»   » ಬ್ಲಾಕ್ ಮನಿ ಬಿರುಗಾಳಿಗೆ ಸಿಕ್ಕು ನಡುಗುತ್ತಿದೆ ಬಾಲಿವುಡ್

ಬ್ಲಾಕ್ ಮನಿ ಬಿರುಗಾಳಿಗೆ ಸಿಕ್ಕು ನಡುಗುತ್ತಿದೆ ಬಾಲಿವುಡ್

Posted By:
Subscribe to Filmibeat Kannada
Movie Reel Iamge
ಬಾಲಿವುಡ್ ಚಿತ್ರ ನಿರ್ದೇಶಕರಾದ ಅನುಭವ ಸಿನ್ಹಾ, ಅನೀಸ್ ಬಾಜ್ಮಿ ಮತ್ತು ವಶು ಭಗ್ನಾನಿ ಅವರುಗಳು 'ಬ್ಲಾಕ್ ಮನಿ' ಉಪಯೋಗದ ಚರ್ಚೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದಾರೆ. ಇದು 'Cobrapost-IBN Network Expose' ಅಡಿಯಲ್ಲಿ ನಡೆದಿದೆ ಎನ್ನಲಾಗಿದ್ದು ಸಾಕ್ಷಿಯಾಗಿ ವಿಡಿಯೋ ಟೇಪ್ ದೊರಕಿದೆ. ಸಿನಿಮಾ ಉದ್ಯಮದಲ್ಲಿ ಕಪ್ಪು ಹಣ (ಬ್ಲಾಕ್ ಮನಿ) ಯನ್ನು ಹೇಗೆ ಉಪಯೋಗಿಸಬಹುದು ಎಂಬ ಚರ್ಚೆಯಲ್ಲಿ ಅವರುಗಳು ತೊಡಗಿದ್ದರೆನ್ನಲಾಗಿದೆ.

ಈ ಸುದ್ದಿಯಿಂದ ಇಡೀ ಬಾಲಿವುಡ್ ಭಾರೀ 'ಶಾಕ್'ಗೆ ಒಳಗಾಗಿದೆ. ಈ ವಿಷಯವನ್ನು ಕೇಳಿರುವ ಬಾಲಿವುಡ್ ಘಟಾನುಘಟಿಗಳು ಇದನ್ನು ನಂಬಲು ಸಿದ್ಧರಿಲ್ಲ. ತಮ್ಮ ಆತ್ಮೀಯರ ಹೆಸರನ್ನೇ ಕೇಳಿದವರಂತೂ ಇದು ಸುಳ್ಳೇ ಸುಳ್ಳು ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಿರ್ದೇಶಕ ಮುಖೇಶ್ ಭಟ್ "ಈ ಸುದ್ದಿ ತಿಳಿದ ನನಗೆ ನಿಜವಾಗಿಯೂ ಶಾಕ್ ಆಗಿದೆ. ಆದರೆ ಕಾರ್ಪೋರೇಟ್ ಸಂಸ್ಥೆಗಳು ಇದನ್ನು ತಡೆಯಲು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲವು" ಎಂದಿದ್ದಾರೆ.

ಈ ವಿಷಯಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿರುವ ನಟ ಕಬೀರ್ ಬೇಡಿ ಮಾತನಾಡಿ "ನಾನು ಈ ವಿಷಯ ತಿಳಿದು ನಿಜವಾಗಿಯೂ ಶಾಕ್ ಆಗಿದ್ದೇನೆ. ಆದರೆ ಮುಖೇಶ್ ಭಟ್ ಹೇಳಿದಂತೆ ಇದನ್ನು ತಡೆಯುವ ಸಾಮರ್ಥ್ಯ ಉದ್ಯಮಕ್ಕಿದೆ" ಎಂದು ಹೇಳಿದ್ದಾರೆ. ಈ ಕಪ್ಪು ಹಣದ ಸರಪಳಿಯಲ್ಲಿ ಬಂಧಿಯಾಗಿರುವ ಅನೀಸ್ ಬಾಜ್ಮಿ, ರಾಜೀವ್ ಕೌಲ್ ಹಾಗೂ ನಿರ್ಮಾಪಕ ಸಂದೀಪ್ ಮಾರ್ವಾ ಇವರುಗಳು ತಮ್ಮ ಹೇಳಿಕೆಯನ್ನು ನೀಡಲು ಕಾದಿದ್ದಾರೆ.

ಅನೀಸ್ ಬಾಜ್ಮಿ ಮಾತನಾಡಿ "ಇಲ್ಲಿ ಕಪ್ಪು ಹಣ ಎಂಬ ಮಾತೇನೂ ಇಲ್ಲ. ನನಗೆ ದುಡ್ಡು ತೆಗೆದುಕೊಳ್ಳುವುದು ಮಾತ್ರ ಗೊತ್ತು. ಅದು ಕಪ್ಪು ಹಣವೋ ಏನೋ ಎಂಬ ವಾಸ್ತವದ ಅರಿವೇನೂ ಇರಲಿಲ್ಲ" ಎಂದಿದ್ದಾರೆ. ಅದೇ ರೀತಿ ಹೇಳಿಕೆಗಳು ಸಂದೀಪ್ ಮಾರ್ವಾ ಹಾಗೂ ರಾಜೀವ್ ಕೌಲ್ ಅವರರಿಂದಲೂ ಬಂದಿವೆ.

ಇನ್ನೊಂದು ಬೆಳವಣಿಗೆಯಲ್ಲಿ ನಟಿ ಪಾಯಲ್ ರೌಟಗಿ, ತಾವು ಯಾವುದೇ ಬ್ಲಾಕ್ ಮನಿಯನ್ನು ಕೇಳಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅವರು ರು. 25 ಲಕ್ಷ ನಗದು ಹಾಗೂ ರು. 5 ಲಕ್ಷ ಚೆಕ್ ಕೇಳಿರುವುದು ಗೊತ್ತಾಗಿತ್ತು. ಆದರೆ, ಕರಾರು ಪತ್ರದ ನಿಯಮಕ್ಕನುಸಾರವಾಗಿಯೇ ತಾನು ಇದನ್ನು ಪಡೆದಿದ್ದು, ಇದು ಯಾವುದೇ ರೀತಿಯಲ್ಲೂ ಕಪ್ಪು ಹಣ ಅಲ್ಲ" ಎಂದು ಆಕೆ ಹೇಳಿಕೊಂಡಿದ್ದಾರೆ.

ಬಾಲಿವುಡ್ ಉದ್ಯಮದವರ ಹೇಳಿಕೆ ಬಿಟ್ಟು ಹೊರಗಿನವ ಹೇಳಿಕೆ ಗಮನಿಸಿದರೆ ಬಾಲಿವುಡ್ ಚಿತ್ರರಂಗದಲ್ಲಿ ಕಪ್ಪು ಹಣ ಓಡಾಡುತ್ತಿರುವುದು ಖಂಡಿತ ಹೌದು ಎಂಬ ಅಭಿಪ್ರಾಯ ಬಂದಿದೆ. ಹಿರಿಯ ನ್ಯಾಯಾಧೀಶ ಮಹೇಶ್ ಜೇಠ್ಮಲಾನಿ ಪ್ರಕಾರ ರಾಜಕೀಯ ಕ್ಷೇತ್ರದ ಹಣವು ನಮ್ಮಲ್ಲಿ (ಬಾಲಿವುಡ್) ಅತ್ಯಂತ ಸುಲಭವಾಗಿ ಹಣ ಸಿಗುವ ಮೂಲ. ಯಾವುದನ್ನು ಅಲ್ಲಗಳೆಯಲಾಗದು" ಎಂದಿದ್ದಾರೆ.

ಈಗ್ಗೆ ಸಾಕಷ್ಟು ವರ್ಷಗಳ ಹಿಂದೆಯೇ ಬಾಲಿವುಡ್ ಉದ್ಯಮದಲ್ಲಿ ಕಪ್ಪುಹಣ ಓಡಾಡುತ್ತಿದೆ ಎಂಬ ಸುದ್ದಿ ರೆಕ್ಕೆ-ಪುಕ್ಕ ಸಹಿತ ಹಾರಾಡುತ್ತಿದೆ. ಅದಕ್ಕೆ ಸರಿಯಾದ ಸಾಕ್ಷಿ ಸಿಕ್ಕಿರಲಿಲ್ಲ. ಈಗಲೂ ಅಷ್ಟೇ, ಸಿಕ್ಕ ಚಿಕ್ಕ ಸಾಕ್ಷಿ ಅದನ್ನು ಸಾಬೀತುಪಡಿಸಲು ಸಾಧ್ಯ ಎಂಬ ನಂಬಿಕೆಯೇನಿಲ್ಲ. ಸಿಕ್ಕ ಸಾಕ್ಷಿಯ ಜಾಡನ್ನೇ ಹಿಡಿದು ತನಿಖೆ ನಡೆಸಿದರೆ ನಿಜ ಯಾವುದೆಂದು ಬಯಲಾದೀತು! (ಏಜೆನ್ಸೀಸ್)

English summary
Popular filmmakers Anubhav Sinha, Anees Bazmee and Vashu Bhagnani were caught on tape discussing the use of black money in the industry in a Cobrapost-IBN Network Expose. While most of the filmmakers denied their on camera claims. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada