For Quick Alerts
  ALLOW NOTIFICATIONS  
  For Daily Alerts

  "ತಾಯಿಯಾದ ಬಳಿಕ ನನ್ನ ದೇಹವು ಮೊದಲಿನಂತಿಲ್ಲ" ಎಂದ ನಟಿ ಕಾಜಲ್‌

  |

  ಬಾಲಿವುಡ್‌ ನಟಿ ಕಾಜಲ್‌ ಅಗರ್ವಾಲ್‌ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿನ ತಾಯಿಯಾಗಿದ್ದ ಕಾಜಲ್‌ ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. 2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದ ಕಾಜಲ್ ಅಗರ್ವಾಲ್, ಏಪ್ರಿಲ್‌ 20, 2022ರಂದು ಗುಂಡು ಮಗುವಿಗೆ ಜನ್ಮ ನೀಡಿದ್ದರು. ಈವರೆಗೂ ತಮ್ಮ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಕಾಜಲ್‌ ಮತ್ತೆ ಶೂಟಿಂಗ್‌ ಆರಂಭಿಸಿದ್ದಾರೆ.

  ಕಾಜಲ್‌ ಮೊದಲೇ ಒಪ್ಪಿಕೊಂಡಂತೆ, ಶಂಕರ್‌ ನಿರ್ದೇಶನದ, ಬಹು‍ಭಾಷಾ ನಟ ಕಮಲ್‌ ಹಾಸನ್‌ ನಾಯಕ ನಟರಾಗಿ ನಟಿಸುತ್ತಿರುವ 'ಇಂಡಿಯನ್‌ 2' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ ಬಂದಿರುವ ವಿಚಾರವನ್ನು ತಮ್ಮ ಫ್ಯಾನ್ಸ್‌ ಜೊತೆಗೆ ಹಂಚಿಕೊಂಡಿರುವ ಕಾಜಲ್‌, ಜೊತೆಗೆ ತಾಯಿಯಾದ ಬಳಿಕ ತಮ್ಮ ದೇಹದಲ್ಲಾದ ಬದಲಾವಣೆಗಳ ಬಗ್ಗೆನೂ ಬರೆದುಕೊಂಡಿದ್ದಾರೆ.

  'ಆಚಾರ್ಯ' ಸಿನಿಮಾಕ್ಕೆ ಆಗ ಬೇಡವಾಗಿದ್ದ ಕಾಜಲ್‌ ಸೋತ ಬಳಿಕ ಬೇಕಾಗಿದೆ ಏಕೆ?'ಆಚಾರ್ಯ' ಸಿನಿಮಾಕ್ಕೆ ಆಗ ಬೇಡವಾಗಿದ್ದ ಕಾಜಲ್‌ ಸೋತ ಬಳಿಕ ಬೇಕಾಗಿದೆ ಏಕೆ?

  ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕುದುರೆ ಸವಾರಿ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ಕಾಜಲ್‌ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ತುಂಬಾ ಉತ್ಸಾಹ ಹಾಗೂ ಉತ್ಸುಕಳಾಗಿ ಚಿತ್ರೀಕರಣಕ್ಕೆ ವಾಪಸ್‌ ಆಗಿದ್ದೇನೆ. ಹೆರಿಗೆಯಾದ ನಾಲ್ಕು ತಿಂಗಳಲ್ಲೇ ಕೆಲಸಕ್ಕೆ ಮರಳಿದ್ದೇನೆ. ಆದರೆ ನನಗೆ ನನ್ನ ಜೀವನವನ್ನು ಮೊದಲಿನಿಂದ ಆರಂಭಿಸಬೇಕು ಎಂಬುದು ಅರಿವಾಗಿದೆ. ನನ್ನ ದೇಹವು ಮೊದಲಿನಂತಿಲ್ಲ. ತಾಯಿಯಾಗುವ ಮೊದಲು ನಾನು ಅತಿಯಾದ ಕೆಲಸವನ್ನು ಸಹಿಸಿಕೊಳ್ಳುತ್ತಿದೆ. ಅತಿಯಾದ ದೈಹಿಕ ಚಟುವಟಿಕೆ ಮಾಡುತ್ತಿದೆ. ಜೊತೆಗೆ ನಾನು ಜಿಮ್‌ಗೂ ಹೋಗುತ್ತಿದ್ದೆ. ಆದರೆ ಈಗ ನನ್ನ ದೇಹದ ಸ್ಥಿತಿ ಮೊದಲಿನಂತಿಲ್ಲ ಎಂದು ನಟಿ ಬರೆದುಕೊಂಡಿದ್ದಾರೆ.

  ಮಗುವಾದ ನಂತರ ನನ್ನ ಮೊದಲಿನ ಶಕ್ತಿಯನ್ನು ಮರಳಿ ಪಡೆಯಲು ಕಷ್ಟವಾಗುತ್ತಿದೆ. ಕುದುರೆ ಏರುವುದು, ಸವಾರಿ ಮಾಡುವುದು ದೊಡ್ಡ ಕೆಲಸದಂತೆ ಕಾಣುತ್ತಿದ್ದೆ. ಇಷ್ಟು ಸುಲಭವಾದ ಕೆಲಸಗಳನ್ನೇ ನನ್ನ ದೇಹ ಸಹಿಸುತ್ತಿಲ್ಲ. ನಮ್ಮ ದೇಹದ ಸ್ಥಿತಿ ಬದಲಾಗಬಹುದು. ಆದರೆ ನಮ್ಮೊಳ್ಳಗಿನ ಅದಮ್ಯ ಶಕ್ತಿ ಬದಲಾಗುವುದಿಲ್ಲ. ನಮ್ಮ ಆತ್ಮಸ್ಥೈರ್ಯ ಬದಲಾಗಲು ಬಿಡಬಾರದು. ಆ ಸಮತೋಲನವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಕೆಲ ನಟಿಯರು ಮಗುವಿಗೆ ಜನ್ಮ ನೀಡಿದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಕನಿಷ್ಟ ಒಂದು ವರ್ಷವಾದರೂ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ನಟಿ ಕಾಜಲ್‌ ಬಹುಬೇಕ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಾಜಲ್‌ ಉತ್ಸಾಹಕ್ಕೂ ಆಕೆಗೆ ಕೆಲಸದ ಮೇಲಿರುವ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇನ್ನು ಎಸ್. ಶಂಕರ್ ನಿರ್ದೇಶನದ ಇಂಡಿಯನ್ 2′ ಚಿತ್ರದ ಶೂಟಿಂಗ್ ಇಂದಿನಿಂದ(ಸಪ್ಟೆಂಬರ್‌ 22) ಶುರುವಾಗಿದೆ. ಚಿತ್ರೀಕರಣಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ಹಾಜರಾಗಿದ್ದು, ಕಮಲ್‌ ಹಾಸನ್‌ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವಿಕ್ರಮ್' ಚಿತ್ರದ ಯಶಸ್ಸಿನ ಬಳಿಕ ಕಮಲ್ ಹಾಸನ್ ಇಂಡಿಯನ್ 2′ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ಕಮಲ ಹಾಸನ್‌ಗೆ ನಾಯಕಿಯರಾಗಿ ಕಾಜಲ್‌ ಅಗರ್ವಾಲ್‌ ಹಾಗೂ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ. ಸದ್ಯ ಕಾಜಲ್‌ ಕೂಡ ಚಿತ್ರೀಕರಣಕ್ಕೆ ಬಂದಿದ್ದು, ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಸದ್ಯ ಭಾರತೀಯ ಸಿನಿ ಪ್ರಿಯರು ಕಮಲ್ ಹಾಸನ್‌ ಮುಂದಿನ ಚಿತ್ರದ ಬಗ್ಗೆ ಕಾತುರರಾಗಿದ್ದಾರೆ.

  English summary
  Actress Kajal Aggarwal opens up on post-partum changes in her body and she says it’s been hard to get back my energy levels

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X