೈ ಆಸ್ತಿ ಎಷ್ಟಿದೆ ಗೊತ್ತಾ?

By Srinath
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡತಿ, ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಪ್ರಮಾಣಬದ್ಧವಾಗಿ 240 ಕೋಟಿ ರೂ ಆಸ್ತಿಯನ್ನು ಹೊಂದಿದ್ದಾರೆ. ಇದು ಒಂದು ವರ್ಷದ ಹಿಂದಿನ ಲೆಕ್ಕ. ಅದಾದನಂತರ ಆಕೆಯ ಆಸ್ತಿ ಎಷ್ಟು ವೃದ್ಧಿಸಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಷಯ. ಏಕೆಂದರೆ ಅಧಿಕೃತವಾಗಿ ಇನ್ನೂ ಅದರ ಲೆಕ್ಕಾಚಾರ ಹಾಕಲಾಗಿಲ್ಲ.

  ಐಶ್ವರ್ಯಾ ರೈ, ಬಾಲಿವುಡ್ ಸಿನಿರಂಗದ ಅತ್ಯಂತ ಯಶಸ್ವಿ ನಟಿ. ವಿಶ್ವದ ಅತಿ ಸುಂದರಿಯೂ ಹೌದು. ಒಂದು ದಶಕದ ಹಿಂದೆ 1994ರಲ್ಲೇ ಈ ಪಟ್ಟವನ್ನು ಅವರು ಅಲಂಕರಿಸಿದ್ದರು.

  ಆಕೆಯ ಆಸ್ತಿ 240 ಕೋಟಿ ರೂ. ಅಂದರೆ ಆಕೆ ತನ್ನ ನಟನಾ ವೃತ್ತಿಯಿಂದಷ್ಟೇ ಇದನ್ನೆಲ್ಲ ಗಳಿಸಿದ್ದಲ್ಲ. ಮಾಡೆಲಿಂಗ್, ಜಾಹೀರಾತು ಮುಂತಾದವುಗಳಿಂದಲೂ ಆಕೆಯ ಆಸ್ತಿ ಪ್ರಮಾಣಬದ್ಧವಾಗಿ ಏರಿದೆ.

  ನಟಿಸಿದ ಸಿನಿಮಾಗಳ ಸಂಖ್ಯೆ ಐವತ್ತೂ ಇಲ್ಲ

  ಹಿಂದಿ, ತಮಿಳು ಮತ್ತು ಬೆಂಗಾಲಿ ಭಾಷೆಗಳಲ್ಲಿ ಚೆಲುವೆ ಐಶ್ವರ್ಯಾ ರೈ 40 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕಾರು ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿದ್ದಾರೆ. ದೇವದಾಸ್, ಗುರು, ತಾಲ್, ಹಮ್ ದಿಲ್ ದೇ ಚುಕೆ ಸನಮ್, ಧೂಮ್, ಜೋಧಾ ಅಕ್ಬರ್ .... ಐಶ್ವರ್ಯಾರ ಗಮನಾರ್ಹ ಚಿತ್ರಗಳು.

  ಐಶ್ವರ್ಯಾ ಜೀವನಘಟ್ಟ:

  ಕೃಷ್ಣರಾಜ ರೈ ಮತ್ತು ಬೃಂದಾ ದಂಪತಿಯ ಪುತ್ರಿಯಾಗಿ ಮಂಗಳೂರಿನಲ್ಲಿ 1973ರ ನವೆಂಬರ್ 1 ರಂದು ಐಶ್ವರ್ಯಾ ಜನಿಸಿದರು. 2007ರ ಏಪ್ರಿಲ್ 20ರಂದು ಬಾಲಿವುಡ್ ದಂತಕತೆ ಅಮಿತಾಭ್ ಬಚ್ಚನ್ ಅವರ ಪುತ್ರ, ನಟ ಅಭಿಷೇಕ್ ಬಚ್ಚನ್ ಅವರನ್ನು ವರಿಸಿದರು. ಅವರಿಗೀಗ ಆರಾಧ್ಯಾ ಎಂಬ ಮುದ್ದಿನ ಮಗಳೂ ಇದ್ದಾಳೆ.

  ಆದಾಯದ ಮೂಲಗಳು

  Longines ಐಷಾರಾಮಿ ಗಡಿಯಾರಕ್ಕೆ ಐಶ್ವರ್ಯಾ ರೈ ಬಚ್ಚನ್ ಸುಮಾರು ವರ್ಷಗಳಿಂದ brand ambassadress. ಇನ್ನು ಲಕ್ಸ್, ಚಿನ್ನಾಭರಣ ಆ ಜಾಹೀರಾತು- ಈ ಜಾಹೀರಾತು ಅಂತ ಹತ್ತಾರು ಆದಾಯದ ಮೂಲಗಳು.

  ಐಶ್ವರ್ಯಾ ಆಸ್ತಿ ಪ್ರಮಾಣಬದ್ಧವಾಗಿ ಏರುತ್ತಿದೆ

  ಪತಿ ಅಭಿಷೇಕ್ ಬಚ್ಚನ್ ಅವರಿಗಿಂತ ಐಶ್ವರ್ಯಾ ರೈ ದುಡಿಮೆ/ಗಳಿಕೆಯೇ ಅತಿ ಹೆಚ್ಚು

  ಐಶ್ವರ್ಯಾ ಯಾವ ಉಡುಪಿನಲ್ಲಿ ಹೆಚ್ಚು ಆಕರ್ಷಕ?

  ಐಶ್ವರ್ಯಾ ರೈ ಬಚ್ಚನ್ ಮಿಂಚುವುದು Ellie Saab, Versace, Bottega Veneta, Chopard ಮತ್ತು Armani Prive ಉಡುಪಿನಲ್ಲೇ.

  ದಪ್ಪಗಾಗಿ, ಕೆಂಗಣ್ಣಿಗೆ ಗುರಿಯಾದ ಐಶ್ವರ್ಯಾ

  ಮದುವೆಯಾಗಿ, ಗರ್ಭಿಣಿಯಾಗಿದ್ದಾಗ ಐಶ್ವರ್ಯಾ ರೈ ಬಚ್ಚನ್ ಅವರು ಬಾಲಿವುಡ್ ಲೋಕಕ್ಕೆ ವಿಪರೀತ ಎನಿಸುವಷ್ಟು ದಪ್ಪಗಾಗಿ ನಿರಾಶೆಗೊಳಿಸಿದ್ದರು.

  ಆರಾಧ್ಯಾಗಾಗಿ ಭವ್ಯ ಬಂಗಲೆ

  ದುಬೈ ಮತ್ತು ಮುಂಬೈಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರುಗಳು ತಮ್ಮ ಮುದ್ದಿನ ಕುವರಿ ಆರಾಧ್ಯಾಗಾಗಿ ಭವ್ಯ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯಿದೆ.

   

  English summary
  Bollywood- Actor Model Aishwarya Rai Bachchan assets multiply. Ash holds a property of net worth Rs. 240 crore till 2012, which has been generated not only from her acting career but also the endorsements she appears in. She has worked in as many as 40 movies in three major Indian regional languages- Hindi, Tamil and Bengali, apart from a couple of English movies.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more