»   » ಸುರಸುಂದರಿ ಶ್ರೀದೇವಿ ಪುತ್ರಿ ಬಾಲಿವುಡ್ ಎಂಟ್ರಿ ಖಚಿತ

ಸುರಸುಂದರಿ ಶ್ರೀದೇವಿ ಪುತ್ರಿ ಬಾಲಿವುಡ್ ಎಂಟ್ರಿ ಖಚಿತ

Posted By: ರಮೇಶ್ ಬಿ
Subscribe to Filmibeat Kannada

ಕನ್ನಡ, ತಮಿಳು, ತೆಲುಗು, ಹಿಂದಿ...ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು, ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ, ತಮ್ಮ ಮಗಳನ್ನ ಬೆಳ್ಳಿತೆರೆ ಮೇಲೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಹೌದು, ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಗೆ ಎಂಟ್ರಿ ಕೊಡಲು ಕಾಲ ಕೂಡಿಬಂದಿದೆ.

Bollywood Actress Sridevi's daughter Jahnavi to make Bollywood Debut soon

ಹಾಗ್ನೋಡಿದರೆ, ಜಾಹ್ನವಿ ಕಪೂರ್ ತಮಿಳಿನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದರೆ ಅದನ್ನು ಸ್ವತಃ ನಟಿ ಶ್ರೀದೇವಿ ನಿರಾಕರಿಸಿದ್ದರು.

Bollywood Actress Sridevi's daughter Jahnavi to make Bollywood Debut soon

ಬಾಲಿವುಡ್ ಪಾರ್ಟಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಜಾಹ್ನವಿ, ಯಾವಾಗ ಬಾಲಿವುಡ್ ಗೆ ಪ್ರವೇಶ ಮಾಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೀಗ ಸಮಯ ಕೂಡಿ ಬಂದಿದೆ.

Bollywood Actress Sridevi's daughter Jahnavi to make Bollywood Debut soon

ಮಗಳು ಆಕ್ಟಿಂಗ್ ಕಲಿಯಲಿ ಎಂಬ ಕಾರಣಕ್ಕೆ ಜಾಹ್ನವಿಯವರನ್ನ ಲಾಸ್ ಏಂಜಲೀಸ್ ನ The Lee Strasberg Theatre & Film Institute ಗೆ ಶ್ರೀದೇವಿ ಸೇರಿಸಿದ್ದಾರೆ. ರಣ್ಬೀರ್ ಕಪೂರ್ ಆಕ್ಟಿಂಗ್ ಕಲಿತಿದ್ದು ಕೂಡ ಇಲ್ಲೇ.

Bollywood Actress Sridevi's daughter Jahnavi to make Bollywood Debut soon

ಜಾಹ್ನವಿ ಅಲ್ಲದೇ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ ಸಾರಾ, ಶಾರುಖ್ ಖಾನ್ ಪುತ್ರ ಆರ್ಯನ್ ಕೂಡ The Lee Strasberg Theatre & Film Institute ನಲ್ಲೇ ನಟನಾ ತರಬೇತಿ ಪಡೆಯಲು ಉತ್ಸುಕರಾಗಿದ್ದಾರೆ. [ಸೈಫ್ ಅಲಿ ಖಾನ್ ಮಗ, ಶ್ರೀದೇವಿ ಪುತ್ರಿ ಗುಪ್ತ ಸಂದೇಶ]

Bollywood Actress Sridevi's daughter Jahnavi to make Bollywood Debut soon

ನಟನೆಗೆ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನ ಶ್ರೀದೇವಿ ಪಡೆದಿದ್ದಾರೆ. ಈಗ ಅವರ ಪುತ್ರಿ ಜಾಹ್ನವಿ ಕಪೂರ್ ಸರದಿ. ನೋಡೋಣ, ನಟನಾ ತರಬೇತಿ ಪಡೆದು ಶ್ರೀದೇವಿ ಪುತ್ರಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ.

English summary
According to the reports, Bollywood Actress Sridevi's daughter Jahnavi Kapoor to make Bollywood Debut soon.Jahnavi Kapoor is learning acting at The Lee Strasberg Theatre & Film Institute in Los Angeles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada