»   » ದಶಕದ ಸಂಭ್ರಮದಲ್ಲಿ ಬಾಲಿವುಡ್ ಮಾಜಿ ಪ್ರೇಮಿಗಳು

ದಶಕದ ಸಂಭ್ರಮದಲ್ಲಿ ಬಾಲಿವುಡ್ ಮಾಜಿ ಪ್ರೇಮಿಗಳು

Posted By:
Subscribe to Filmibeat Kannada

ಸುಮಾರು ವರ್ಷಗಳ ಕಾಲ ಬಾಲಿವುಡ್ ಅಂಗಳದಲ್ಲಿ ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡಿದ್ದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಇದೀಗ ದಶಕದ ಸಂಭ್ರಮದಲ್ಲಿದ್ದಾರೆ.

ಅರೇ... ಇವರಿಬ್ಬರು ಬ್ರೇಕ್ ಅಪ್ ಆಗಿ ಸಾಕಷ್ಟು ವರ್ಷಗಳಾಯ್ತು. ಈಗ ಯಾವ ಸಂಭ್ರಮ ಅಂತ ಯೋಚಿಸಬೇಡಿ. ಇಬ್ಬರು ಸ್ಟಾರ್ ಗಳು ಬಾಲಿವುಡ್ ಚಿತ್ರರಂಗ ಪ್ರವೇಶ ಮಾಡಿ ದಶಕ ಕಳೆದಿದೆ.

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ... 2007ರಲ್ಲಿ ತಮ್ಮ ಸಿನಿಮಾ ಜರ್ನಿ ಪ್ರಾರಂಭ ಮಾಡಿದರು. ಅಂದಿನಿಂದ ಇಲ್ಲಿಯವರೆಗೂ ಸಕ್ಸಸ್ ಹಾದಿಯಲ್ಲಿ ಓಡುತ್ತಿರುವ ಇಬ್ಬರೂ, ಇಂದಿಗೆ ಬಾಲಿವುಡ್ ಸಿನಿಮಾರಂಗದಲ್ಲಿ ಹತ್ತು ವರ್ಷಗಳನ್ನ ಪೂರೈಸಿದ್ದಾರೆ.

ಒಟ್ಟೊಟ್ಟಿಗೆ ಸಂತಸ

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಈಗ ಮಾಜಿ ಪ್ರೇಮಿಗಳು. ಸಾಕಷ್ಟು ವರ್ಷ ಜೋಡಿಯಾಗಿ ತಿರುಗಾಡಿದ ಇವರಿಬ್ಬರಿಗೂ ಹತ್ತು ವರ್ಷದ ಪೂರೈಸಿದ ಸಂತಸ. ಒಂದು ಕಡೆ ದೀಪಿಕಾ ಅಭಿಮಾನಿಗಳು ಡಿಂಪಿಗೆ ಶುಭ ಕೋರಿದ್ರೆ ಮತ್ತೊಂದು ಕಡೆ ರಣಬೀರ್ ಫಾನ್ಸ್ ಟ್ವಿಟ್ಟರ್ ನಲ್ಲಿ ಹತ್ತು ವರ್ಷದ ಸಂಭ್ರಮದ ಬಗ್ಗೆ ವಿಷ್ ಮಾಡ್ತಿದ್ದಾರೆ

ಮತ್ತೆ ಜೋಡಿಯಾಗಿ ಕಾಣಿಸಿಕೊಳ್ತಾರಾ.?

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಿರುವ ಎಲ್ಲಾ ಸಿನಿಮಾಗಳು ಸಕ್ಸಸ್ ಆಗಿವೆ. ಇತ್ತೀಚಿಗೆ ದೀಪಿಕಾ-ರಣವೀರ್ ಜೊತೆ ಬ್ಯುಸಿ ಆಗಿದ್ದು, ಇನ್ನು ಮುಂದಿನ ದಿನಗಳಲ್ಲಿ ದೀಪಿಕಾ ರಣಬೀರ್ ಜೊತೆ ಅಭಿನಯಿಸೋದು ಡೌಟು

ಕನ್ನಡ ಸಿನಿಮಾ ಲೆಕ್ಕವೇ ಇಲ್ಲ

ದೀಪಿಕಾ ಪಡುಕೋಣೆ ಮೊದಲಿಗೆ ಅಭಿನಯಿಸಿದ್ದು ಕನ್ನಡ ಸಿನಿಮಾದಲ್ಲಿ. ಆದ್ರೆ ದೀಪಿಕಾ ಇತ್ತೀಚಿನ ಒಂದು ಸಂದರ್ಶನದಲ್ಲಿ ನನ್ನ ಮೊದಲ ಸಿನಿಮಾ 'ಓಂ ಶಾಂತಿ ಓಂ' ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಕನ್ನಡ ಸಿನಿಮಾ ಅಭಿಮಾನಿಗಳು ಗರಂ ಆಗಿದ್ದಾರೆ.

ಶಾರುಖ್-ಫರಾನ್ ಸಂತಸ

ದೀಪಿಕಾ ಪಡುಕೋಣೆಯನ್ನ ಬಾಲಿವುಡ್ ಸಿನಿಮಾರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕಿ ಫರಾ ಖಾನ್. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಫರಾಖಾನ್ ಬರೆದುಕೊಂಡಿದ್ದು ಶಾರೂಖ್ ಕೂಡ ಇದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ಮಾಜಿ ಪ್ರೇಮಿಗಳು ಸಕ್ಸಸ್ ಅನ್ನ ಒಟ್ಟಿಗೆ ಸೆಲಬ್ರೇಟ್ ಮಾಡಿಕೊಳ್ತಿರೋದು ಮಾತ್ರ ಖುಷಿಯ ವಿಚಾರ.

English summary
Deepika Padukone and Ranbir Kapoor complete 10 years in bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X