ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್: ಸಂಚಲನ ಸೃಷ್ಟಿಸಿದ ವಿಡಿಯೋ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ಆಗಿದ್ದಾರೆ. ದಬಾಂಗ್ ನಟಿಯನ್ನು ಪೊಲೀಸರು ಬಂಧಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋನಾಕ್ಷಿ ಕೈಗಳನ್ನು ಹಿಂಬದಿಯಿಂದ ಎಳೆದು ಕೋಳ ತೊಡಿಸುತ್ತಿರುವ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ.

ಪೊಲೀಸರು ಸೋನಾಕ್ಷಿಯನ್ನು ಅರೆಸ್ಟ್ ಮಾಡುತ್ತಿರುವಾಗ"ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ನಾನು ಮುಗ್ಧೆ? ನನಗೇನು ಗೊತ್ತಿಲ್ಲ" ಎಂದು ಕೂಗಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಒಮ್ಮೆ ಕಂಗಾಲಾಗಿದ್ದಾರೆ. ಇದು ನಿಜನಾ ಎಂದು ಪ್ರಶ್ನಿಸುತ್ತಿದ್ದಾರೆ. ಅಂದ್ಹಾಗೆ ಮಿಷನ್ ಮಂಗಲ್ ಸಿನಿಮಾ ಚಿತ್ರೀಕರಣ ವೇಳೆ ಈ ಗಟನೆ ಸಂಭವಿಸಿದೆ.

ಸಿನಿಮಾ ಪ್ರಮೋಷನ್ ಗೆ ಹೀಗೆ ಮಾಡುತ್ತಿದ್ದಾರಾ? ಇದೂ ಗಿಮ್ಮಿಕ್ ಇರಬಹುದಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ಅತಿದೆ. ಆದ್ರೆ ಇತ್ತೀಚಿಗಷ್ಟೆ ಕಾರ್ಯಕ್ರಮದ ಆಯೋಜಕರೊಬ್ಬರಿಗೆ ವಂಚಿಸಿದ ಆರೋಪ ಕೂಡ ಸೋನಾಕ್ಷಿ ಮೇಲೆ ಇದೆ.

Bollywood Actress Sonakshi Sinha Arrested By Police And Video Viral

ಇನ್ನು ಇದರ ಜೊತೆಗೆ ಮತ್ತೊಂದು ವಿಡಿಯೋ ಕೂಡ ಹರಿದಾಡುತ್ತಿದೆ. ಮತ್ತೊಂದು ವಿಡಿಯೋದಲ್ಲಿ ಸೋನಾಕ್ಷಿ ಬಂಧನದಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಈ ಎರಡು ವಿಡಿಯೋ ಕೂಡ ಅಭಿಮಾನಿಗಳಲ್ಲಿ ಗೊಂದಲ ಉಂಟುಮಾಡಿದೆ. ಈ ಬಗ್ಗೆ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್ಸ್ ಕೂಡ ಹರಿದು ಬರುತ್ತಿವೆ.

ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಾಕ್ಷಿ "ಹೇ ಹುಡುಗರೇ, ಕೆಲವು ವಿಡಿಯೋ ತುಂಬಾ ಹರಿದಾಡುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅದು ನಾನೇ, ಆದರೆ ಅದು ಸಂಪೂರ್ಣ ಸತ್ಯವಲ್ಲ. ಶೀಘ್ರದಲ್ಲೇ ಎಲ್ಲವನ್ನೂ ನಿಮ್ಮೊಂದಿಗೆ ವಿವರವಾಗಿ ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಆದ್ರೆ ನಿಜಕ್ಕು ನಡೆದಿದ್ದೇನು ಎನ್ನುವುದನ್ನು ಸೋನಾಕ್ಷಿಯೂ ಸ್ಪಷ್ಟಪಡಿಸಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

More from Filmibeat

English summary
Bollywood actress Sonakshi Sinha arrested by police and video viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X