For Quick Alerts
ALLOW NOTIFICATIONS  
For Daily Alerts

ಬೆಳ್ಳಿ ಪರದೆಗೆ ನರೇಂದ್ರ ಮೋದಿ ಜೀವನ ಚರಿತ್ರೆ

By Rajendra
|

'ಫ್ಲೈಯಿಂಗ್ ಸಿಖ್' ಎಂದೇ ಖ್ಯಾತರಾಗಿರುವ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನ ಕಥೆಯಾಧಾರಿತ 'ಭಾಗ್ ಮಿಲ್ಕಾ ಭಾಗ್' ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಚಿತ್ರ ರು.100 ಕೋಟಿ ಬಾಚಿದ್ದೇ ತಡ ಬಾಲಿವುಡ್ ಚಿತ್ರರಂಗ ಈಗ ಇಂತಹದ್ದೇ ಮತ್ತಷ್ಟು ಕಥೆಗಳ ತಲಾಷ್ ನಲ್ಲಿದೆ.

ಖ್ಯಾತ ಬಾಕ್ಸರ್ ಮಾರಿ ಕಾಮ್ (ಪ್ರಿಯಾಂಕಾ ಚೋಪ್ರಾ) ಹಾಗೂ ಗಾಯಕ ಕಿಶೋರ್ ಕುಮಾರ್ (ರಣಬೀರ್ ಕಪೂರ್) ಅವರ ಜೀವನ ಕಥೆಗಳು ಚಿತ್ರಗಳಾಗುತ್ತಿದೆ. ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಈಗಾಗಲೆ ಈ ಬಗ್ಗೆ ಮಾತನಾಡಲು ಮೋದಿ ಅವರ ಕಚೇರಿಯನ್ನೂ ಸಂಪರ್ಕಿಸಲಾಗಿದೆ. ಆದರೆ ಅಲ್ಲಿಂದ ಇನ್ನೂ ಯಾವುದೇ ವರ್ತಮಾನ ಬಂದಿಲ್ಲ.

"ನರೇಂದ್ರ ಮೋದಿ ಅವರ ಜೀವನ ಪಯಣ ನನಗೆ ಸಾಕಷ್ಟು ಸ್ಫೂರ್ತಿ ನೀಡಿದೆ. ಶ್ರೀಸಾಮಾನ್ಯನಾಗಿ ಚಾಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅವರು ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದದ್ದು ನಿಜಕ್ಕೂ ಅದ್ಭುತ. ಅವರ ಜೀವನದ ವಿವಿಧ ಘಟ್ಟಗಳನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಮಿತೇಶ್ ಪಟೇಲ್.

ಅವರ ಬಾಲ್ಯ, ಆರ್ಎಸ್ಎಸ್ ನೊಂದಿಗಿನ ಒಡನಾಡ, ಮುಖ್ಯಮಂತ್ರಿಯಾಗುವ ತನಕ ಅವರ ಪಯಣವನ್ನು ಚಿತ್ರದಲ್ಲಿ ನೋಡಬಹುದು. ಹಾಗಂತ ಇದು ಮೋದಿ ಅವರ ಯಥಾವತ್ ಜೀವನ ಚರಿತ್ರೆಯಲ್ಲ. ಅವರ ಸ್ಫೂರ್ತಿದಾಯಕ ಅಂಶಗಳನ್ನಿಟ್ಟುಕೊಂಡು ಒಂದಷ್ಟು ಕಾಲ್ಪನಿಕ ಅಂಶಗಳೊಂದಿಗೆ ಕಥೆಯನ್ನು ಹೆಣೆದಿದ್ದೇವೆ ಎನ್ನುತ್ತಾರೆ ಪಟೇಲ್. [ಮೋದಿ ಪರ ಹೇಳಿಕೆ ಎಲ್ಲವೂ ಫೇಕ್ ಫೇಕ್]

ತಮ್ಮ ಕಥೆಗೆ ಮೋದಿ ಅವರ ಒಪ್ಪಿಗೆ ಪಡೆಯದಿದ್ದರೂ ಈ ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿರುವುದಿಲ್ಲ. ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ತಮಗೆ ಇಷ್ಟವಿಲ್ಲ ಎನ್ನುತ್ತಾರೆ ನಿರ್ದೇಶಕರು. ಮೋದಿ ಅವರ ಪಾತ್ರಕ್ಕೆ ಬಾಲಿವುಡ್ ನಟ ಪರೇಶ್ ರಾವಲ್ ಅವನ್ನು ಆಯ್ಕೆ ಮಾಡಲಾಗಿದೆ. ಗುಜರಾತಿನ ವಡೋದರಾ ಮೂಲಕ ನಿರ್ದೇಶಕರು ಸದ್ಯಕ್ಕೆ ಯುಎಸ್ಎ (ಕ್ಯಾಲಿಫೋರ್ನಿಯಾ) ಸೆಟ್ಲ್ ಆಗಿದ್ದಾರೆ. (ಏಜೆನ್ಸೀಸ್)

English summary
Producer cum director Mitesh Patel has confirmed that he is making a film on Gujarat chief minister Narendra Modi. A common man who worked at a tea stall, rose to the level of a chief minister in India. 'We’ll try to cover various parts of his life' says the director.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more