For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ರೀಟಾ ಭಾದುರಿ ನಿಧನ

  By Naveen
  |
  ಖ್ಯಾತ ನಟಿ ರೀಟಾ ಭಾದುರಿ ಇನ್ನಿಲ್ಲ..!! | Filmibeat Kannada

  ಬಾಲಿವುಡ್ ಚಿತ್ರರಂಗದ ಖ್ಯಾತ ಹಿರಿಯ ನಟಿ ರೀಟಾ ಭಾದುರಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ.

  ಹೆಚ್ಚು ಗುಜರಾತಿ ಸಿನಿಮಾಗಳನ್ನು ಮಾಡಿದ್ದ ರೀಟಾ ಭಾದುರಿ ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದರು. 'ಸಾವನ್‌ ಕೋ ಆನೆ ದೋ', 'ರಾಜಾ' ರೀಟಾ ಭಾದುರಿ ನಟನೆಯ ಪ್ರಮುಖ ಸಿನಿಮಾಗಳಾಗಿವೆ.

  ಮಾರ್ಚ್ 10 ವಿಶ್ವ ಕಿಡ್ನಿ ದಿನ, ಮೂತ್ರಪಿಂಡ ಜೋಪಾನ

  ಸಿನಿಮಾಗಳ ರೀತಿ 20ಕ್ಕೂ ಹೆಚ್ಚು ಟಿವಿ ಶೋಗಳಲ್ಲಿಯೂ ರೀಟಾ ಭಾದುರಿ ಕಾಣಿಸಿಕೊಂಡಿದ್ದರು. ಸ್ಟಾರ್ ಭಾರತ್ ವಾಹಿನಿಯ 'Nimki Mukhiya' ಎಂಬ ಹಿಂದಿ ಧಾರಾವಾಹಿಯಲ್ಲಿ ಅಜ್ಜಿಯ ಪಾತ್ರವನ್ನು ಮಾಡುತ್ತಿದ್ದರು.

  62 ವರ್ಷ ವಯಸ್ಸಾಗಿದ್ದ ರೀಟಾ ಭಾದುರಿ ಕೆಲ ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರತಿ ಎರಡು ದಿನಕ್ಕೆ ಡಯಾಲಿಸಿಸ್ ಮಾಡಿಸಬೇಕಿತ್ತು. ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದ ಇವರು ಇಂದು ನಿಧನ ಹೊಂದಿದ್ದಾರೆ.

  English summary
  Bollywood actress Rita Bhaduri (62) passes away Today morning (July 17th). Rita Bhaduri suffering from kidney ailment. She did more than 20 tv show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X