Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿಹಿ ಸುದ್ದಿ ಕೊಟ್ಟ ಬಿಪಾಶಾ ಬಸು ಮತ್ತು ಕರಣ್ ಸಿಂಗ್!
ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ. ಮದುವೆ ಬಳಿಕ ಈ ಜೋಡಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಇಲ್ಲ. ನಟನೆಯಿಂದ ಇಬ್ಬರೂ ದೂರವೇ ಉಳಿದಿದ್ದಾರೆ.
ಮದುವೆ ವಿಚಾರದಲ್ಲಿ ಸುದ್ದಿ ಆಗಿದ್ದ ಈ ಜೋಡಿ, ಬಳಿಕ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಈಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡುವ ಮೂಲಕ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಈ ಜೋಡಿಯ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಸಲ್ಮಾನ್
ಖಾನ್ಗೆ
ಕಿಚ್ಚ
ಸುದೀಪ್
ಆಕ್ಷನ್
ಕಟ್
ಹೇಳೋದ್ಯಾವಾಗ?
ಆ ಸಿಹಿ ಸುದ್ದಿ ಮತ್ತೇನು ಅಲ್ಲ, ಈ ಜೋಡಿಯ ಮುದ್ದು ಮಗುವನ್ನು ಸ್ವಾಗತಿಸಲಿದೆ ಎಂಬುದು. ಹೌದು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಂದೆ-ತಾಯಿ ಆಗ್ತಿದ್ದಾರಂತೆ. ಈ ವಿಚಾರ ಹೆಚ್ಚಾಗಿ ಚರ್ಚೆ ಆಗ್ತಿದೆ. ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದ್ದಾರೆ.

ಬಿಪಾಶಾ- ಕರಣ್ ದಾಂಪತ್ಯಕ್ಕೆ 7 ವರ್ಷ!
ಬಿಪಾಶಾ ಬಸು ಮತ್ತು ಕರಣ್ ಮದುವೆ ಆಗಿ 7 ವರ್ಷಗಳು ಕಳೆದಿವೆ. 7 ವರ್ಷಗಳ ನಂತರ ಈ ಸೆಲೆಬ್ರಿಟಿ ದಂಪತಿಗಳು ಪೋಷಕರಾಗಲಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ 2015ರಲ್ಲಿ ಈ ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ಅಲೋನ್' ಚಿತ್ರದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದ ಇವರ ನಡುವೆ ಪ್ರೇಮಾಂಕುರವಾಗಿ ಮದುವೆ ಆದರು.
"ನನಗೇನಾದರೂ
ಆದರೆ
ಅವರನ್ನು
ಸುಮ್ಮನೆ
ಬಿಡಬೇಡಿ":
ಹೊಸ
ಬಾಂಬ್
ಸಿಡಿಸಿದ
ತನುಶ್ರೀ
ದತ್ತಾ!

ಮೊದಲ ಮಗುವಿನ ನಿರೀಕ್ಷೆಯಲ್ಲಿ!
ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರಂತೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ಅವರ ಆಪ್ತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಇಬ್ಬರು ಪೋಷಕರಾಗುವ ಬಗ್ಗೆ ತುಂಬಾ ಉತ್ಸುಕರಾಗಿದ್ದಾರಂತೆ. ಈ ಸುದ್ದಿ ಬಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ದಂಪತಿಗಳಿಬ್ಬರೂ ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ.

ನಟನೆ ನಿಲ್ಲಿಸಿದ ಜೋಡಿ!
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇಬ್ಬರೂ ಪರದೆಯ ಮೇಲೆ ದೀರ್ಘಕಾಲ ಕಾಣಿಸಿಕೊಂಡಿಲ್ಲ. ಕರಣ್ ಸಿಂಗ್ ಕೊನೆಯದಾಗಿ ಟಿವಿ ಧಾರಾವಾಹಿ 'ಕುಬೂಲ್ 2.0'ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಪಾಶಾ 'ಡೇಂಜರಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮತ್ತೆ ನಟನೆಗೆ ಇಳಿದಿಲ್ಲ ಈ ದಂಪತಿ. ಇನ್ನು ಇತ್ತೀಚೆಗಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಕೊಂಡಿದ್ದರು. ಆಗಲೇ ಅಭಿಮಾನಿಗಳು ಮಗುವಿನ ಬಗ್ಗೆ ಪ್ರಶ್ನೆ ಮಾಡಿದ್ದರು.

ಬಿಪಾಶಾ ಜೊತೆ ಕರಣ್ 3ನೇ ಮದುವೆ!
ಇನ್ನು ನಟ ಕರಣ್ ಸಿಂಗ್ ಗ್ರೋವರ್, ಬಿಪಾಶಾ ಬಸು ಕೈ ಹಿಡಿಯುವ ಮುನ್ನ 2 ಮದುವೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಇಬ್ಬರಿಂದಲೂ ವಿಚ್ಛೇದನ ಪಡೆದ ಬಳಿಕಾ ಬಿಪಾಶಾ ಬಸು ಜೊತೆಗೆ 3ನೇ ಮದುವೆ ಆಗಿದ್ದಾರೆ. ಈ ಜೋಡಿ 2016ರಲ್ಲಿ ಮದುವೆ ಆಗಿದ್ದು. ಸದ್ಯ ತಮ್ಮ ಕುಟುಂಬವನ್ನು ಮಗುವಿನ ಜೊತೆಗೆ ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ.