For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ಜೊತೆ ಮೋದಿ ಸೆಲ್ಫಿ

  |

  ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಕ್ಲಿಕ್ ಮಾಡಿರುವ ಸೆಲ್ಫಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ನಿರ್ಮಾಪಕ ಕರಣ್ ಜೋಹರ್, ಆಲಿಯಾ ಭಟ್, ವರುಣ್ ಧವನ್, ರಾಜ್ ಕುಮಾರ್ ರಾವ್, ಆಯುಷ್ಮಾನ್ ಖುರಾನ್, ಭೂಮಿ ಪಡ್ನೇಕರ್, ಸಿದ್ಧಾರ್ಥ್ ಮಲ್ಹೋತ್ರ, ವಿಕ್ಕಿ ಕೌಶಲ್, ಏಕ್ತಾ ಕಪೂರ್, ರೋಹಿತ್ ಶೆಟ್ಟಿ ಮತ್ತು ಅಶ್ವಿನಿ ಐಯರ್ ತಿವೇರಿ ಸೇರಿ ದೆಹಲಿಯಲ್ಲಿ ಮೋದಿ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ತೆಗೆದಿರುವ ಸೆಲ್ಫಿ ಈಗ ಟಾಕ್ ಆಫ್ ದಿ ನೇಷನ್ ಆಗಿದೆ.

  ಈ ಫೋಟೋವನ್ನ ಶೇರ್ ಮಾಡಿರುವ ಕರಣ್ ಜೋಹರ್ ''ಸರಿಯಾದ ಸಮಯದಲ್ಲಿ ನಡೆಯುವ ಉತ್ತಮ ಸಂವಾದಗಳು ಬದಲಾವಣೆಯನ್ನು ತರಬಲ್ಲವು. ಇಂಥ ಸಂವಾದಗಳು ನಿರಂತರವಾಗಿರಬೇಕು ಅಂತಾ ನಾವು ಆಶಿಸುತ್ತೇವೆ. ಟಿಕೆಟ್ ವಿಚಾರದಲ್ಲಿ ಜಿಎಸ್ಟಿಯನ್ನ ಕಡಿತಗೊಳಿಸಿದ್ದಕ್ಕಾಗಿ ಚಿತ್ರರಂಗದ ವತಿಯಿಂದ ನಾವು ಧನ್ಯವಾದಗಳನ್ನ ತಿಳಿಸುತ್ತೇವೆ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

  ಇನ್ನು ಈ ಫೋಟೋಗೆ ಭಾರಿ ಮೆಚ್ಚುಗೆ ಬರ್ತಿದ್ದು, ವರ್ಷದ ಬೆಸ್ಟ್ ಫೋಟೋ ಎನ್ನಲಾಗುತ್ತಿದೆ. ಸೆಲ್ಫಿ ಮಾತ್ರವಲ್ಲದೇ, ಪ್ರತ್ಯೇಕವಾಗಿ ಎಲ್ಲ ತಾರೆಯರು ಜೊತೆಯೂ ಮೋದಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

  English summary
  Bollywood Producer Karan Johar has shared a selfie with PM Modi which also features Ranveer Singh, Alia Bhatt, Ranbir Kapoor and several other stars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X