»   » ಸಲ್ಮಾನ್ ಗೆ ಮತ್ತೆ ಕಾಣಿಸಿದ ನರ ದೌರ್ಬಲ್ಯ

ಸಲ್ಮಾನ್ ಗೆ ಮತ್ತೆ ಕಾಣಿಸಿದ ನರ ದೌರ್ಬಲ್ಯ

Posted By:
Subscribe to Filmibeat Kannada
Salman Khan to visit US for health check-up!
ಬಾಲಿವುಡ್ ನ ಅತ್ಯಂತ ಜನಪ್ರಿಯ ನಟ ಸಲ್ಮಾನ್ ಖಾನ್ ಮತ್ತೆ ಅಮೆರಿಕಕ್ಕೆ ಹಾರುತ್ತಿದ್ದಾರೆ. ಆದರೆ, ಶೂಟಿಂಗ್ ಗಾಗಿ ಅಲ್ಲ. ಮತ್ತೊಮ್ಮೆ ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್ ಗೆ ನರ ದೌರ್ಬಲ್ಯ ಕಾಣಿಸಿಕೊಂಡಿದೆಯಂತೆ .

2011ರ ಅಗಸ್ಟ್ ತಿಂಗಳಿನಲ್ಲಿ ಸಲ್ಮಾನ್ ಖಾನ್ ಒಂದು ಬಾರಿ ಸರ್ಜರಿ ಮಾಡಿಸಿಕೊಂಡಿದ್ದರು. ಆದರೆ, ಡಾಕ್ಟರ್ ಹೇಳಿದಂತೆ ಕಟ್ಟುನಿಟ್ಟಾದ ಪಥ್ಯ, ವಿಶ್ರಾಂತಿ ಪಡೆಯದ ಕಾರಣ ಮತ್ತೊಮ್ಮೆ ದೌರ್ಬಲ್ಯ ಉಲ್ಬಣಿಸಿದೆಯಂತೆ.

Trigeminal Neuralgia ಎಂಬ ನರ ಸಂಬಂಧಿತ ವ್ಯಾಧಿಯಿಂದ ಸಲ್ಮಾನ್ ಬಳಲುತ್ತಿದ್ದಾರೆ. ಇದರಿಂದ ಮುಖ ಕಿವಿಚಲು ಸಹ ಆಗದಂತೆ ಅಸಾಧ್ಯ ನೋವು ಕಾಣಿಸಿಕೊಳ್ಳುತ್ತಿರುವುದು ಸಲ್ಲೂ ಸಹಿಸಲು ಆಗುತ್ತಿಲ್ಲ ಎಂದು ತಿಳಿದು ಬಂದಿದೆ.

2011ರಲ್ಲಿ ಸುಮಾರು 5 ಗಂಟೆಗಳ ಕಾಲ ಸರ್ಜರಿ ನಡೆಸಿ ಸಲ್ಲೂಗೆ ಆರೋಗ್ಯ ಸುಧಾರಣೆ ಮಾಡಲಾಗಿತ್ತು. ಆದರೆ, ಈಗ ಮತ್ತೊಮ್ಮೆ ಸರ್ಜರಿ ಅಗತ್ಯವಿದೆ. ಸಲ್ಮಾನ್ ಅರೋಗ್ಯ ಚೆನ್ನಾಗಿದೆ.

ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಸದ್ಯಕ್ಕಂತೂ ಸಲ್ಲೂಗೆ ಬಿಡುವು ಸಿಗುತ್ತಿಲ್ಲ. ಬಿಡುವು ಸಿಕ್ಕ ತಕ್ಷಣಕ್ಕೆ ಯುಎಸ್ ಗೆ ಹಾರಲಿದ್ದಾನೆ ಎಂದು ಸಲ್ಮಾನ್ ಖಾನ್ ಸೋದರ ಸೋಹೈಲ್ ಖಾನ್ ಹೇಳಿದ್ದಾರೆ.

ಸುಮಾರು 7 ವರ್ಷಗಳಿಂದ ಸಲ್ಮಾನ್ ಖಾನ್ ಗೆ ಈ ನರ ದೌರ್ಬಲ್ಯ ಕಾಡುತ್ತಿದ್ದು, ಕೆಲ ವರ್ಷಗಳ ಹಿಂದೆ ವಾಸಿಯಾಗಿತ್ತು. ಆದರೆ, ಕಳೆದ ವರ್ಷದಿಂದ ಮತ್ತೆ ಕಾಣಿಸಿಕೊಳ್ಳುತ್ತಿದೆ ಎಂದು ಕುಟುಂಬ ಮೂಲಗಳು ಹೇಳಿದೆ.

ಆರಂಭದಲ್ಲಿ ಸಲ್ಲೂ ಶಸ್ತ್ರಚಿಕಿತ್ಸೆ ಸುದ್ದಿಗಳು ಲೀಕ್ ಆದಾಗ, ಇದೆಲ್ಲಾ ಗಾಳಿಸುದ್ದಿ ಎಂದು ಅಭಿಮಾನಿಗಳು ಹೇಳಿದ್ದದ್ದರು. ಆದರೆ, ಸ್ವತಃ ಸಲ್ಮಾನ್ ತಮಗೆ ಶಸ್ತ್ರಚಿಕಿತ್ಸೆ ಆಗಿರುವ ಬಗ್ಗೆ ಸ್ಪಷ್ಟಪಡಿಸಿದರು. ಈಗಾಗಲೆ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ತುರ್ತು ಇನ್ನೊಂದು ಸರ್ಜರಿ ಆಗಬೇಕಾಗಿದೆ ಎಂದು ವೈದ್ಯರು ಸೂಚಿಸಿದ್ದಾಗಿ ಸಲ್ಲೂ ಹೇಳಿಕೊಂಡಿದ್ದರು.

ಇದೆಲ್ಲ ಏಕ್ ಥ ಟೈಗರ್ ಚಿತ್ರಕ್ಕೂ ಹಿಂದಿನ ಮಾತು. ಈಗಾಗಲೇ ವೈದ್ಯರು ನೀಡಿರುವ ಅವಧಿ ಮುಗಿದು ತುಂಬಾ ವಿಳಂಬವಾಗುತ್ತಿದೆ. ಆದರೆ, ಸಲ್ಲೂ ಮಾತ್ರ ನೋವು ನುಂಗಿಕೊಂಡು ನಿರ್ಮಾಪಕರಿಗೆ ಕೊಟ್ಟ ಡೇಟ್ಸ್ ಹಾಳಾಗದಂತೆ ಎಲ್ಲಾ ಚಿತ್ರೀಕರಣ ಮುಗಿಸಿ ನಂತರ ಶಸ್ತ್ರಚಿಕಿತ್ಸೆಗೆ ಹೋಗುತ್ತೀನಿ ಎನ್ನುತ್ತಿದ್ದಾರೆ.

English summary
Superstar Salman Khan will be heading to the US for treatment once again. In August 2011, Salman had undergone a surgery as he was suffering from 'Trigeminal Neuralgia', a nerve disorder that caused him intense pain in the face.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada