For Quick Alerts
  ALLOW NOTIFICATIONS  
  For Daily Alerts

  ಹುಡುಗಿ ವಿಚಾರಕ್ಕೆ 25 ಜನರಿಂದ ಒದೆ ತಿಂದಿದ್ದ ಖ್ಯಾತ ನಟ ರಾಜ್ ಕುಮಾರ್ ರಾವ್

  |

  ಬಾಲಿವುಡ್ ಖ್ಯಾತ ನಟ ರಾಜ್ ಕುಮಾರ್ ರಾವ್ ಯಾವಾಗಲು ನಟನಾಗಬೇಕೆಂದು ಕನಸು ಕಂಡಿದ್ದವರು. ಅವರು ಯಾವಾಗಲು ತನ್ನ ಕನಸು ನನಸುಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಅದರಂತೆ ಇಂದು ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಈ ಯಶಸ್ಸನ್ನು ಕಾಣುವ ಮೊದಲು ರಾಜ್ ಕುಮಾರ್ ಶಾಲೆಯ ದಿನಗಳಲ್ಲಿ ಕಿಡಿಗೇಡಿ ತನವನ್ನು ಹೊಂದಿದ್ದರು ಎನ್ನುವ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.

  ಅಂದಹಾಗೆ ಇಂದು ರಾಜ್ ಕುಮಾರ್ ರಾವ್ ಅವರ ಹುಟ್ಟುಹಬ್ಬ. 37ನೇ ವಸಂತಕ್ಕೆ ಕಾಲಿಟ್ಟಿರುವ ನಟ ರಾಜ್ ಕುಮಾರ್ ಹಳೆಯ ಇಂಟ್ರಸ್ಟಿಂಗ್ ಘಟನೆಯನ್ನು ಮೆಲುಕು ಹಾಕಲಾಗಿದೆ. ರಾಜ್ ಕುಮಾರ್ ರಾವ್, ಶಾಲಾದಿನಗಳಲ್ಲಿ ಗೂಂಡ ಆಗಿದ್ದರಂತೆ. 11ನೇ ತರಗತಿಯಲ್ಲಿದ್ದಾಗ ನಟನಾಗಬೇಕೆಂದು ನಿರ್ಧರಿಸಿ ಬದಲಾದರಂತೆ. ರಾಜ್ ಕುಮಾರ್ ರಾವ್, ಶಾರುಖ್​ ಖಾನ್ ಅವರ ಅಭಿಮಾನಿ ಆಗಿದ್ದರು. 'ಕುಚ್​ ಕುಚ್ ಹೋತಾ ಹೈ' ಸಿನಿಮಾ ಶೈಲಿಯಲ್ಲೇ ಕಾಲೇಜಿನ ಬಾಸ್ಕೆಟ್​ ಬಾಲ್​ ಮೈದಾನದಲ್ಲಿ ಅವರು ಹುಡುಗಿಯೊಬ್ಬಳನ್ನು ನೋಡಿ ಫಿದಾ ಆದರು. ಮನದಲ್ಲಿ ಅವರಿಗೆ ಪ್ರೀತಿ ಕೂಡ ಚಿಗುರೊಡೆದಿತ್ತು. ಆಕೆಯ ಜೊತೆ ಅವರು ಡೇಟಿಂಗ್​ ಮಾಡಲು ಶುರು ಮಾಡಿದರು. ಆಗಲೇ ಶುರುವಾಗಿದ್ದು ಕಿರಿಕ್​.

  ರಾಜ್ ಕುಮಾರ್ ರಾವ್ ಪ್ರೀತಿಸಿದ ಆ ಹುಡುಗಿಗೆ ಈಗಾಗಲೇ ಒಬ್ಬ ಬಾಯ್​ ಫ್ರೆಂಡ್​ ಇದ್ದ. ರಾಜ್​ಕುಮಾರ್​ ಜೊತೆ ಆಕೆ ಸುತ್ತುವುದನ್ನು ನೋಡಿ ಆತ 25 ಹುಡುಗರನ್ನು ಕರೆದುಕೊಂಡು ಬಂದು ರಾಜ್​ಕುಮಾರ್​ಗೆ ಥಳಿಸಲು ಶುರುಮಾಡಿದ. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ರಾಜ್​ಕುಮಾರ್​ಗೆ ಮುಖದ ಬಗ್ಗೆ ಚಿಂತೆಯಾಗಿತ್ತು. 'ದಯವಿಟ್ಟು ಮುಖಕ್ಕೆ ಹೊಡೆಯಬೇಡಿ. ನಾನು ಸಿನಿಮಾ ನಟ ಆಗಬೇಕು' ಎಂದು ಕೂಗಿದ್ದರಂತೆ.

  ಅಂದಹಾಗೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್ ಕುಮಾರ್ ರಾವ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂದು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ರಾಜ್ ಕುಮಾರ್ ರಾವ್ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

  ಲವ್ ಸೆಕ್ಸ್ ಔರ್ ಧೋಖಾ ಸಿನಿಮಾ ಮೂಲಕ ಪದಾರ್ಪಣೆ ಮಾಡಿದರು. ಗ್ಯಾಂಗ್ಸ್ ಆಫ್ ವಾಸೆಪುರ್, ಶಾಹಿದ್, ಸಿಟಿಲೈಟ್ಸ್, ಅಲಿಘರ್, ಟ್ರ್ಯಾಪ್ಡ್, ಬರೇಲಿ ಕಿ ಬರ್ಫಿ, ನ್ಯೂಟನ್ ಮತ್ತು ಒಮೆರ್ಟಾ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್ ಕುಮಾರ್ ರಾವ್ ವೈಟ್ ಟೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಾಜ್ ಕುಮಾರ್ ರಾವ್ ಬ್ಯುಸಿಯಾಗಿದ್ದಾರೆ. ಹಮ್ ದೋ ಹಮಾರೆ ದೋ, ಬದೈ ದೋ, ಮೋನಿಕಾ ಓ ಮೈ ಡಾರ್ಲಿಂಗ್ ಸೇರಿದಂತೆ ಅನೇಕ ಸಿನಿಮಾಗಳು ರಾಜ್ ಕುಮಾರ್ ರಾವ್ ಬಳಿ ಇವೆ.

  English summary
  Bollywood Actor Rajkummar Rao once beaten by 25 boys in his college.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X