»   » ಕದ್ದುಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಬೆಡಗಿ ಸೋಫಿ

ಕದ್ದುಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಬೆಡಗಿ ಸೋಫಿ

Posted By: ಸೋನು ಗೌಡ
Subscribe to Filmibeat Kannada

ಇತ್ತೀಚೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಸುದ್ದಿ ಮಾಡದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ನಟ ಜೆಡಿ ಚಕ್ರವರ್ತಿ, ತೆಲುಗು ನಟ ವರುಣ್ ಸಂದೇಶ್, ನಟ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಜೀವನದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಅದರಂತೆ ಇದೀಗ ಬಾಲಿವುಡ್ ಸಿನಿಮಾ ರಂಗದಲ್ಲೂ ಶಾದಿ (ಮದುವೆ) ಸೀಸನ್ ಶುರುವಾದಂತಿದೆ.

ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್, ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಟಿ-ವಿವೇಕ್ ದಹಿಯಾ, ಸನಾಯ ಇರಾನಿ-ಮೋಹಿತ್ ಸೆಹಗಲ್ ಮತ್ತಿತ್ತರರು ಮದುವೆಯಾದ ಬೆನ್ನಲ್ಲೇ, ಇದೀಗ ಬ್ರಿಟಿಷ್ ಮೂಲದ ನಟಿ ಕಮ್ ಗಾಯಕಿ ಸೋಫಿ ಚೌಧರಿ (ಸೋಫಿಯಾ ಚೌಧರಿ) ಸದ್ದು-ಸುದ್ದಿ ಮಾಡದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.[ಪ್ರಿಯತಮೆ ಜೊತೆ ಸಪ್ತಪದಿ ತುಳಿದ ನಟ ವರುಣ್ ಸಂದೇಶ್]

ನಟಿ ಸೋಫಿಯಾ ಚೌಧರಿ ಅವರು ನಿಶ್ಚಿತಾರ್ಥದ ಉಂಗುರವನ್ನು ಹಾಕಿಕೊಂಡಿರುವ ಫೋಟೋ ಜೊತೆಗೆ 'ಐ ಕಾಂಟ್ ವೈಟ್' ಅಂತ ಸ್ಟೇಟಸ್ ಹಾಕಿ, ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಇದನ್ನು ನೋಡಿ ಕೆಲವರು ಶಾಕ್ ಆದರೆ, ಬಾಲಿವುಡ್ ತಾರೆಯರು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಮುಂದೆ ಓದಿ....

ಯಾರು 'ಆ' ಲಕ್ಕಿ ಮ್ಯಾನ್.?

'ಪ್ಯಾರ್ ಕೀ ಸೈಡ್ ಎಫೆಕ್ಟ್' ನಟಿ ಸೋಫಿ ಅವರು ಸದ್ದಿಲ್ಲದೇ, ನಿಶ್ಚಿತಾರ್ಥ ಮಾಡಿಕೊಂಡಿದ್ದೆಲ್ಲಾ ಓಕೆ, ಆದರೆ ಸೋಫಿ ಅವರ ಕೈ ಹಿಡಿದ 'ಆ' ಲಕ್ಕಿ ಮ್ಯಾನ್ ಯಾರು ಎಂಬುದನ್ನು ಸೋಫಿ ಅವರು ಇನ್ನೂ ಬಹಿರಂಗಪಡಿಸಿಲ್ಲ.[ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ]

ಊಹಿಸಿಕೊಂಡು ಕಾಮೆಂಟ್ ಗಳ ಸುರಿಮಳೆ

ಸೋಫಿ ತಮ್ಮ ಪತಿದೇವರ ಮಾಹಿತಿಯನ್ನು ಹೊರಹಾಕದ ಕಾರಣ, ಇನ್ ಸ್ಟಾಗ್ರಾಮ್ ನಲ್ಲಿ ಸೋಫಿ ಅವರ ಪತಿದೇವರನ್ನು ಊಹಿಸಿಕೊಂಡು ಎರ್ರಾ-ಬಿರ್ರಿ ಕಾಮೆಂಟ್ ಗಳು ಹರಿದಾಡುತ್ತಿವೆ.

ಸೋಫಿ ಪತಿ ಆದಿತ್ಯ ರಾಯ್ ಕಪೂರ್.?

ಸೋಪಿ ಅವರು ತಬ್ಬಿಕೊಂಡಿರುವ ಫೋಟೋ ಹಾಕಿದ್ದು, ತಮ್ಮ ಸಂಗಾತಿಯ ಅರ್ಧ ಮುಖ ಮಾತ್ರ ಕಾಣುತ್ತಿದೆ. ಆದ್ರಿಂದ ಕೆಲವರು ಅವರನ್ನು ಆದಿತ್ಯ ರಾಯ್ ಕಪೂರ್ ಎಂದು ಕಾಮೆಂಟ್ ಮಾಡಿದ್ದಾರೆ.

ಶಾಕ್ ಆದ ಅಭಿಮಾನಿಗಳು

ನಟಿ ಸೋಫಿ ಚೌಧರಿ ಅವರು ಸದ್ದಿಲ್ಲದೇ ಎಂಗೇಜ್ ಆಗಿದ್ದಕ್ಕೆ, ಕೆಲವು ಅಭಿಮಾನಿಗಳು 'ಓ ಮೈ ಗಾಡ್' ಎಂದು ಶಾಕ್ ಗೆ ಒಳಗಾಗಿದ್ದಾರೆ.

ಮಂಟಪದಲ್ಲಿ ಸರ್ ಪ್ರೈಸ್

ಒಟ್ನಲ್ಲಿ ತಾವು ಕೈ ಹಿಡಿಯುತ್ತಿರುವ ಸುರ-ಸುಂದರಾಂಗನ ಹೆಸರು, ಮುಖ ಪರಿಚಯವನ್ನು ಸೀಕ್ರೆಟ್ ಆಗಿ ಇಟ್ಟಿರುವ ಸೋಫಿ, ತಮ್ಮ ಅಭಿಮಾನಿಗಳಿಗೆ, ಕೆಲವೇ ದಿನಗಳಲ್ಲಿ ಮದುವೆ ಮಂಟಪದಲ್ಲೇ ಸರ್ ಪ್ರೈಸ್ ನೀಡಲಿದ್ದಾರೆ.

English summary
After Actress Bipasha Basu-Karan Singh Grover, Divyanka Tripathi-Vivek Dahiya, Sanaya Irani-Mohit Sehgal, the latest celeb to join the bandwagon is none other than Actress Sophie Choudry. Actress Sophie shared a picture on social media flaunting her engagement ring. However, the lady has not revealed the face of her fiance in that post.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X