»   » ಸಲ್ಲೂ ಮೆಂಟಲ್ ಅಲ್ಲ, ಗಾಡ್ ಫಾದರ್ ಕಣ್ರಿ

ಸಲ್ಲೂ ಮೆಂಟಲ್ ಅಲ್ಲ, ಗಾಡ್ ಫಾದರ್ ಕಣ್ರಿ

Posted By:
Subscribe to Filmibeat Kannada

ಸಲ್ಮಾನ್ ಖಾನ್ ನಿಜಕ್ಕೂ ಮೆಂಟಲ್ ಕಣ್ರಿ ಎಂದು ಮೂದಲಿಸುವವರಿಗೇನು ಕಮ್ಮಿಯಿಲ್ಲ. ಆದರೆ, ಬಾಲಿವುಡ್ ಪಾಲಿಗೆ ಬ್ಯಾಡ್ ಬಾಯ್ ಆಗಿರುವ ಸಲ್ಲೂ, ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಚಿತ್ರರಂಗದಲ್ಲಿ ಅನಧಿಕೃತವಾಗಿ ಹಲವರಿಗೆ ಗಾಡ್ ಫಾದರ್ ಆಗಿರುವುದಂತೂ ಸತ್ಯ.

ಸಲ್ಮಾನ್ ಖಾನ್ ಅವರ ಲಿಸ್ಟ್ ಗೆ ಹೊಸ ಸೇರ್ಪಡೆ ಡೈಸಿ ಶಾ. ಯಾರಿವಳು ಎಲ್ಲೋ ಕೇಳಿದ ಹಾಗೆ ಇದೆಯಲ್ಲ ಎಂದು ಕೊಂಡರೆ, ಅದೇ ನಮ್ಮ ನವರಸನಾಯಕ ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರದಲ್ಲಿ ನಾಯಕಿಯಾಗಿದ್ದಳು. ಈಗ ಬಾಲಿವುಡ್ ನ ಬಾಡಿಗಾರ್ಡ್ ಸಲ್ಮಾನ್ ಜೊತೆ ಒಂದು ಹಾಡಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಇದರಲ್ಲಿ ಏನು ವಿಶೇಷ?

ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಮೆಂಟಲ್ ನಲ್ಲಿ ಒಂದು ಐಟಂ ಸಾಂಗ್ ಇದೆ. ಇದಕ್ಕೆ ಹೊಸ ಹುಡುಗಿಯ ತಲಾಶ್ ನಲ್ಲಿದ್ದ ಚಿತ್ರ ತಂಡದ ಕಣ್ಣಿಗೆ ಡೈಸಿ ಶಾ ಬಿದ್ದಿದ್ದಾರೆ. ಸದ್ಯಕ್ಕೆ ಮೆಂಟಲ್ ಚಿತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಚಿತ್ರದ ತಾರಾಗಣ ಗುಟ್ಟಾಗಿ ಇಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಐಟಂ ಸಾಂಗ್ ಕುಣಿಯಲು ಬಂದ ಡೈಸಿಯನ್ನೇ ಹಿರೋಯಿನ್ ಮಾಡಬಾರದು ಎಂದು ಸಲ್ಲೂ ಮಿಯಾ ಸಲಹೆ ನೀಡಿದ್ದಾನಂತೆ. ಒಟ್ಟಾರೆ ಡೈಸಿಗೆ ಬಾಲಿವುಡ್ ನಲ್ಲಿ ಗಟ್ಟಿನೆಲೆ ಒದಗಿಸಲು ಸಲ್ಮಾನ್ ಮನಸ್ಸು ಮಾಡಿದ್ದಾನೆ,. ಇದೇ ರೀತಿ ಸಲ್ಲೂ ಮಿಯಾ ಮತ್ಯಾರಿಗೆ ಹೆಲ್ಪ್ ಮಾಡಿದ್ದಾನೆ ಮುಂದೆ ನೋಡಿ...

ಡೈಸಿ ಕಥೆ

ಚಿತ್ರದ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕಿಯಾಗಿ ಗುರುತಿಸಿಕೊಂಡಿದ್ದ ಡೈಸಿಯಂತೂ ವಿಷ್ಯ ಕೇಳಿ ಹಿರಿ ಹಿರಿ ಹಿಗ್ಗಿದ್ದಾಳೆ. ಬ್ಲಡಿ ಇಶ್ಕ್ ಚಿತ್ರದಲ್ಲಿ ಐಟಂ ನಂಬರ್ ಬಿಟ್ಟರೆ ಬೇರೆ ಯಾವ ಚಿತ್ರವೂ ಡೈಸಿ ಕೈಲಿಲ್ಲ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದಷ್ಟು ಚಿತ್ರದಲ್ಲಿ ನಟಿಸಿದ್ದು ಸದ್ಯದ ಅನುಭವ.

ಸೋನಾಕ್ಷಿ ಸಿನ್ಹಾ

ಚುಲ್ ಬುಲ್ ಪಾಂಡೆ ಜೋಡಿಯಾಗಿ ರಜ್ಜು ಪಾಂಡೆಯಾಗಿ ದಬ್ಬಾಂಗ್ ನಲ್ಲಿ ಕಾಣಿಸಿಕೊಂಡ ನಟ ಶತ್ರುಘ್ನ ಸಿನ್ಹಾ ಅವರ ಮಗಳು. ಸಲ್ಮಾನ್ ಜೊತೆ ಜೋಡಿ ಎಲ್ಲರಿಗೂ ಮೋಡಿ ಮಾಡಿತು. ಸಲ್ಲೂ ಸೋದರ ಅರ್ಬಾಜ್ ಖಾನ್ ಕೂಡಾ ನಿರ್ದೇಶಕರಾಗಿ ಮಿಂಚಿದ್ದರು.

ಹಜೆಲ್ ಕೀಚ್

ಲಂಡನ್ ಮೂಲದ ಯುವ ಪ್ರತಿಭೆ ಕೀಚ್ ಗೆ ಬಾಡಿಗಾರ್ಡ್ ಚಿತ್ರದಲ್ಲಿ ಸಲ್ಲೂ ಅವಕಾಶ ಕೊಡಿಸಿದ. ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರವಾದರೂ ಸಲ್ಲೂ ಕೃಪೆಯಿಂದ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿತು. ತಮಿಳು, ತೆಲುಗು ಚಿತ್ರಗಳ ಕಡೆಗೆ ಕೀಚ್ ಮುಖ ಮಾಡಿದ್ದಾಳೆ.

ಜರೆನ್ ಖಾನ್

ಕತ್ರೀನಾ ಕೈಫ್ ಹೋಲಿಕೆ ಇರುವ ಜರೇನ್ ಖಾನ್ ಕೂದಾ ಲಂಡನ್ ಮೂಲದ ಬೆಡಗಿ. ಸುಭಾಷ್ ಘಾಯ್ ನಟನೆ ಕಲಿಕೆ ಶಾಲೆಯಲ್ಲಿ ಈಕೆಯನ್ನು ನೋಡಿದ್ದೆ ತಡ. ಸಲ್ಮಾನ್ ತನ್ನ ಚಿತ್ರಕ್ಕೆ ಬುಕ್ ಮಾಡಿಕೊಂಡುಬಿಟ್ಟ. ಐತಿಹಾಸಿಕ ಕಥೆಯುಳ್ಳ ವೀರ್ ನಲ್ಲಿ ಅವಕಾಶ ಪಡೆದ ಜರೇನ್, ರೆಡಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದಳು.

ಕತ್ರೀನಾ ಕೈಫ್

ಬ್ರಿಟಿಷ್ ಮೂಲದ ಬೆಡಗಿ ಕತ್ರೀನಾ ಕೈಫ್ ಹಾಗೂ ಸಲ್ಮಾನ್ ಖಾನ್ ಅವರ ಪ್ರಣಯ ಕುರಿತ ಗಾಸಿಪ್ ಏನೇ ಇದ್ದರೂ ಕೈಫ್ ಗೆ ಮೈ ನೇ ಪ್ಯಾರ್ ಕ್ಯೂ ಕಿಯಾ ದಲ್ಲಿ ಸಲ್ಲೂ ಛಾನ್ಸ್ ಕೊಡಿಸಿದ್ದಲ್ಲದೆ, ಮುಂದೊಂದು ದಿನ ಇದೇ ಪ್ರಶ್ನೆಯನ್ನು ಕೈಫ್ ಮನಸ್ಸಿನಲ್ಲಿ ನೂರು ಬಾರಿ ಹೇಳಿಕೊಳ್ಳುವಂತೆ ಮಾಡಿಬಿಟ್ಟ. ಸದ್ಯಕ್ಕೆ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಲು ಸಲ್ಲೂ ಪರೋಕ್ಷವಾಗಿ ಕಾರಣ.

ಮೆಂಟಲ್ ಕೂಡಾ ರಿಮೇಕ್

ಅಂದಹಾಗೆ ಮೆಂಟಲ್ ಚಿತ್ರ 2006ರಲ್ಲಿ ತೆರೆಕಂಡ ಚಿರಂಜೀವಿ, ತ್ರಿಶಾ ಅಭಿನಯದ ತೆಲುಗು ಚಿತ್ರ ಸ್ಟಾಲಿನ್ ನ ರಿಮೇಕ್. ಮೊದಲಿಗೆ ಚಿತ್ರಕ್ಕೆ ರಾಧೆ ಎಂದು ಹೆಸರಿಡಲಾಗಿತ್ತು. ಅದರೆ, ನಂತರ ಚಿತ್ರದ ಹೆಸರನ್ನು ಮೆಂಟಲ್ ಎಂದು ಬದಲಾಯಿಸಲಾಗಿದೆ.

English summary
Salman Khan and Daisy Shah to shoot a song sequence in Dubai for ‘Mental’. Just as Salman helped the likes of Sonakshi Sinha, Hazel Keech, Zarine Khan, and Katrina Kaif to find a foothold in the industry, Daisy Shah’s career,
Please Wait while comments are loading...