»   » ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ

ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ

By: ಜೀವನರಸಿಕ
Subscribe to Filmibeat Kannada

ಸೌತ್ ಇಂಡಿಯಾದಿಂದ ಯಾರಾದ್ರೂ ಆರ್ಟಿಸ್ಟ್ ಗಳು ಅಥವಾ ಟೆಕ್ನಿಷಿಯನ್ ಗಳು ಬಂದಿದ್ದಾರೆ ಅಂದ್ರೆ ಬಾಲಿವುಡ್ ಅವರನ್ನು ಗುರುತಿಸೋದು ಹೈದರಾಬಾದಿನವರು ಇಲ್ಲದಿದ್ರೆ ಚೆನ್ನೈನವ್ರು ಅಂತ. ಒಂದು ವೇಳೆ ಮಲೆಯಾಳಂ ಅಂದ್ರೂ ಗೊತ್ತಾಗಬಹುದು ಆದ್ರೆ ಕನ್ನಡ ಅಷ್ಟಕ್ಕಷ್ಟೆ.

ಆದರೆ ಈಗ ಕನ್ನಡದ ಫೈಟರ್ ರವಿವರ್ಮ ಬಾಲಿವುಡ್ ನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸ್ತಿದ್ದಾರೆ. ಬಾಲಿವುಡ್ ನ ಬಿಗ್ ಬಿಗ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಅಜಯ್ ದೇವಗನ್ ಗೆ ಸ್ಟಂಟ್ ಕಂಪೋಸ್ ಮಾಡ್ತಿದ್ದಾರೆ. [ಬಾಲಿವುಡ್ ಗೆ ಕನ್ನಡ ತಾರೆಗಳು ಎಂಟ್ರಿಯಾದ ವರ್ಷ]

ಕನ್ನಡದ ಫೈಟರ್ ಒಬ್ಬ ಬಾಲಿವುಡ್ ತಲುಪಿದ್ದು ಹೇಗೆ? ತಲುಪಿದ್ರೂ ಅಲ್ಲಿ ಹೇಗೆ ನಮ್ಮ ಕಣ್ಣಿಗೂ ನಿಲುಕದಿರೋ ಸ್ಟಾರ್ ಗಳಿಗೆ ಆಕ್ಷನ್ ಪಾಠ ಹೇಳಿಕೊಡೋಕೆ ಸಾಧ್ಯವಾಯ್ತು ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ ಒಂದೊಂದೇ ಪುಟ ಓದ್ತಾ ಹೋಗಿ.

ರವಿವರ್ಮ ಮಂಡ್ಯದ ಹೈದ

ಮಂಡ್ಯದ ಗಟ್ಟಿಮುಟ್ಟು ಮೈಕಟ್ಟಿನ ರವಿವರ್ಮ ಬಾಲಿವುಡ್ ಸ್ಟಾರ್ ಗಳಿಗೆ ಆಕ್ಷನ್ ಪಾಠ ಹೇಳಿಕೊಡ್ತಿದ್ದಾರೆ. ರವಿವರ್ಮ ಬಾಲಿವುಡ್ ನ ಮೊದಲ ಸಿನಿಮಾ ಶಾಹಿದ್ ಕಪೂರ್ ಅಭಿನಯದ ರ್ಯಾಂಬೋ ರಾಜ್ ಕುಮಾರ್.

ಬಿಟೌನ್ ಮೆಟ್ಟಿಲಾಗಿದ್ದು ಜಾಕಿ

ರವಿವರ್ಮ ಮೊದಲಿಗೆ ಬಿಟೌನ್ ಬಾಗಿಲು ಬಡಿಯೋಕೆ ಸಾಧ್ಯವಾಗಿದ್ದು ತನ್ನ ಜಾಕಿ ಸಿನಿಮಾದ ಫೈಟ್ಸ್ ನಿಂದ. ಜಾಕಿ ಸಿನಿಮಾದ ಬೆಂಕಿ ಫೈಟ್ ರವಿವರ್ಮರನ್ನ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಗುರುತಿಸೋ ಹಾಗೆ ಮಾಡ್ತು.

ರೌಡಿ ರಾಥೋರ್ ಅವಕಾಶ ತಪ್ಪಿಹೋಯ್ತು

ಹಾಗೆ ನೋಡಿದ್ರೆ ಪ್ರಭುದೇವ ರವಿವರ್ಮರನ್ನ ಬಾಲಿವುಡ್ ಗೆ ಕರೆಯೋ ವೇಳೆಗೆ ರೌಡಿ ರಾಥೋರ್ ಸಿನಿಮಾ ಶುರುವಾಗಿತ್ತು, ಬಡಾ ಖಿಲಾಡಿ ಅಕ್ಷಯ್ ಕುಮಾರ್ ಗೆ ಸ್ಟಂಟ್ ಕಂಪೋಸ್ ಮಾಡೋ ಅವಕಾಶವೂ ಸಿಕ್ಕಿತ್ತು. ಆದರೆ ಜೂನಿಯರ್ ಎನ್ಟಿಆರ್ಗೆ ಫೈಟ್ ಕಂಪೋಸ್ ಮಾಡ್ತಾ ಅಕ್ಷಯ್ ಕುಮಾರ್ಗೆ ಫೈಟ್ಸ್ ಹೇಳಿಕೊಡೋ ಅವಕಾಶ ಮಿಸ್ ಮಾಡ್ಕೊಂಡ್ರು.

ಸಲ್ಲೂ ಜೈ ಹೋ ಸಿನಿಮಾಗೆ ಕರೆದ್ರು

ರ್ಯಾಂಬೋ ರಾಜ್ ಕುಮಾರ್ ಸಿನಿಮಾದಲ್ಲಿ ರವಿವರ್ಮ ರಗಡ್ ಫೈಟ್ಸ್ ನೋಡಿ ಸ್ವತಃ ಬಾಲಿವುಡ್ ಬಾಕ್ಸಾಫೀಸ್ ಕಾ ಸುಲ್ತಾನ್ ಸಲ್ಲೂ ರವಿವರ್ಮರನ್ನ 'ಜೈ ಹೋ' ಸಿನಿಮಾಗೆ ಸ್ಟಂಟ್ ಮಾಡೋಕೆ ಕರೆದ್ರು.

ಶಾರುಖ್ ಕೂಡ ರವಿವರ್ಮ ಫೈಟ್ಸ್ ಗೆ ಫಿದಾ

ಅಷ್ಟೇ ಯಾಕೆ ಬಾಲಿವುಡ್ ಬಾಡ್ ಶಾ ಶಾರುಖ್ ಖಾನ್ ಕೂಡ ರವಿವರ್ಮ ಸ್ಟಂಟ್ ನೋಡಿ ಫಿದಾ ಆಗಿ ತಮ್ಮ ಹ್ಯಾಪಿ ನ್ಯೂ ಈಯರ್ ಸಿನಿಮಾಗೆ ಅವಕಾಶ ಕೊಟ್ರು. ಆದ್ರೆ ಶಾರುಖ್ ಕೈಗೆ ಗಾಯವಾಗಿ ಫೈಟ್ಸ್ ಸೀಕ್ವೆನ್ಸ್ ಗಳೇ ಕ್ಯಾನ್ಸಲ್ ಆಯ್ತು.

ಮುಂದಿನ ಶಾರುಖ್ ಸಿನಿಮಾಗೆ ಫೈಟ್ಸ್

ಈ ಸಿನಿಮಾ ಮಿಸ್ ಮಾಡ್ಕೊಂಡ ರವಿವರ್ಮರಿಗೆ ಕಿಂಗ್ ಖಾನ್ ರ ಮುಂದಿನ ಸಿನಿಮಾಗೆ ಫೈಟ್ ಕಂಪೋಸ್ ಮಾಡೋ ಅವಕಾಶ ಸಿಗಲಿದೆ. ಇದನ್ನ ಯೋಚಿಸಿ ರವಿವರ್ಮ ಥ್ರಿಲ್ಲಾಗಿದ್ದಾರೆ.

ಆಂಗ್ರಿ ಯಂಗ್ ಮ್ಯಾನ್ ಗೆ ಫೈಟ್ ಪವರ್

ರವಿವರ್ಮ ಸಾಹಸಗಾಥೆ ಇಲ್ಲಿಗೆ ನಿಂತಿಲ್ಲ. ಈಗ ಬಾಂಬೆಯಲ್ಲಿ ರವಿವರ್ಮ ಬಾಲಿವುಡ್ ನ ಆಂಗ್ರಿ ಯಂಗ್ ಮ್ಯಾನ್ ಗೆ ಫೈಟ್ ಪವರ್ ತುಂಬ್ತಿದ್ದಾರೆ. ಅದು ಅಜಯ್ ದೇವಗನ್ ಅವರ ಆಕ್ಷನ್ 'ಜಾಕ್ಸನ್' ಸಿನಿಮಾಗೆ.

English summary
Kannada film stunt master Ravi Verma is gradually becoming Bollywood's most wanted stunt master. After directing action sequences for Salman Khan's Jai Ho and Shahid Kapoor's R... Rajkumar, Ravi will direct action sequences for Shah Rukh Khan and Ajay Devgn.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada