»   » ನಟ ಶಾರುಖ್ ಖಾನ್ ಬಳಿ ಪ್ರೈವೇಟ್ ಜೆಟ್ ಇದ್ಯಾ.?

ನಟ ಶಾರುಖ್ ಖಾನ್ ಬಳಿ ಪ್ರೈವೇಟ್ ಜೆಟ್ ಇದ್ಯಾ.?

Posted By:
Subscribe to Filmibeat Kannada

ಬಾಲಿವುಡ್ ನಟ ಶಾರುಖ್ ಖಾನ್ ಗೆ ಏನ್ ಕಮ್ಮಿ.? ಒಂದು ಸಿನಿಮಾ ಇರಲಿ ಅಥವಾ ಜಾಹೀರಾತು ಆಗಿರಲಿ... ಅದಕ್ಕೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವ ನಟ ಶಾರುಖ್ ಖಾನ್ ಅವರ ಬಳಿ ಪ್ರೈವೇಟ್ ಜೆಟ್ ಇರಬಹುದು ಅಲ್ವಾ.?

ಟ್ರೆಂಡ್ ಸೆಟರ್ ಆಗಿರುವ ಶಾರುಖ್ ಖಾನ್ ಟಾಟ್ಯೂ ಹಾಕಿಸಿಕೊಂಡಿದ್ದಾರಾ.? ಶಾರುಖ್ ಖಾನ್ ರವರ ನಿಜ ನಾಮ ಏನು.?.... ಇಂತಹ ಹಲವು ಪ್ರಶ್ನೆಗಳು ಆಗಾಗ ಹಲವರ ತಲೆಗೆ ಹುಳ ಬಿಟ್ಟಂಗಾಗಬಹುದು. ಆದ್ರೆ ಉತ್ತರ ಸಿಗುವುದು ಎಲ್ಲಿ.?

'ಕಿಂಗ್ ಖಾನ್' ಶಾರುಖ್ ಫೋನ್ ನಂಬರ್ ನಿಮ್ಗೊತ್ತಾ.? ಗೊತ್ತಿಲ್ಲ ಅಂದ್ರೆ ಇಲ್ಲಿ ನೋಡಿ...

ಎಲ್ಲದಕ್ಕೂ ಗೂಗಲ್ ಅವಲಂಬಿಸಿರುವ ಕೆಲವರು ಇಂತಹ ಪ್ರಶ್ನೆಗಳನ್ನ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಹಾಗೆ ಶಾರುಖ್ ಖಾನ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲಾಗಿರುವ ಕೆಲ ಆಯ್ದ ಪ್ರಶ್ನೆಗಳಿಗೆ ಸ್ವತಃ ಶಾರುಖ್ ಖಾನ್ ರವರೇ ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ. ಆ ಮೂಲಕ ಅನೇಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ಶಾರುಖ್. ಮುಂದೆ ಓದಿರಿ...

ಶಾರುಖ್ ಖಾನ್ ಟಾಟ್ಯೂ ಹಾಕಿಸಿಕೊಂಡಿದ್ದಾರಾ.?

ಶಾರುಖ್ ಖಾನ್ ಬಗ್ಗೆ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಪ್ರಶ್ನೆಗಳ ಪೈಕಿ ಇದೂ ಒಂದು. ವಾಸ್ತವ ಏನು ಅಂದ್ರೆ, ಶಾರುಖ್ ಗೆ ಟಾಟ್ಯೂ ಹಾಕಿಸಿಕೊಳ್ಳುವುದು ಅಂದ್ರೆ ಭಯ. ಹೀಗಾಗಿ ಅವರು ಟಾಟ್ಯೂ ಹಾಕಿಸಿಕೊಂಡಿಲ್ಲ.

ಶಾರುಖ್ ಬಳಿ ಪ್ರೈವೇಟ್ ಜೆಟ್ ಇದ್ಯಾ.?

ನಟ ಶಾರುಖ್ ಬಳಿ ಪ್ರೈವೇಟ್ ಜೆಟ್ ಇಲ್ಲ. ಆದ್ರೆ, ಪ್ರೈವೇಟ್ ಜೆಟ್ ಒಂದನ್ನ ಖರೀದಿಸಲು ಶಾರುಖ್ ಪ್ರಯತ್ನ ಪಡುತ್ತಿದ್ದಾರೆ.

ಶಾರುಖ್ ಫೋನ್ ನಂಬರ್ ಏನು.?

''5559960321... ಇದು ನನ್ನ ಫೋನ್ ನಂಬರ್. ಮಧ್ಯರಾತ್ರಿ ನಂತರ ಯಾವಾಗ ಬೇಕಾದರೂ ನನಗೆ ಫೋನ್ ಮಾಡಿ, ರಿಸೀವ್ ಮಾಡುತ್ತೇನೆ. ಇಲ್ಲ ಅಂದ್ರೆ ಮೆಸೇಜ್ ಮಾಡಿ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡುತ್ತೇನೆ'' ಎಂದು ಉತ್ತರಿಸಿದ್ದಾರೆ ಶಾರುಖ್ ಖಾನ್.

ಶಾರುಖ್ ಖಾನ್ ನಿಜನಾಮ ಏನು.?

''ಶಾರುಖ್ ಖಾನ್... ಇದೇ ನನ್ನ ನಿಜನಾಮ. ಬೇರೆ ಯಾವ ಹೆಸರನ್ನೂ ನನಗೆ ಇಟ್ಟಿಲ್ಲ'' ಎಂದಿದ್ದಾರೆ ಶಾರುಖ್.

ವಿಡಿಯೋ ನೋಡಿ....

ಗೂಗಲ್ ಸರ್ಚ್ ನಲ್ಲಿ ಶಾರುಖ್ ಖಾನ್ ಬಗ್ಗೆ ಹುಡುಕಲಾಗಿರುವ ಅತಿ ಹೆಚ್ಚು ಪ್ರಶ್ನೆಗಳಿಗೆ ನಟ ಶಾರುಖ್ ಉತ್ತರ ನೀಡಿರುವ ವಿಡಿಯೋ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ ನೋಡಿ...

English summary
Bollywood Actor Shahrukh Khan answers the most googled questions.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X