For Quick Alerts
  ALLOW NOTIFICATIONS  
  For Daily Alerts

  ಹಿಂದಿ ಹಾಸ್ಯ ನಟ ರಝಾಕ್ ಇನ್ನು ನೆನಪು ಮಾತ್ರ

  By ಸೋನು ಗೌಡ
  |

  ಬಾಲಿವುಡ್ ನ ಖ್ಯಾತ ನಟ ಹಾಗೂ ಹಿಂದಿ ಕಿರುತೆರೆ ನಟ ರಝಾಕ್ ಖಾನ್ ಅವರು ಬುಧವಾರ (ಜೂನ್ 1) ದಂದು ಬೆಳಗ್ಗೆ ಹೃದಯಘಾತದಿಂದ ನಿಧನ ಹೊಂದಿದ್ದಾರೆ.

  ಸುಮಾರು 100ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಅಭಿನಯ ಮಾಡಿದ್ದ ರಝಾಕ್ ಖಾನ್ ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ರಝಾಕ್ ಅವರ ಸಹೋದರ ಶೆಹಝಾದ್ ಖಾನ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

  ಇಂದು ಮುಂಜಾನೆ ಸುಮಾರು 12.30ರ ಸಮಯದಲ್ಲಿ ರಝಾಕ್ ಅವರಿಗೆ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  ಇವರು 'ಹಲೋ ಬ್ರದರ್', 'ಬಾದ್ ಷಾಹ್', 'ರೂಪ್ ಕೀ ರಾಣಿ ಚೋರೋ ಕಾ ರಾಜಾ', 'ಹಸೀನಾ ಮಾನ್ ಜಾಯೇಗಿ', 'ರಾಜಾ ಹಿಂದೂಸ್ತಾನ್', 'ಹೆರ ಫಿರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಹಲವಾರು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

  ಹಲವರ ನಗುವಿಗೆ ಕಾರಣವಾಗಿದ್ದ ರಝಾಕ್ ಅವರು ಇಂದು ಎಲ್ಲರನ್ನು ಅಗಲಿದ್ದಾರೆ. ಇವರು ನಟಿಸಿದ ಕೊನೆಯ ಸಿನಿಮಾ 'ಕ್ಯಾ ಕೂಲ್ ಹೈ ಹಮ್ 3'. ಒಬ್ಬ ಅದ್ಭುತ ಕಾಮಿಡಿ ನಟನನ್ನು ಕಳೆದುಕೊಂಡ ಬಿಟೌನ್ ಕಂಬನಿ ಮಿಡಿದಿದೆ.

  English summary
  Bollywood actor Razak Khan, who made the audiences laugh all throughout the 90s through his unique brand of comedy breathed his last on June 1, 2016. The actor passed away due to cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X