»   » 'ಫೈಂಡಿಂಗ್ ಫ್ಯಾನಿ' ಚಿತ್ರದಲ್ಲಿ ರಾಜ್ಯಕ್ಕೆ ಅಗೌರವ?

'ಫೈಂಡಿಂಗ್ ಫ್ಯಾನಿ' ಚಿತ್ರದಲ್ಲಿ ರಾಜ್ಯಕ್ಕೆ ಅಗೌರವ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಹಿಂದಿಯ 'ಫೈಂಡಿಂಗ್ ಫ್ಯಾನಿ' ಎಂಬ ಚಿತ್ರ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ರಾಜ್ಯದ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎಂಬುದೇ ಈ ವಿವಾದಕ್ಕೆ ಕಾರಣವಾಗಿರುವ ಅಂಶ.

  ಇದು ಚಿತ್ರದ ಮೇಕಿಂಗ್ ವಿಡಿಯೋದಲ್ಲಿ ಬರುವ ಡೈಲಾಗ್. ಕಾರೊಂದು ಕೆಟ್ಟು ನಿಂತಿರುತ್ತದೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಅರ್ಜುನ್ ಕಪೂರ್ ಕಾರನ್ನು ಗುದ್ದಿ "ಬ್ಲಡಿ ಮೆಂಟಲ್ ಸ್ಟೇಟ್" ಎನ್ನುತ್ತಾರೆ. ಇದೇ ಸನ್ನಿವೇಶದಲ್ಲಿ ಚಾಮುಂಡಿ ನಗರ ಬಸ್ ನಿಲ್ದಾಣ ಎಂಬ ಬೋರ್ಡ್ ಸಹ ಕಾಣುತ್ತದೆ.

  Bollywood movie Finding Fanny

  ಅವರ ಸಂಭಾಷಣೆಗೂ ಅಲ್ಲಿನ ಬೋರ್ಡ್ ಗೂ ಸಾಮ್ಯತೆ ಇದ್ದು. ಅರ್ಜುನ್ ಅವರು ಕರ್ನಾಟಕ ರಾಜ್ಯವನ್ನೇ ಉದ್ದೇಶಿಸಿ ಈ ರೀತಿಯ ವಿವಾದಾತ್ಮಕ ಡೈಲಾಗ್ ಹೊಡೆದಿದ್ದಾರೆ ಎಂಬುದು ಕನ್ನಡ ಪರ ಸಂಘಟನೆಗಳ ಆರೋಪ.

  ಆದರೆ ಈ ಆರೋಪವನ್ನು ಚಿತ್ರತಂಡ ಸುತಾರಾಂ ಒಪ್ಪುತ್ತಿಲ್ಲ. ಇದು ಕರ್ನಾಟಕ ಅಥವಾ ಯಾವುದೇ ರಾಜ್ಯಕ್ಕೆ ಸಂಬಂಧಿಸಿದ ಡೈಲಾಗ್ ಅಲ್ಲ. ಇದು ಕೇವಲ ಚಿತ್ರದ ಮೇಕಿಂಗ್ ವಿಡಿಯೋ. ಈ ಬೋರ್ಡ್ ಸಿನಿಮಾದಲ್ಲಿ ಇರುವುದಿಲ್ಲ ಎಂದು ಹೇಳಿದೆ. ಚಿತ್ರದಲ್ಲಿ ಬರುವ ಸಂಭಾಷಣೆ ಹೀಗಿದೆ.

  Arjun Kapoor: We have crossed into another state

  Dimple Kapadia: What state?

  Arjun Kapoor: A bloody mental state.

  Pankaj Kapur: Now the pictures perfect!

  ಆದರೆ ಕನ್ನಡ ಪರ ಸಂಘಟನೆಗಳು ಈ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕಬೇಕು. ಚಿತ್ರತಂಡ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ. ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ಅವರು ಚಿತ್ರತಂಡ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ನವರಸನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಧ್ವನಿ ಎತ್ತಿದ್ದಾರೆ.

  ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ನಾಸಿರುದ್ದೀನ್ ಶಾ, ಡಿಂಪಲ್ ಕಪಾಡಿಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಹೋಮಿ ಅದಜಾನಿಯಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಇದೇ ಸೆಪ್ಟೆಂಬರ್ 12ಕ್ಕೆ ತೆರೆಕಾಣುತ್ತಿದೆ. ಈಗಾಗಲೆ ಬೂಸಾನ್ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದೆ. (ಫಿಲ್ಮಿಬೀಟ್ ಕನ್ನಡ)

  English summary
  Bollywood movie Finding Fanny creates controversy in Karnataka. The film hero Arjun Kapoor dialouge "A bloody mental state" referes to Karnataka says pro Kannada organisations. Naseeruddin Shah, Dimple Kapadia, Pankaj Kapur, Deepika Padukone and Arjun Kapoor will feature in prominent roles.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more