Don't Miss!
- News
ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿಎಸ್ ಯಡಿಯೂರಪ್ಪ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಮದುವೆನೂ ಇಲ್ಲ.. ರಿಂಗೂ ಇಲ್ಲ.." ಮಕ್ಕಳ ಫೋಟೊ ಜೊತೆ ಲಲಿತ್ ಮೋದಿಗೆ ಸುಶ್ಮಿತಾ ಸೇನ್ ಶಾಕ್!
ನಿನ್ನೆ (ಜುಲೈ 14) ಲಲಿತ್ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಇದು ಕೆಲವೇ ಕ್ಷಣಗಳಲ್ಲಿ ಕಾಡ್ಗಿಚ್ಚಿನಂತೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು.
ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು (ಜುಲೈ 15) ಸುಶ್ಮಿತಾ ಸೇನ್ ಡೇಟಿಂಗ್ ರೂಮರ್ ಬಗ್ಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಅಡ್ಡಗೋಡೆ ಮೇಲೆ ಸುಶ್ಮಿತಾ ಸೇನ್ ದೀಪ ಇಟ್ಟಿದ್ದಾರೆ.
ಬ್ರೇಕಪ್
ಬಳಿಕ
ಲಲಿತ್
ಮೋದಿ
ಜೊತೆ
ಸುಶ್ಮಿತಾ
ಸೇನ್
ಡೇಟಿಂಗ್:
ಮದುವೆ
ಬಗ್ಗೆ
ಹೇಳಿದ್ದೇನು?
ಬಾಲಿವುಡ್ ನಟಿ ಪ್ರತಿಕ್ರಿಯೆ
ಲಲಿತ್ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿ ನೀಡಿದ್ದರು. ಇಲ್ಲಿಂದ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿತ್ತು. ಈ ಬಗ್ಗೆ ಕೊನೆಗೂ ಸುಶ್ಮಿತಾ ಸೇನ್ ಪ್ರತಿಕ್ರಿಯಿಸಿದ್ದು, ಹರಿದಾಡುತ್ತಿರುವ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. " ಮದುವೆನೂ ಇಲ್ಲ... ರಿಂಗೂ ಇಲ್ಲ." ಎಂದು ಒಂದೇ ವಾಕ್ಯದಲ್ಲಿ ತಮ್ಮ ಹಾಗೂ ಲಲಿತ್ ಮೋದಿ ನಡುವಿನ ಸಂಬಂಧಕ್ಕೆ ತಿಲಾಂಜಲಿ ಇದ್ದಾರೆ.

ಫೋಟೊದಲ್ಲಿ ಲಲಿತ್ ಮೋದಿಗೆ ಜಾಗವಿಲ್ಲ
ಇಂದು ( ಜುಲೈ 15) ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೊವನ್ನು ಶೇರ್ ಮಾಡಿದ್ದಾರೆ. ರೆನೀ ಹಾಗೂ ಅಲಿಶಾ ಜೊತೆಗಿರುವ ಈ ಫೋಟೊ ಹಂಚಿಕೊಂಡಿದ್ದಾರೆ. ಜೊತೆ "ಇಷ್ಟು ಸ್ಪಷ್ಟನೆ ಸಾಕು" ಎಂಬರ್ಥದಲ್ಲಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಫೋಟೊದಲ್ಲಿ ಲಲಿತ್ ಮೋದಿ ಇಲ್ಲ. ಹೀಗಾಗಿ ಸುಶ್ಮಿತಾ ಸೇನ್ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿಗೆ ಬ್ರೇಕ್ ಮಾಡಿಕೊಂಡ್ರಾ? ಅನ್ನೋ ಅನುಮಾನ ಕಾಡುತ್ತಿದೆ.

ರಿಂಗ್ ಗಿಫ್ಟ್ ಮಾಡಿದ್ರಾ ಲಲಿತ್ ಮೋದಿ?
ಲಲಿತ್ ಮೋದಿ ನಿನ್ನೆ (ಜುಲೈ 14) ಸುಶ್ಮಿತಾ ಸೇನ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ಮದುವೆ ಜೊತೆಗೆ ಮತ್ತೊಂದು ವಿಷಯದ ಬಗ್ಗೆನೂ ಚರ್ಚೆಯಾಗಿತ್ತು. ಇವುಗಳಲ್ಲಿ ಒಂದು ಫೋಟೊದಲ್ಲಿ ಸುಶ್ಮಿತಾ ಸೇನ್ ಕೈ ದುಬಾರಿ ಉಂಗುರ ಕಾಣಿಸಿತ್ತು. ಇದು ಲಲಿತ್ ಮೋದಿ ಬಾಲಿವುಡ್ ನಟಿ ಸುಶ್ಮಿತಾ ಸೇನ್‌ಗೆ ನೀಡಿದ ಉಡುಗೊರೆ ಎಂಬ ಸುದ್ದಿನೂ ಹಬ್ಬಿತ್ತು. ಈಗ ಸುಶ್ಮಿತಾ ಸೇನ್ ಅದಕ್ಕೂ ಕ್ಲಾರಿಟಿ ನೀಡಿದ್ದಾರೆ.

ಮಾಜಿ ಪ್ರಿಯತಮನ ಪ್ರತಿಕ್ರಿಯೆ ಏನು?
ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಡೇಟಿಂಗ್ ವಿಚಾರ ಹೊರಬೀಳುತ್ತಿದ್ದಂತೆ ಮಾಜಿ ಪ್ರಿಯತಮ ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. " ಇಬ್ಬರೂ ಸಂತೋಷವಾಗಿರಲಿ. ಪ್ರೀತಿ ಎಂಬುದೇ ಅತೀ ಸುಂದರ. ಅವರು ಯೋಗ್ಯರಾದವರನ್ನೇ ಆಯ್ಕೆ ಮಾಡುತ್ತಾರೆ ಎಂದು ನನಗೆ ಗೊತ್ತಿದೆ." ಎಂದು ರೋಹ್ಮನ್ ಹೇಳಿಕೆ ನೀಡಿದ್ದರು. ಈಗ ಸುಶ್ಮಿತಾ ಸೇನ್ ಸ್ವಲ್ಪ ಸಮಯ ತೆಗೆದುಕೊಂಡು ಈ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.