For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ದಿನಗಳನ್ನು ನೆನೆದು ಪತಿಗೆ ಭಾವನಾತ್ಮಕ ಪತ್ರ ಬರೆದ ಪ್ರೀತ್ಸೆ ಬೆಡಗಿ

  |

  ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸದ್ಯ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನ ಖ್ಯಾತ ನಟಿ ಸೊನಾಲಿ ಬೇಂದ್ರೆ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಸೊನಾಲಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ನ್ಯಾಯಾರ್ಕ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೊನಾಲಿ ಸದ್ಯ ಮುಂಬೈಗೆ ವಾಪಸ್ ಆಗಿದ್ದಾರೆ.

  ಆಗಾಗ ನ್ಯೂಯಾರ್ಕ್ ಗೆ ತೆರಳಿ ಆರೋಗ್ಯ ಪರೀಕ್ಷಿಸಿಕೊಂಡು ಬರುತ್ತಿದ್ದಾರೆ. ಸಾವನ್ನೆ ಗೆದ್ದು ಬಂದಿರುವ ನಟಿ ಸೊನಾಲಿ ಇಂದು ಪತಿಯ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. 17ನೇ ವರ್ಷ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಗಾಗಿ ಪತಿಯ ಜೊತೆ ಅಂಡಮಾನ್ ಗೆ ತೆರಳಿದ್ದಾರೆ.

  ಆಕ್ವಾ ಥೆರಪಿ ಚಿಕಿತ್ಸೆಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಸೊನಾಲಿಆಕ್ವಾ ಥೆರಪಿ ಚಿಕಿತ್ಸೆಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಸೊನಾಲಿ

  ಇದೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪತಿಯ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಆನಾರೋಗ್ಯದ ಸಂದರ್ಭದಲ್ಲಿ ಆಧಾರಸ್ತಂಭವಾಗಿ ನಿಂತಿದ್ದ ಪತಿಗೆ ಧನ್ಯವಾದ ತಿಳಿಸಿದ್ದಾರೆ. "ಕಳೆದ ವರ್ಷ ನಾನು ನ್ಯೂಯಾರ್ಕ್ ನ ಆಸ್ಪತ್ರೆಯಲ್ಲಿ ಇದ್ದೆ. ನನ್ನ ಜೀವನವನ್ನು ಎರಡು ಭಾಗದಲ್ಲಿ ಗುರುತಿಸಬಹುದು. ಕ್ಯಾನ್ಸರ್ ಗೂ ಮೊದಲು ಮತ್ತು ಕ್ಯಾನ್ಸರ್ ನಂತರ. ಈ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ರೋಡ್ ಟ್ರಿಪ್ ಹೋಗಲು ಪ್ಲಾನ್ ಮಾಡಿದ್ದೆ. ಆದರೆ ನನ್ನ ಆನಾರೋಗ್ಯದ ಕಾರಣ ಪತಿ ಈ ವಿಚಾರಕ್ಕೆ ಒಪ್ಪುದಿಲ್ಲ" ಎಂದು ಹೇಳಿದ್ದಾರೆ.

  ಇನ್ನು "ಗೋಲ್ಡಿ ಬೆಹ್ಲ್ ನಿನಗೆ ವಾರ್ಷಿಕೋತ್ಸವದ ಶುಭಾಶಯಗಳು. ನಿನ್ನ ಕಲ್ಪನೆಗೂ ಮೀರಿದಷ್ಟು ನಾನು ನಿನ್ನನ್ನ ಪ್ರೀತಿಸುತ್ತೇನೆ. ಆರೋಗ್ಯ ಮತ್ತು ಆನಾರೋಗ್ಯದ ಸಂದರ್ಭದಲ್ಲೂ ನನ್ನ ಆಧಾರಸ್ತಂಭವಾಗಿದ್ದಕ್ಕೆ ಧನ್ಯಾವಾದಗಳು. ಪ್ರತಿಯೊಂದು ವಿಚಾರದಲ್ಲೂ ನನ್ನ ಜೊತೆ ಇದ್ದರು. ನನ್ನ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ. ಹಾಗಾಗಿ ನಾನು ಈಗ ಅವರ ಕಡೆ ಗಮನ ಹರಿಸುತ್ತಿದ್ದೇನೆ"ಎಂದು ಪ್ರೀತಿಯ ಪತಿಯ ಬಗ್ಗೆ ಬರೆದುಕೊಂಡಿದ್ದಾರೆ.

  English summary
  Bollywood actress Sonali Bendre celebrating her 17th wedding anniversary, she penned a heartwarming message for her husband

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X