»   » ಸಲ್ಮಾನ್ ಗೂ ಮುನ್ನ ಜೈಲಿನಲ್ಲಿ ಕಂಡ ತಾರೆಗಳು

ಸಲ್ಮಾನ್ ಗೂ ಮುನ್ನ ಜೈಲಿನಲ್ಲಿ ಕಂಡ ತಾರೆಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ಅವರು ಸಕತ್ ಡಿಮ್ಯಾಂಡ್ ಇರುವಾಗಲೇ ಜೈಲು ಸೇರಿದ್ದಾರೆ. 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

ಇದಕ್ಕೂ ಮುನ್ನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಕೆಲ ಕಾಲ ಜೈಲುವಾಸ ಮಾಡಿದ ಅನುಭವ ಸಲ್ಮಾನ್ ಗಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇಬೇಕು. [ಸಲ್ಲೂ ಮೆಂಟಲ್ ಅಲ್ಲ, ಗಾಡ್ ಫಾದರ್ ಕಣ್ರಿ]

ತಪ್ಪು ಮಾಡಿ ಜೈಲು ಸೇರುವ ಸಾಮಾನ್ಯರ ಬಗ್ಗೆ ಜನ ಅಷ್ಟಾಗಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸಿನಿಮಾ ತಾರೆಗಳು ಜೈಲು ಪಾಲಾದರೆ ಅದೊಂದು ರೀತಿ ಸೆನ್ಸೇಷನ್ ನ್ಯೂಸ್. [ಸಲ್ಮಾನ್ ಗೆ ಮತ್ತೆ ಕಾಣಿಸಿದ ನರ ದೌರ್ಬಲ್ಯ]

ಹಿಂದಿ ಚಿತ್ರರಂಗಕ್ಕೂ ಕ್ರೈಂ ಜಗತ್ತಿಗೂ ಮುಂಚಿನಿಂದಲೂ ಭಾರಿ ನಂಟು ಇರುವುದು ಗುಟ್ಟಾದ ವಿಷಯವೇನಲ್ಲ. ಬಲರಾಜ್ ಸಾಹ್ನಿ ಮೊಟ್ಟ ಮೊದಲ ಬಾರಿಗೆ ಜೈಲು ಸೇರಿದಾಗ ಸಿನಿ ರಸಿಕರು ಬೆಚ್ಚಿದ್ದರು. [ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಆದರೆ, ಈಗ ಸ್ಟಾರ್ ಗಳು ಜೈಲಿನ ಅಂಗಳಕ್ಕೆ ತೆರಳಿದರೆ ಹೆಚ್ಚು ಸುದ್ದಿ ಮಾಡುವುದು ಮಾಧ್ಯಮಗಳು ಹಾಗೂ ತಾರೆಗಳ ಹುಚ್ಚು ಅಭಿಮಾನಿಗಳೇ ಹೊರತು ನಿಜವಾದ ಸಿನಿಮಾ ಪ್ರೇಮಿಗಳಲ್ಲ.

ಕಾಲ ಬದಲಾಗಿದೆ. ಸಂಜಯ್ ದತ್ ರಿಂದ ಸಲ್ಮಾನ್ ಖಾನ್ ತನಕ ಬಗೆ ಬಗೆ ಕ್ರೈಂಗಳಲ್ಲಿ ಸೆಲೆಬ್ರಿಟಿಗಳು ಆರೋಪಿಗಳಾಗಿ ವಿಚಾರಣೆ ಎದುರಿಸಿ ಅಪರಾಧಿಗಳಾಗಿ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಸಲ್ಮಾನ್ ಗೂ ಮೊದಲು ಜೈಲು ದರ್ಶನ ಮಾಡಿದ ಬಾಲಿವುಡ್ ತಾರೆಯರ ವಿವರ ಮುಂದಿದೆ....

ಮಧುಬಾಲಾ ಸಹ ಜೈಲು ಹಕ್ಕಿ

ಮೋಹಕ ತಾರೆ ಮಧುಬಾಲಾ ಸಹ ಅಷ್ಟೇ ಜೈಲು ಕದ ತಟ್ಟಿ ಬಂದವರೆ. ನಿರ್ದೇಶಕ ಬಿ.ಆರ್.ಛೋಪ್ರಾ ಅವರಿಂದ ಅಡ್ವಾನ್ಸ್ ಹಣ ತೆಗೆದುಕೊಂಡು ನಟಿಸಲು ನಿರಾಕರಿಸಿದ ಕಾರಣ ಅವರು ಜೈಲಿಗೆ ಹೋಗಿಬಂದಿದ್ದರು.

ಸಂಜಯ್ ದತ್

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ, ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ತಪ್ಪಿಗೆ 18 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು.

2013ರಲ್ಲಿ ಮತ್ತೊಮ್ಮೆ ಜೈಲುಶಿಕ್ಷೆಗೆ ಒಳಪಟ್ಟ ಸಂಜಯ್ ದತ್ ಸದ್ಯ ಜೈಲಿನಲ್ಲಿ ಕಾಲ ದೂಡುತ್ತಿದ್ದಾರೆ.

ಸಲ್ಮಾನ್ ಖಾನ್

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಕೆಲ ಕಾಲ ಜೈಲುವಾಸ ಮಾಡಿದ ಅನುಭವ ಸಲ್ಮಾನ್ ಗಿದೆ. ಆದರೆ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬರಬೇಕಿದೆ.

ಈಗ 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ದೋಷಿ ಎನಿಸಿರುವ ಸಲ್ಮಾನ್ 10 ವರ್ಷ ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ.

ಜಾನ್ ಅಬ್ರಹಾಂ

ಮಾವನ ಮನೆಗೆ ಹೋಗಿಬಂದಿದ್ದ ಜಾನ್ ಅಬ್ರಹಾಂ ಬೈಕ್ ರೈಡಿಂಗ್ ಎಂದರೆ ಕಾಲೇಜು ಹುಡುಗನಂತಾಗುವ ನಟ ಜಾನ್ ಅಬ್ರಹಾಂ. ಅತಿವೇಗವಾಗಿ ತನ್ನ ಸ್ಫೋರ್ಟ್ಸ್ ಬೈಕ್ ಓಡಿಸಿ ಇಬ್ಬರನ್ನು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಕಾಲ ಜೈಲು ಸೇರಿದ್ದರು.

ಸೈಫ್ ಅಲಿ ಖಾನ್

ಮುಂಬೈನ ಹೋಟೆಲ್ ವೊಂದರಲ್ಲಿ ಕಿತ್ತಾಟವಾಡಿಕೊಂಡು ಒಬ್ಬ ವ್ಯಕ್ತಿಯ ಮೂಗು ಮುರಿದು ಹಾಕಿದ ತಪ್ಪಿಗೆ ಸೈಫ್ ಅಲಿ ಖಾನ್ ಕೂಡಾ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು.

ಮೋನಿಕಾ ಬೇಡಿ

ಭೂಗತ ಜಗತ್ತಿನ ಸಂಪರ್ಕಕ್ಕೆ ಸಿಲುಕಿ ನಲುಗಿದ ನಟಿ ಮೋನಿಕಾ ಬೇಡಿ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಕಾರಣ ಪೋರ್ಚುಗಲ್ ನಲ್ಲಿ ಜೈಲು ಸೇರಬೇಕಾಯಿತು.

ಶೈನಿ ಅಹುಜಾ

ಫಿಲಂಫೇರ್ ಪ್ರಶಸ್ತಿ ಪಡೆದ ಬೆನ್ನಲ್ಲೇ ನಟ ಶೈನಿ ಅಹುಜಾ ಅವರು ಮನೆಕೆಲಸದಾಕೆಯನ್ನು ರೇಪ್ ಮಾಡಿದ ಆರೋಪದ ಮೇಲೆ ಜೈಲು ಸೇರಿ 27ದಿನಗಳ ಕಾಲ ಕಳೆದರು. ಮನೆ ಕೆಲಸದ ಹೆಂಗಸು ಕೇಸ್ ವಾಪಸ್ ಪಡೆದ ಮೇಲೆ ಶೈನಿಗೆ ರಿಲೀಫ್ ಸಿಕ್ಕಿತು.

ಫರ್ದೀನ್ ಖಾನ್

ಫಿರೋಜ್ ಖಾನ್ ಮಗ ಫರ್ದೀನ್ ಖಾನ್ ಅವರು ಕೂಡಾ 2001ರಲ್ಲಿ ಕೊಕೈನ್ ಹೊಂದಿದ್ದ ಕಾರಣ ಜೈಲು ಸೇರಿದ್ದರು. ನಂತರ ಮಾದಕ ವ್ಯಸನ ಮುಕ್ತ ಕೇಂದ್ರಕ್ಕೆ ರವಾನಿಸುವ ಭರವಸೆ ಮೇರೆಗೆ ಜೈಲಿನಿಂದ ಹೊರ ಬಂದರು.

ಮಧುರ್ ಭಂಡಾರ್ಕರ್

ಚಾಂದಿನಿ ಬಾರ್, ಪೇಜ್ 3, ಟ್ರಾಫಿಕ್ ಸಿಗ್ನಲ್ ಮುಂತಾದ ಉತ್ತಮ ಚಿತ್ರಗಳನ್ನು ನೀಡಿದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಉದಯೋನ್ಮುಖ ನಟಿಯೊಬ್ಬರನ್ನು ರೇಪ್ ಮಾಡಿದ ಆರೋಪದ ಮೇಲೆ ಕೆಲ ಕಾಲ ಜೈಲು ಸೇರಿದ್ದರು. ಅದರೆ, ಸರಿಯಾದ ಸಾಕ್ಷಿ ಸಿಗದ ಕಾರಣ ಜೈಲಿನಿಂದ ಹೊರ ಬಂದರು.

ಅಂಕಿತ್ ತಿವಾರಿ

ಗಾಯಕ ಅಂಕಿತ್ ತಿವಾರಿ ಅವರು ತನ್ನ ಗೆಳತಿಯನ್ನು ಅತ್ಯಾಚಾರ ಮಾಡಿದ ಆರೋಪ ಹೊತ್ತು ಜೈಲು ಸೇರಿದ್ದರು. ಅದರೆ, 15 ಸಾವಿರ ರು ದಂಡ, ಷರತ್ತುಬದ್ಧ ಜಾಮೀನು ಪಡೆದು ಮೇ 24, 2014ರಂದು ಹೊರಬಂದರು. [ವಿವರ ಇಲ್ಲಿ ಓದಿ]

English summary
Many Bollywood movie stars also knocked the doors of the jail. Here is the list of Bollywood Celebrities Who Went To Jail from Madhubala to Salman Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada