Just In
Don't Miss!
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Finance
3 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಬೆಂಗಳೂರಿನಲ್ಲಿ 94 ರೂ. ಗಡಿ ದಾಟಿದೆ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Automobiles
ಮಾರ್ಚ್ 3ರಿಂದ ಕಿಗರ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ವಿತರಣೆಗೆ ಸಜ್ಜಾದ ರೆನಾಲ್ಟ್
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಹುಬಲಿ, ಕುರುಕ್ಷೇತ್ರ ನಂತರ 'ಕರ್ಣ'ನ ಸಿನಿಮಾ: ಐದು ಭಾಷೆಯಲ್ಲಿ ರಿಲೀಸ್
ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಅದ್ಧೂರಿ ಸಿನಿಮಾ ಶುರುವಾಗಿದೆ. ಮಹಾಭಾರತ ಕಥೆಯಲ್ಲಿ ಬರುವ ದಾನವೀರ ಶೂರ ಕರ್ಣನ ಪಾತ್ರ ಆಧರಿಸಿ ಪೌರಾಣಿಕ ಚಿತ್ರವೊಂದು ತಯಾರಾಗುತ್ತಿದೆ. ಈಗ ತಾನೆ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ''ಸೂರ್ಯಪುತ್ರ ಮಹಾವೀರ ಕರ್ಣ'' ಹೆಸರಿನಲ್ಲಿ ಸಿದ್ದವಾಗಲಿರುವ ಈ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಬಾಹುಬಲಿ, ಕುರುಕ್ಷೇತ್ರ ಅಂತಹ ಚಿತ್ರಗಳ ನಂತರ ಮಹಾಭಾರತ ಹಾಗೂ ರಾಮಾಯಣ ಆಧರಿಸಿದ ಸಿನಿಮಾಗಳು ಹೆಚ್ಚಾಗುತ್ತಿದೆ. ಇದಕ್ಕೂ ಮುಂಚೆ ಈ ಚಿತ್ರದಲ್ಲಿ ಸ್ಟಾರ್ ನಟ ನಾಯಕನಾಗಿ ನಟಿಸುವುದಾಗಿ ಹೇಳಲಾಗಿತ್ತು. ಆಮೇಲೆ ಆ ನಟ ಮೆಗಾ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು. ಈಗ ಅದೇ ಪ್ರಾಜೆಕ್ಟ್ ಮತ್ತೆ ಜೀವ ಪಡೆದುಕೊಂಡಿದ್ದು, ಈ ಸಲ ನಾಯಕನ ಪಾತ್ರಕ್ಕೆ ಬಾಲಿವುಡ್ ಹೀರೋ ಎಂಟ್ರಿಯಾಗಲಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೂ, ಕರ್ಣನಾಗಿ ಅಬ್ಬರಿಸಲಿರುವ ಆ ನಟ ಯಾರು? ಮುಂದೆ ಓದಿ...

ಚಿಯಾನ್ ವಿಕ್ರಮ್ ಔಟ್?
ಸೂರ್ಯಪುತ್ರ ಮಹಾವೀರ ಕರ್ಣ ಸಿನಿಮಾದಲ್ಲಿ ತಮಿಳು ನಟ ವಿಕ್ರಮ್ ನಟಿಸಬೇಕಿತ್ತು. ಆದರೆ, ವಿಕ್ರಮ್ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಿದ್ದ ಕಾರಣ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಕಾರಣದಿಂದ ಕರ್ಣನ ಪಾತ್ರ ಕೈಬಿಟ್ಟರು ಎನ್ನಲಾಗಿದೆ.
ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?

ಬಾಲಿವುಡ್ ನಟನ ಎಂಟ್ರಿ!
ಚಿಯಾನ್ ವಿಕ್ರಮ್ ಬದಲು ಕರ್ಣನ ಪಾತ್ರಕ್ಕೆ ಬಾಲಿವುಡ್ ನಟರೊಬ್ಬರನ್ನು ಕರೆತರುವ ಯೋಜನೆ ನಡೆಯುತ್ತಿದೆಯಂತೆ. ಸದ್ಯಕ್ಕೆ ಆ ನಟ ಯಾರೆಂದು ಸುಳಿವು ಸಹ ಸಿಕ್ಕಿಲ್ಲ. ಆದರೆ, ಹಿಂದಿ ಚಿತ್ರರಂಗದ ಸ್ಟಾರ್ ನಟ ಕರ್ಣನ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಆರ್‌ಎಸ್ ವಿಮಲ್ ನಿರ್ದೇಶನ
ಅಂದ್ಹಾಗೆ, ಸೂರ್ಯಪುತ್ರ ಮಹಾವೀರ ಕರ್ಣ ಸಿನಿಮಾವನ್ನು ಆರ್‌ಎಸ್ ವಿಮಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಸಹ ಇವರೇ ಮಾಡುತ್ತಿದ್ದಾರೆ. ವಶು ಭಗ್ನಾನಿ, ದೀಪ್ಶಿಖಾ ದೇಶ್ಮುಖ್ ಮತ್ತು ಜಾಕಿ ಭಗ್ನಾನಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಲಿದೆ.
ಬಾಲಿವುಡ್ ಬಾಕ್ಸ್ ಆಫೀಸ್ ಫೈಟ್: ಸ್ಟಾರ್ ಚಿತ್ರಗಳ ನಡುವೆ ಮೆಗಾವಾರ್

ಪ್ಯಾನ್ ಇಂಡಿಯಾ ಸಿನಿಮಾ
ಫೆಬ್ರವರಿ 23 ರಂದು ಅಧಿಕೃತವಾಗಿ ಕರ್ಣನ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಮೋಷನ್ ಪೋಸ್ಟರ್ ಮೂಲಕ ಸಿನಿಮಾ ಅನೌನ್ಸ್ ಮಾಡಿರುವ ಚಿತ್ರತಂಡ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ತಿಳಿಸಿದೆ. ಡಾ ಕುಮಾರ್ ವಿಶ್ವಾಸ್ ಈ ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ ಹಾಗೂ ಹೆಚ್ಚವರಿ ಚಿತ್ರಕಥೆ ಬರಹಗಾರರನಾಗಿ ಕಾರ್ಯನಿರ್ವಹಿಸಲಿದ್ದಾರೆ.