»   » 'ಲೈಂಗಿಕ ಕಿರಿಕಿರಿ' ಬಗ್ಗೆ ಬಾಲಿವುಡ್ ಬೆಡಗಿಯ ಬಿಚ್ಚು ಮಾತು

'ಲೈಂಗಿಕ ಕಿರಿಕಿರಿ' ಬಗ್ಗೆ ಬಾಲಿವುಡ್ ಬೆಡಗಿಯ ಬಿಚ್ಚು ಮಾತು

By: ಸೋನು ಗೌಡ
Subscribe to Filmibeat Kannada

ಸಿನಿಮಾ ಕ್ಷೇತ್ರ ಅನ್ನೋದು ಒಂದು ಕಲರ್ ಫುಲ್ ಜಗತ್ತು. ಆ ಜಗತ್ತು ಹೊರಗಡೆಯಿಂದ ನೋಡಲು ತುಂಬಾ ರಂಗು-ರಂಗಾಗಿ ಕಾಣಿಸಿದರು, ಅದರ ಒಳಗೆ ತುಂಬಿರೋದು ಮಾತ್ರ ಬರೀ ಹುಳ-ಹುಪ್ಪಟೆಗಳು.

ಸಿನಿಮಾ ಕ್ಷೇತ್ರದೊಳಗೆ ಧುಮುಕಿದವರಿಗೆ ಮಾತ್ರ ಗೊತ್ತಿರುತ್ತದೆ ಆ ಪ್ರಪಂಚದ ಬವಣೆಗಳು. ಎಷ್ಟೋ ನಟಿಯರು ಈ ರಂಗ್-ರಂಗೀನ್ ದುನಿಯಾದಲ್ಲಿ ಬೆಂದು ಹೋಗುತ್ತಿದ್ದಾರೆ. ಆದರೆ ಅದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ, ಗಂಟಲಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತೆ, ಅತ್ತ ಉಗುಳದೇ ಇತ್ತ ನುಂಗದ ಪರಿಸ್ಥಿತಿಯಲ್ಲಿ ಇರುತ್ತಾರೆ.

ಯಾವುದೇ ಸಿನಿಮಾ ಕ್ಷೇತ್ರಗಳಲ್ಲೂ ಕ್ಯಾಸ್ಟಿಂಗ್ ಕೌಚ್ (ಅವಕಾಶ ನೀಡುವ ಸಲುವಾಗಿ ನಟಿಯರನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳುವುದು) ಅನ್ನೋದು ಇದ್ದೇ ಇರುತ್ತೆ.

ಈ ಕ್ಯಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ಹೊರಗಡೆ ಹೇಳಿಕೊಳ್ಳೋದು ಬಹಳ ವಿರಳ. ಅದರಲ್ಲೂ ವಿಶೇಷವಾಗಿ ಇತ್ತೀಚೆಗಷ್ಟೇ ಬಹುಭಾಷಾ ತಾರೆ ಸುರ್ವಿನ್ ಚಾವ್ಲಾ ಅವರು ಓಪನ್ ಆಗಿ ಈ ಬಗ್ಗೆ ಮಾತನಾಡಿದ್ದರು.[ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್]

ಇದೀಗ ಈ ಧೈರ್ಯವಂತ ನಟಿಯ ಸಾಲಿಗೆ ಇನ್ನೊಬ್ಬ ಬಾಲಿವುಡ್ ನಟಿ ಹೊಸ ಸೇರ್ಪಡೆಯಾಗಿದ್ದಾರೆ. ಅಂದಹಾಗೆ ಇವರು ಔಟ್ ಡೋರ್ ಶೂಟಿಂಗ್ ನಲ್ಲಿ ಏನೇನಾಗುತ್ತೇ ಅನ್ನೋದರ ಬಗ್ಗೆ ಬಹಳ ಹಾಸ್ಯವಾಗಿ ಹೇಳುತ್ತಾ ಕಟು ಸತ್ಯವನ್ನು ಕಕ್ಕಿದ್ದಾರೆ. ಮುಂದೆ ಓದಲು ಸ್ಲೈಡ್ಸ್ ಕ್ಲಿಕ್ಕಿಸಿ.....

ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ

ಅಜಯ್ ದೇವಗನ್ ಜೊತೆ 'ಪ್ಲಾಟ್ ಫಾರಂ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ಅವರು ಸಿನಿಮಾ ಕ್ಷೇತ್ರದಲ್ಲಿ 'ಕ್ಯಾಸ್ಟಿಂಗ್ ಕೌಚ್' ಹೇಗಿರುತ್ತೆ ಅನ್ನೋದನ್ನ ಬಹಳ ಹಾಸ್ಯ ರೂಪಕದ ರೀತಿಯಲ್ಲಿ ವಿವರಿಸಿದ್ದಾರೆ. 'ತಾರೆ ಜಮೀನ್ ಪರ್', 'ದಿಲ್ ತೋ ಬಚ್ಚಾ ಹೇ ಜಿ' ಮತ್ತು 'ಎಬಿಸಿಡಿ 2' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ನಟಿ ಟಿಸ್ಕಾ ಚೋಪ್ರಾ ಅವರು ಚಿತ್ರರಂಗದ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳನ್ನು ನೋಡಿ ಮುಂದಿನ ಸ್ಲೈಡ್ಸ್ ನಲ್ಲಿ.....[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

ನಟಿಯ ಹಿಂದೆ ಬೀಳುವ ನಟರು

ಬಾಲಿವುಡ್ ನಲ್ಲಿ ಹೆಚ್ಚಾಗಿ ನಟರು ಅವರ ಸಿನಿಮಾಗಳಿಗೆ ಯಾವ ನಟಿಯರು ಬರುತ್ತಾರೆ, ಅವರ ಹಿಂದೆ ಬೀಳುತ್ತಾರಂತೆ. ತದನಂತರ ಸಿನಿಮಾ ಮುಗಿದ ಮೇಲೆ ಏನೂ ನಡೆದೇ ಇಲ್ಲ ಎನ್ನುವಂತೆ ತಮ್ಮಷ್ಟಕ್ಕೆ ತಾವು ಹೆಂಡತಿ-ಮಕ್ಕಳ ಜೊತೆ ಎದ್ದು ಹೋಗುತ್ತಾರೆ. ಎಂದು ನಟಿ ಟಿಸ್ಕಾ ಚೋಪ್ರಾ ಅವರು ತಮ್ಮ ಎದುರಿಗೆ ನಡೆದ ವಿದ್ಯಾಮಾನಗಳನ್ನು ವಿವರಿಸಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

ನಿರ್ಮಾಪಕರ ವರಸೆ ಹೇಗಿರುತ್ತೆ.?

'ನನ್ನ ಮೊದಲ ಸಿನಿಮಾ ಮುಗಿದ ಮೇಲೆ ನಾನು ಏನು ಮಾಡೋದು?, ಯಾವ ಸಿನಿಮಾ ಬಂದ್ರೆ ಒಪ್ಪಿಕೊಳ್ಳೋದು ಅಂತ ಯೋಚನೆ ಮಾಡ್ತಾ ಇರುವಾಗ, ಒಂದು ದಿನ ನನಗೆ ಒಬ್ಬ ಖ್ಯಾತ ನಿರ್ಮಾಪಕರಿಂದ ಫೋನ್ ಕಾಲ್ ಬಂತು. ಅವರು ನನ್ನ ಸಿನಿಮಾದಲ್ಲಿ ನಟಿಸ್ತಿಯಾ ಅಂತ ಕೇಳಿದ್ರು. ನಾನು ದೊಡ್ಡ ಪ್ರೊಡ್ಯೂಸರ್ ಅಂತ ಖುಷಿಯಲ್ಲಿ ಒಪ್ಕೊಂಡು ಮೈ ತುಂಬಾ ಬಟ್ಟೆ ಹಾಕಿಕೊಂಡು, ಹೀಲ್ಸ್ ಚಪ್ಪಲಿ ಧರಿಸಿ, ಕಿವಿಗೆ ದೊಡ್ಡ-ದೊಡ್ಡ ಓಲೆ ಹಾಕಿಕೊಂಡು ಹೋದೆ".- ಟಿಸ್ಕಾ

ಅಡಿಯಿಂದ-ಮುಡಿ ದಿಟ್ಟಿಸಿದ ನಿರ್ಮಾಪಕ

"ನಾನು ಅವರ ಆಫೀಸ್ ಹೋಗಿ ಅವರನ್ನು ಕಂಡಾಗ, ನನ್ನನ್ನು ಅಡಿಯಿಂದ-ಮುಡಿವರೆಗೆ ನೋಡಿ, ನೀನು ಇನ್ನೂ ಹೀಲ್ಸ್ ಚಪ್ಪಲಿ ಧರಿಸಿ ನಡೆಯೋದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿನ್ನ ಕೂದಲಿಗೆ ಮಸಾಜ್ ಮಾಡಿಸಬೇಕು, ಡ್ರೆಸ್ಸ್ ಸೆನ್ಸ್ ಕಲಿಯಬೇಕು ಅಂತ್ಹೆಲ್ಲಾ ಹೇಳಿದ್ರು. ನಾನು ಖುಷಿಪಟ್ಟೆ ಆಯ್ತು ಅಂತ ಎಲ್ಲದಕ್ಕೂ ತಲೆ ಆಡಿಸಿದೆ".-ಟಿಸ್ಕಾ

ಸೆಟ್ ನಲ್ಲಿ ನಡೆದ ಘಟನೆ

"ಎಲ್ಲಾ ಆಯ್ತು, ಸಿನಿಮಾ ಶೂಟಿಂಗ್ ಶುರು ಆಯ್ತು, ಸೆಟ್ ನಲ್ಲಿ ತುಂಬಾ ಬೋಲ್ಡ್ ಆಗಿ ಇರಬೇಕು ಅಂದ್ರು, ಹಾಗಾಗಿ ಆ ಸಿನಿಮಾದಲ್ಲಿ ಕೊಂಚ ರೋಮ್ಯಾನ್ಸ್ ಜಾಸ್ತೀನೆ ಇತ್ತು. ನನ್ನ ಮತ್ತು ಹೀರೋ ನಡುವೆ ಕ್ಯಾಮೆರಾ ತಂದ್ರು, ಹೀರೋ ಕ್ಯಾಮೆರಾ ನೋಡುತ್ತಿಲ್ಲ, ಯಾಕೆಂದ್ರೆ ಅವರು ಮೇಕಪ್ಪ್ ಮಾಡೋ ಹುಡುಗಿಯತ್ತ ನೋಟ ನೆಟ್ಟಿದ್ದ. ಸಿನಿಮಾ ಶುರು ಆದಾಗಿನಿಂದ, ಅವರಿಬ್ಬರ ನಡುವೆ ಏನೇನೋ ನಡೆದಿತ್ತು. ಸೆಟ್ ನಲ್ಲಿ ಆ ಹೀರೋ ಮಗ ಇದ್ರೂ ಅವರಿಗೆ ಏನೂ ಅನ್ನಿಸುತ್ತಿರಲಿಲ್ಲ. ಎಲ್ಲರೂ ಸೆಟ್ ನಲ್ಲಿ ಒಂದಲ್ಲಾ ಒಂದು ಆಫೇರ್ ಇಟ್ಟುಕೊಂಡಿರುತ್ತಾರೆ". -ಟಿಸ್ಕಾ

ಹೋಟೆಲ್ ಗೆ ಕರೆದ ನಿರ್ಮಾಪಕ

'ಒಂದು ದಿನ ನನ್ನನ್ನು ನಿರ್ಮಾಪಕರು ಒಟ್ಟಿಗೆ ಡಿನ್ನರ್ ಮಾಡೋಣ ಅಂತ ಹೋಟೆಲ್ ಗೆ ಕರೆದರು. ನಾನು ಅಂಜುತ್ತಲೇ ಹೋದೆ, ನಾನು ಹೋಗುವಾಗ ಅವರು ಲುಂಗಿಯಲ್ಲಿ ಇದ್ದರು. ನನಗೆ ಮುಜುಗರ ಆಯ್ತು, ಭಯದಿಂದಲೇ ಕುಳಿತಿರಬೇಕಾದರೆ, ಅವರಿಗೆ ಹಲವಾರು ಫೋನ್ ಕಾಲ್ ಗಳು ಬರಲು ಶುರು ಆಯ್ತು. ಆದ್ದರಿಂದ ನಾನು ಅಂದು ಬಚಾವಾಗಿದ್ದೆ". ಎಂದು ಟಿಸ್ಕಾ ಅವರು ತಮಗೆ ಆದ ಅನುಭವಗಳನ್ನು ಫನ್ನಿ-ಫನ್ನಿಯಾಗಿ ಬಿಚ್ಚಿಟ್ಟಿದ್ದಾರೆ.

ವಿಡಿಯೋ ನೋಡಿ..

ನಟಿ ಟಿಸ್ಕಾ ಚೋಪ್ರಾ ಅವರ ಮನದಾಳದ ಮಾತನ್ನು ಕೇಳಲು ಈ ವಿಡಿಯೋ ನೋಡಿ.....

English summary
Bollywood actress Tisca Chopra, who starred in movies such as 'Tare Zameen Par', 'Dil Toh Bachcha Hai Ji' and 'ABCD 2', is talking about her 'casting couch' experience. Watch Video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada