twitter
    For Quick Alerts
    ALLOW NOTIFICATIONS  
    For Daily Alerts

    100 ಕೋಟಿ ಗಳಿಸಿದ ಸಿನಿಮಾಗಳು

    By Mahesh
    |

    ಕಳೆದ ಒಂದು ದಶಕದಲ್ಲಿ ಹಿಂದಿ ಚಿತ್ರರಂಗ ಸಾಕಷ್ಟು ಬೆಳೆದಿದೆ. ಅಂತಾರಾಷ್ತ್ರೀಯ ಮಾರುಕಟ್ಟೆಯಲ್ಲಿ ಈಗ ಹಿಂದಿ ಚಿತ್ರಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಇದು ಪರೋಕ್ಷವಾಗಿ ಪ್ರಾದೇಶಿಕ ಭಾಷೆ ಚಿತ್ರಗಳಿಗೂ ಲಾಭ ತರುತ್ತದೆ ಎನ್ನಬಹುದು. ಬಾಲಿವುಡ್ ನಲ್ಲಿ ನೂರು ಕೋಟಿ ಗಳಿಕೆ ಮ್ಯಾಜಿಕ್ ಶುರುವಾಗಿದ್ದು ಅಮೀರ್ ಖಾನ್ ನಟನೆಯ ಘಜನಿ ಚಿತ್ರದಿಂದ ಇರ್ಬೇಕು.

    2008ರಲ್ಲಿ ತೆರೆಕಂಡ ಘಜನಿ ಚಿತ್ರ ನಿರ್ಮಾಪಕರಿಗೆ ಮ್ಯಾಜಿಕ್ ನಂಬರ್ ದಾಟುವ ಕನಸು ನನಸು ಮಾಡಿತ್ತು. ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗಿದೆ. ಅಮೀರ್ ಖಾನ್ ಚಿತ್ರದ ಭಾರತದ ಗಳಿಕೆಯೇ ನೂರು ಕೋಟಿ ಮೀರಿ ಬೆಳೆಯಿತು. ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿದರೆ ಘಜನಿ ಭರ್ಜರಿ ಬೆಳೆ ತೆಗೆದಿದ್ದು ಎಲ್ಲರಿಗೂ ಮಾದರಿಯಾಯಿತು.

    ಆದರೆ, ಮುಂದಿನ ವರ್ಷ ಯಾವ ಚಿತ್ರಗಳು ನೂರರ ಕ್ಲಬ್ ಸೇರಲಿಲ್ಲ. ಮತ್ತೊಮ್ಮೆ ಅಮೀರ್ ಖಾನ್ ಈ ಮ್ಯಾಜಿಕ್ ನಂಬರ್ ದಾಟಬೇಕಾಯಿತು. 3 ಈಡಿಯಟ್ ಚಿತ್ರದ ಮೂಲಕ 100 ಕೋಟಿ ರು ಕ್ಲಬ್ ಸೇರಿದರು. ನಂತರ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಅವರು ದಬಾಂಗ್ ಮತ್ತು ಗೋಲ್ ಮಾಲ್ 3 ಚಿತ್ರದ ಮೂಲಕ ಕ್ಲಬ್ ಸೇರಿದರು.ಇಂದಿನ ಚಿತ್ರ ಸರಣಿ ಪ್ಯಾಕೇಜ್ ನಲ್ಲಿ ಒಟ್ಟಾರೆ 20 ಚಿತ್ರಗಳಿವೆ. ಎಲ್ಲವೂ 100 ಕೋಟಿ ರುಗೂ ಅಧಿಕ ಲಾಭ ಮಾಡಿವೆ.

    2011ರಲ್ಲಿ ಐದು, 2012ರಲ್ಲಿ ಒಂಭತ್ತು ಚಿತ್ರಗಳು 100 ಕೋಟಿ ಕ್ಲಬ್ ಸೇರಿದ್ದು 2013ರಲ್ಲಿ 2 ಹಿಂದಿ ಚಿತ್ರಗಳು ಈ ಪಟ್ಟಿಯಲ್ಲಿವೆ. ಇನ್ನಷ್ಟು ಕ್ಯೂನಲ್ಲಿವೆ. ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು.

    ಯೇ ಜವಾನಿ ಹೇ ದಿವಾನಿ

    ಯೇ ಜವಾನಿ ಹೇ ದಿವಾನಿ

    ಮೇ 31, 2013ರಂದು 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆ.
    * ಮೊದಲ ವಾರ 107.61 ಕೋಟಿ ರು ನಿವ್ವಳ ಲಾಭ
    * ಮೂರು ವಾರಗಳಲ್ಲಿ 177.09 ಕೋಟಿ ರು ಗಳಿಕೆ ದೇಶಿ ಮಾರುಕಟ್ಟೆಯಲ್ಲಿ ಇನ್ನೂ ಭರ್ಜರಿ ಓಟ ಮುಂದುವರಿಕೆ

    ರೇಸ್ 2

    ರೇಸ್ 2

    ಜ.25, 2013ರಂದು ಬಿಡುಗಡೆಗೊಂಡ ರೇಸ್ 2 ಚಿತ್ರ ಸೈಫ್ ಅಲಿ ಖಾನ್ ಅವರ ಮೊದಲ 100 ಕೋಟಿ ಬಾಚಿದ ಚಿತ್ರ.

    100 ಕೋಟಿ ಗಳಿಕೆ ಕ್ಲಬ್ ಸೇರಲು 14 ದಿನ ಬೇಕಾಯಿತು. ಮೊದಲ ಮೂರು ದಿನದ ಗಳಿಕೆ ಶುಕ್ರವಾರ 15.12 ಕೋಟಿ ರು, ಶನಿವಾರ 20.72 ಕೋಟಿ, ಭಾನುವಾರ 15.51ಕೋಟಿ ಗಳಿಸಿತ್ತು.
    ದಬ್ಬಾಂಗ್ 2

    ದಬ್ಬಾಂಗ್ 2

    ಡಿ.21, 2012ರಲ್ಲಿ 3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡ ದಬ್ಬಾಂಗ್ 2 ಚಿತ್ರ ಒಟ್ಟಾರೆ 6 ದಿನಗಳಲ್ಲೇ 108.37 ಕೋಟಿ ಗಳಿಸಿ ಸಲ್ಮಾನ್ ಖಾನ್ ಪವರ್ ತೋರಿಸಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ಗಳಿಕೆ 155 ಕೋಟಿ ರು ದಾಟುತ್ತದೆ.

    ಸನ್ ಆಫ್ ಸರ್ದಾರ್

    ಸನ್ ಆಫ್ ಸರ್ದಾರ್

    ನವೆಂಬರ್ 12,2012ರಂದು 2000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸನ್ ಆಫ್ ಸರ್ದಾರ್ ಚಿತ್ರ ತೆರೆ ಕಂಡಿತು. ಅಜಯ್ ದೇವಗನ್ ಹಾಗೂ ಸಂಜಯ್ ದತ್ ಅವರು 100 ಕೋಟಿ ಗಳಿಕೆ ಕ್ಲಬ್ ಸೇರಿದರು.

    16 ದಿನಗಳಲ್ಲಿ 100 ಕೋಟಿ ರು ಗಳಿಕೆ ಪಡೆದ ಚಿತ್ರ ನಂತರ 105.3 ಕೋಟಿ ರು ಬಂದ ನಂತರ ಗಳಿಕೆ ನಿಲ್ಲಿಸಿತು.
    ಜಬ್ ತಕ್ ಹೇ ಜಾನ್

    ಜಬ್ ತಕ್ ಹೇ ಜಾನ್

    ಶಾರುಖ್ ಖಾನ್, ಕತ್ರೀನಾ ಕೈಫ್, ಅನುಷ್ಕಾ ಶರ್ಮ ಇದ್ದ ಜಬ್ ತಕ್ ಹೇ ಜಾನ್ ಚಿತ್ರ ನ.12, 2012ರಂದು 2,500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಯಶ್ ಬ್ಯಾನರ್ ನ ಈ ಚಿತ್ರ 11 ದಿನಗಳಲ್ಲಿ 100 ಕೋಟಿ ರು ದಾಟಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ ನಿವ್ವಳ ಗಳಿಕೆ 120.85 ಕೋಟಿ ರು.

    ಬರ್ಫಿ

    ಬರ್ಫಿ

    ಸೆ.14, 2012ರಲ್ಲಿ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡು ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿತು. ಆದರೆ, 100 ಕೋಟಿ ರು ಗಳಿಕೆ ಕ್ಲಬ್ ಸೇರಲು 17 ದಿನ ಬೇಕಾಯಿತು. ಒಟ್ಟಾರೆ, ದೇಶಿ ಬಾಕ್ಸಾಫೀಸ್ ನಲ್ಲಿ 112.15 ಕೋಟಿ ರು ಗಳಿಸಿತು.

    ಎಕ್ ಥಾ ಟೈಗರ್

    ಎಕ್ ಥಾ ಟೈಗರ್

    ಆಗಸ್ಟ್ 15, 2012 ರಂದು ತೆರೆ ಕಂಡ ಎಕ್ ಥಾ ಟೈಗರ್ ಚಿತ್ರ ಸಲ್ಮಾನ್ -ಕತ್ರೀನಾ ಜೋಡಿಯ ಲಾಭದಿಂದ ಮೊದಲ ವಾರ 16 ಕೋಟಿ ರು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಭಾರತದ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 199 ಕೋಟಿ ರು ಗಳಿಕೆ ಮಾಡಿತು

    ಬೋಲ್ ಬಚ್ಚನ್

    ಬೋಲ್ ಬಚ್ಚನ್

    ಜು 6, 2012ರಂದು ತೆರೆ ಕಂಡ ಬೋಲ್ ಬಚ್ಚನ್ ಚಿತ್ರ ಮೊದಲ ಹತ್ತು ದಿನಗಳಲ್ಲಿ 82.93 ಕೋಟಿ ರು ಗಳಿಸಿತು ಆದರೆ, ದಕ್ಷಿಣ ಭಾರತದಲ್ಲಿ 'ಈಗ' ಚಿತ್ರ ಎದುರು ನಿಲ್ಲಲಾರದೆ ಗಳಿಕೆಯಲ್ಲಿ ಡಲ್ ಹೊಡೆದು ಹಾಗೂ ಹೀಗೂ 100 ಕೋಟಿ ಕ್ಲಬ್ ಸೇರಿತು. ಒಟ್ಟಾರೆ 35 ದಿನಗಳಲ್ಲಿ 82.93ಗಳಿಕೆಗೆ ಉಳಿದ 17.17 ಕೋಟಿ ರು ಸೇರಿಸಿದ್ದೇ ದೊಡ್ಡ ಸಾಧನೆ.

    ರೌಡಿ ರಾಥೋರ್

    ರೌಡಿ ರಾಥೋರ್

    ಜು.1, 2012 ರಂದು 2800 ಕ್ಕೂ ಅಧಿಕ ತೆರೆಗಳಲ್ಲಿ ಕಾಣಿಸಿಕೊಂಡ ಅಕ್ಷಯ್ ಕುಮಾರ್ ಅವರ ರೌಡಿ ರಾಥೋರ್ ಚಿತ್ರ ಉತ್ತಮ ಓಪನಿಂಗ್ ಪಡೆಯಿತು. 11 ದಿನಗಳಲ್ಲೇ 100 ಕೋಟಿ ರು ಗಳಿಕೆ ಮಾಡಿತು.

    ಭಾರತದ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 133.25ಕೋಟಿ ರು ನಿವ್ವಳ ಗಳಿಕೆ ಮಾಡಿದೆ.
    ಹೌಸ್ ಫುಲ್ 2

    ಹೌಸ್ ಫುಲ್ 2

    ಹೌಸ್ ಫುಲ್ 2 ಚಿತ್ರ 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏ.6, 2012ರಂದು ತೆರೆ ಕಂಡಿತು. 17 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು.

    ಅಗ್ನಿಪಥ್

    ಅಗ್ನಿಪಥ್

    ಜ.26, 2012ರಂದು 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡ ಅಗ್ನಿ ಪಥ್ ಚಿತ್ರ 11 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು.

    ಆದರೆ, ಹೃತಿಕ್ ರೋಷನ್, ಸಂಜಯ್ ದತ್ ಇದ್ದ ಈ ಚಿತ್ರ ಭಾರತದಲ್ಲಿ ಒಟ್ಟಾರೆ ನಿವ್ವಳ ಗಳಿಕೆಯಲ್ಲಿ 115 ಕೋಟಿ ರು ದಾಟಲಿಲ್ಲ.
    ಡಾನ್ 2

    ಡಾನ್ 2

    ಡಿ.23,2011 ರಂದು ಸುಮಾರು 3105 ಸ್ಕ್ರೀನ್ ಗಳಲ್ಲಿ ತೆರೆ ಕಂಡ ಶಾರುಖ್ ಖಾನ್ ಅವರ ಡಾನ್ 2 ಚಿತ್ರ 16 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು.

    ರಾ ಒನ್

    ರಾ ಒನ್

    ಅಕ್ಟೋಬರ್ 26,2011ರಂದು 3100ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಕಾಣಿಸಿ ರಾ.ಒನ್ ಚಿತ್ರ ದೀಪಾವಳಿ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಮಾಡಿತು. 11 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿದ ಈ ಚಿತ್ರ ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ 114.29 ಕೋಟಿ ರು ಗಳಿಸಿತು.

    ಬಾಡಿಗಾರ್ಡ್

    ಬಾಡಿಗಾರ್ಡ್

    ಆಗಸ್ಟ್ 31,2011 ರಂದು 2,600 ಪ್ರಿಂಟ್ ಗಳೊಂದಿಗೆ ತೆರೆ ಕಂಡ ಬಾಡಿಗಾರ್ಡ್ ಚಿತ್ರ ಮೊದಲ ವಾರದಲ್ಲೇ 86 ಕೋಟಿ ರು ಗಳಿಸಿತು. ಎರಡನೇ ವಾರದ ಮೊದಲ ದಿನದ ಹೊತ್ತಿಗೆ 100 ಕೋಟಿ ರು ಗಳಿಸಿ ದಾಖಲೆ ಬರೆಯಿು. ಒಟ್ಟಾರೆ 148.86 ಕೋಟಿ ರು ಭಾರತದ ಬಾಕ್ಸಾಫೀಸ್ ನಲ್ಲೇ ಕೊಳ್ಳೆ ಹೊಡೆಯಿತು.

    ಸಿಂಗಮ್

    ಸಿಂಗಮ್

    ಜು.22,2011ರಂದು 1500 ಸ್ಕ್ರೀನ್ ಗಳಲ್ಲಿ ತೆರೆ ಕಂಡ ಸಿಂಗಮ್ ಚಿತ್ರ ಅಜಯ್ ದೇವಗನ್ ಅವರ ಸಾಹಸಭರಿತ ಇಮೇಜ್ ಮರುಕಳಿಸುವಂತೆ ಮಾಡಿತು. ಮೊದಲ ವಾರ 44.20 ಕೋಟಿ ರು ಗಳಿಸಿದರೂ 100 ಕೋಟಿ ರು ಕ್ಲಬ್ ಸೇರಲು 43 ದಿನಗಳನ್ನು ತೆಗೆದುಕೊಂಡಿತು.

    ರೆಡಿ

    ರೆಡಿ

    2011ರ ಜೂ.3 ರಂದು ತೆರೆ ಕಂಡ ಸಲ್ಮಾನ್ ಖಾನ್ ಚಿತ್ರ 'ರೆಡಿ' ಕೇವಲ 1900 ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಎರಡು ವಾರಗಳಲ್ಲಿ 100 ಕೋಟಿ ರು ಗಳಿಕೆ ಮಾಡಿದ ಈ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಒಟ್ಟಾರೆ 119.78 ಕೋಟಿ ರು ಗಳಿಸಿತು.

    ದಬ್ಬಾಂಗ್

    ದಬ್ಬಾಂಗ್

    ಸುಮಾರು 1,800 ಸ್ಕ್ರೀನ್ ಗಳಲ್ಲಿ ಸೆ.10, 2010ರಂದು ತೆರೆ ಕಂಡ ಸಲ್ಮಾನ್ ಖಾನ್ ಚಿತ್ರ ದಬ್ಬಾಂಗ್ 10 ದಿನಗಳಲ್ಲೇ 100 ಕೋಟಿ ರು ಕ್ಲಬ್ ಸೇರಿತು. ಈ ಕ್ಲಬ್ ಸೇರಿದ ಸಲ್ಮಾನ್ ಖಾನ್ ಮೊದಲ ಚಿತ್ರ ಎನಿಸಿತು.ಒಟ್ಟಾರೆ ಭಾರತದಲ್ಲಿ 138 ಕೋಟಿ ರು.ಗೂ ಅಧಿಕ ಮೊತ್ತ ಗಳಿಸಿತು.

    ಗೋಲ್ ಮಾಲ್ 3

    ಗೋಲ್ ಮಾಲ್ 3

    ನ.3, 2010ರ ದೀಪಾವಳಿ ವಾರಾಂತ್ಯದಲ್ಲಿ ತೆರೆ ಕಂದ ಗೋಲ್ ಮಾಲ್ ಚಿತ್ರ ಮೊದಲ ದಿನವೇ 8.32 ಕೋಟಿ ರು ಗಳಿಕೆ ಕಂಡಿತು. ಮೊದಲ ವಾರ 33.5 ಕೋಟಿ ರು ಬಾಚಿತು.ಒಟ್ಟಾರೆ 17 ದಿನಗಳಲ್ಲಿ 100 ಕೋಟಿ ರು ಗಳಿಕೆ ಕ್ಲಬ್ ಸೇರಿದ ಮೂರನೇ ಚಿತ್ರ ಎನಿಸಿತು.

    3 ಈಡಿಯಟ್ಸ್

    3 ಈಡಿಯಟ್ಸ್

    ಡಿ. 25 25, 2009ರಲ್ಲಿ ತೆರೆ ಕಂಡ 3 ಈಡಿಯಟ್ಸ್ ಚಿತ್ರ ಮೊದಲ 8 ದಿನಗಳಲ್ಲಿ 79 ಕೋಟಿ ರು ಗಳಿಕೆ ಮಾಡಿತು.

    ಘಜನಿ ದಾಖಲೆ ಮುರಿದು 9 ದಿನಗಳಲ್ಲಿ 100 ಕೋಟಿ ರು ಗಳಿಕೆ ಕಂಡಿತ್ತು. ದೇಶಿ ಬಾಕ್ಸಾಫೀಸ್ ನಲ್ಲಿ 200 ಕೋಟಿ ರು ಮೀರಿದ ಮೊದಲ ಚಿತ್ರ ಎನಿಸಿತು. ಒಟ್ಟಾರೆ 202 ಕೋಟಿ ದಾಖಲಿಸಿತು.
    ಘಜನಿ

    ಘಜನಿ

    ಡಿ.25,2008 ರಲ್ಲಿ ಸುಮಾರು 1,500 ಪ್ರಿಂಟ್ ಗಳೊಂದಿಗೆ ಬಿಡುಗಡೆಗೊಂದ ಅಮೀರ್ ಖಾನ್ ಅವರ ಘಝನಿ ಚಿತ್ರ ಮೊದಲ ವಾರದಲ್ಲಿ 62 ಕೋಟಿ ರು ಗಳಿಸಿತ್ತು.

    ಸುಮಾರು 18 ದಿನಗಳ ನಂತರ 100 ಕೋಟಿ ರು ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ 114 ಕೋಟಿ ರು. ಗೂ ಅಧಿಕ ಮೊತ್ತ ದಾಖಲಿಸಿತು.

    English summary
    Ghajani started Rs 100 crore movie club in 2008. This elite group includes Hindi films that have earned Rs 100 crore at the Indian Box Office after paying entertainment tax. This amount does not include their collection in international market. It also does not take revenue from satellite, music and digital rights into account.
    Monday, August 26, 2013, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X