»   » 35 ವಯಸ್ಸಾದ್ರು 'ಶಾದಿಭಾಗ್ಯ' ಕಾಣದ ನಟಿಮಣಿಯರು

35 ವಯಸ್ಸಾದ್ರು 'ಶಾದಿಭಾಗ್ಯ' ಕಾಣದ ನಟಿಮಣಿಯರು

Posted By:
Subscribe to Filmibeat Kannada

ಮದುವೆ ಆಗುವುದಕ್ಕೆ ಗಂಡಸರಿಗೆ 21, ಹೆಂಗಸರಿಗೆ 18 ಕನಿಷ್ಠ ವಯಸ್ಸಾಗಿರಬೇಕು. ಆದ್ರೆ, ಗರಿಷ್ಠ ವಯಸ್ಸು ಎಷ್ಟಿರಬೇಕು ಎಂದು ಯಾರೂ ಹೇಳಿಲ್ಲ. ಅದಕ್ಕೆ ಈ ನಟಿಯರು ವಯಸ್ಸು ಎಷ್ಟೇ ಆದ್ರು ಮದುವೆ ಮಾತ್ರ ಬೇಡವೆನ್ನುತ್ತಿದ್ದಾರೆ.

20 ವರ್ಷ ವಯಸ್ಸು ಆಗುತ್ತಿದ್ದಂತೆ ಬಹುತೇಕ ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿಡುವುದು ಸಂಪ್ರದಾಯ. ಸಿನಿಮಾ ನಟಿಯರ ವಿಚಾರಕ್ಕೆ ಬಂದ್ರೆ, 30 ವರ್ಷದವರೆಗೂ ನಟನೆ, ಸಾಧನೆ ಎಂದು ಮಗ್ನರಾಗಿರುತ್ತಾರೆ. ಆದ್ರೀಗ, ಕಾಲ ಬದಲಾಗಿದೆ. 35, 40 ದಾಟಿದ್ರು ವೈವಾಹಿಕ ಜೀವನವೇ ಇಲ್ಲದೇ ಒಬ್ಬಂಟಿಯಾಗಿ ಬಿಡುತ್ತಾರೆ.

ಇಂತಹ ಕೆಲವು ನಟಿಯರು ಬಾಲಿವುಡ್ ನಲ್ಲಿದ್ದಾರೆ. 35 ವರ್ಷ ವಯಸ್ಸು ದಾಟಿದ್ರು ಶಾದಿಭಾಗ್ಯ ಕಾಣದ ನಟಿಯರು ಇವರು. ಮುಂದೆ ಓದಿ.....

ನರ್ಗೀಸ್ ಫಕ್ರಿ

30ನೇ ವರ್ಷಕ್ಕೆ ಬಾಲಿವುಡ್‌ ಕರಿಯರ್ ಪ್ರಾರಂಭಿಸಿದ ನರ್ಗಿಸ್‌, ಹೆಚ್ಚು ಸುದ್ದಿಯಾಗಿದ್ದು ಖಾಸಗಿ ಜೀವನದಲ್ಲಿ. ಉದಯ ಚೋಫ್ರಾ ಜೊತೆ ಅಫೇರ್ ಹೊಂದಿದ್ದರು ಎನ್ನುವ ಸುದ್ದಿ ಬಾಲಿವುಡ್‌ ನಲ್ಲಿ ಸಖತ್‌ ಸೌಂಡ್‌ ಮಾಡಿತ್ತು. ಇದೀಗ, 38 ದಾಟಿದ್ರು ಈಕೆ ಮದುವೆಯಿಂದ ದೂರು ಉಳಿದಿದ್ದಾರೆ.

ಅಮೀಶಾ ಪಟೇಲ್‌

ಹೃತಿಕ್ ರೋಷನ್ ಅವರ 'ಕಹೋ ನಾ ಪ್ಯಾರ್‌ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅಮೀಶಾ ಪಟೇಲ್‌ 40 ದಾಟಿದ್ರು ಮದುವೆ ಆಗಿಲ್ಲ. ಬಾಲಿವುಡ್‌ ನಿರ್ದೇಶಕ ವಿಕ್ರಮ್‌ ಭಟ್ ಜೊತೆ ಈಕೆಯ ಹೆಸರು ಅಂಟಿಕೊಂಡಿತ್ತಾದರೂ, ಮದುವೆ ಭಾಗ್ಯ ಮಾತ್ರ ಸಿಗಲೆ ಇಲ್ಲ.

ನೇಹಾ ದುಪಿಯಾ

ಹಿಂದಿ ಚಿತ್ರಗಳ ಜೊತೆ ತೆಲುಗು, ಮಲಯಾಳಂ ಇಂಡಸ್ಟ್ರಿಯಲ್ಲೂ ಗುರುತಿಸಿಕೊಂಡಿರುವ ನೇಹಾ ದುಪಿಯಾ 37 ವರ್ಷ ವಯಸ್ಸಾದ್ರು ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಈಗಲೂ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ವಿಶ್ವಸುಂದರಿಯೂ ಮದುವೆ ಆಗಿಲ್ಲ

1994ರ 'ಮಿಸ್‌ ಯುನಿವರ್ಸ್' ಪಟ್ಟ ಗಿಟ್ಟಿಸಿಕೊಂಡಿರುವ ಸುಶ್ಮಿತಾ ಸೇನ್ ಮದುವೆಯಿಂದ ದೂರ ಉಳಿದಿದ್ದಾರೆ. ಆದ್ರೆ, 2010 ರಲ್ಲಿ ರೆನೀ ಹಾಗೂ ಅಲೀಸಾ ಎನ್ನುವ ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿರುವ ಸುಶ್ಮಿತಾ ಕೊನೆಗೂ ಮಾಂಗಲ್ಯ ಭಾಗ್ಯ ಪಡೆದುಕೊಂಡಿಲ್ಲ. ಈಕೆಯ ವಯಸ್ಸು ಈಗ 42ಕ್ಕೆ ಬಂದು ನಿಂತಿದೆ.

ಟಬು ಸಿಂಗಲ್

ವಯಸ್ಸು 46ರ ಗಡಿ ದಾಟಿದ್ದರು ನಟಿ ಟಬು ಇನ್ನೂ ಸಿಂಗಲ್‌. ಇಲ್ಲಿಯವರೆಗೂ ಹಲವು ಸ್ಟಾರ್ ನಟರ ಜತೆ ಸಂಬಂಧ ಹೊಂದಿದ್ದರು ಎಂಬ ಆರೋಪ ಇವರ ಮೇಲಿದೆ. ಆದ್ರೆ, ಮದುವೆ ಮಾತ್ರ ಆಗಿಲ್ಲ.

ಪ್ರಿಯಾಂಕಾ ಕಥೆಯೇನು?

ಬಾಲಿವುಡ್ ಸೂಪರ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಥೆಯೂ ಕೂಡ ಹೆಚ್ಚು ಕಡಿಮೆ ಇವರ ಸಾಲಿನಲ್ಲೇ ಇದೆ. ಪ್ರಿಯಾಂಕಾಗೆ ಈಗ ವಯಸ್ಸು 35. ಬಾಲಿವುಡ್, ಹಾಲಿವುಡ್ ಅಂತ ಸಿನಿಮಾ ಮಾಡ್ತಿದ್ದಾರೆ. ಅದ್ರೆ, ಮದುವೆ ಆಗ್ತಾರಾ? ಗೊತ್ತಿಲ್ಲ.

English summary
Bollywood Actresses Who Are Above 35 And Unmarried.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada