twitter
    For Quick Alerts
    ALLOW NOTIFICATIONS  
    For Daily Alerts

    ಮಾಂಸಹಾರ ತ್ಯಜಿಸಿ ವೀಗನ್ ಆಗಿ ಬದಲಾದ ಬಾಲಿವುಡ್‌ ಸೆಲೆಬ್ರೆಟಿಗಳು ಇವರೇ!

    |

    ಸೆಲೆಬ್ರೆಟಿಗಳು ಯಾವಾಗಲೂ ಆರೋಗ್ಯವಾಗಿರಬೇಕು ಅಂತಲೇ ಆಲೋಚನೆ ಮಾಡುತ್ತಾರೆ. ಸ್ಲಿಮ್ ಆಗಿರಬೇಕು. ಫಿಟ್ ಆಗಿರಬೇಕು. ಸ್ಕ್ರೀನ್ ಮೇಲೆ ಸುಂದರವಾಗಿ ಕಾಣಲು ಸ್ಕಿನ್ ಅನ್ನು ಅಂದವಾಗಿ ಇಟ್ಟುಕೊಳ್ಳಲು ಏನಾದರೂ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ.

    ಸೌಂದರ್ಯ ಹಾಗೂ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಹಂತದಲ್ಲಿ ಮಾಂಸಹಾರಿಯಾಗಿದ್ದವರು ಸಸ್ಯಾಹಾರಿಗಳಾಗಿದ್ದೂ ಇದೆ. ಸಸ್ಯಹಾರಿಗಳಾಗಿದ್ದವರು ಇನ್ನೊಂದು ಹಂತ ಮುಂದಕ್ಕೆ ಹೋಗಿದ್ದಾರೆ. ಬಾಲಿವಡ್‌ನಲ್ಲಿ ಸದ್ಯ ಸೆಲೆಬ್ರೆಟಿಗಳು ವೀಗನ್‌ ಆಗುತ್ತಿದ್ದಾರೆ. ಈ ಮೂಲಕ ಮಾಂಸಹಾರ ಬಿಟ್ಟಿದ್ದಷ್ಟೆ ಅಲ್ಲ. ಡೈರಿ ವಸ್ತುಗಳನ್ನೂ ಕೂಡ ತ್ಯಜಿಸಿದ್ದಾರೆ.

    ಅರ್ಧ ವರ್ಷ ಬಾಲಿವುಡ್ ಬಾಕ್ಸಾಫೀಸ್ ಕಥೆಯೇನು? KGF 2, RRR, ದಿ ಕಾಶ್ಮೀರ್ ಫೈಲ್ಸ್‌ನದ್ದೇ ಸದ್ದು!ಅರ್ಧ ವರ್ಷ ಬಾಲಿವುಡ್ ಬಾಕ್ಸಾಫೀಸ್ ಕಥೆಯೇನು? KGF 2, RRR, ದಿ ಕಾಶ್ಮೀರ್ ಫೈಲ್ಸ್‌ನದ್ದೇ ಸದ್ದು!

    ವೀಗನ್ ಅಂದರೆ, ಪ್ರಾಣಿಗಳಿಂದ ಸಿಗುವ ಯಾವುದೇ ವಸ್ತುವನ್ನು ಕೂಡ ಬಳಸುವುದಿಲ್ಲ. ಮಾಂಸ, ಹಾಲು, ಮೊಟ್ಟೆ, ಜೇನು ತುಪ್ಪವನ್ನು ಕೂಡ ಮುಟ್ಟುವುದಿಲ್ಲ. ಇದು ಆರೋಗ್ಯಕರ ಡಯೆಟ್ ಎಂದು ಹೇಳಲಾಗುತ್ತದೆ. ಅಲ್ಲದೆ ಹಾಲಿವುಡ್‌ ಬಳಿಕ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ವೀಗನ್ ಆಹಾರ ಪದ್ಧತಿ ಕಡೆಗೆ ವಾಲುತ್ತಿದ್ದಾರೆ. ಬಾಲಿವುಡ್‌ನಲ್ಲಿ ಯಾವ್ಯಾವ ನಟ-ನಟಿಯರು ಈ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

    ಆರ್. ಮಾಧವನ್

    ಆರ್. ಮಾಧವನ್

    ಬಹುಭಾಷಾ ನಟ ಆರ್.ಮಾಧವನ್ ವೀಗನ್ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಆದರೆ, ಮಾಧವನ್ ಈ ಹಿಂದೆ ಕೂಡ ಮಾಂಸಹಾರವನ್ನು ಸೇವಿಸುತ್ತಿರಲಿಲ್ಲ. ಸಸ್ಯಾಹಾರಿಯಾಗಿದ್ದರೂ, ವೀಗನ್ ಆಹಾರ ಪದ್ದತಿಯನ್ನು ಅಳವಡಿಸಿಕೊಂಡ ಬಳಿಕ ಪ್ರಾಣಿಗಳಿಂದ ಉತ್ಪತ್ತಿಯಾಗುವ ವಸ್ತುವಿನ ಸೇವನೆಯನ್ನು ನಿಲ್ಲಿಸಿದ್ದರು. ಡ್ರೈರಿ ಪ್ರಾಡಕ್ಟ್‌ಗಳ ಸೇವನೆಯನ್ನು ನಿಲ್ಲಿಸಿದ್ದಾರೆ. ಪ್ರಾಣಿಗಳ ಹಕ್ಕುಗಳ ಬೆಂಬಲಕ್ಕೆ ಹಲವು ವರ್ಷಗಳಿಂದ ನಿಂತಿರುವುದರಿಂದ 2012ರಲ್ಲಿ PETA 'ವರ್ಷದ ಅತ್ಯುತ್ತಮ ವ್ಯಕ್ತಿ' ಎಂದು ಅನೌನ್ಸ್ ಮಾಡಿತ್ತು.

    ಕರಣ್ ಜೋಹರ್‌ಗೆ ಸಿನಿಮಾ ಮಾಡುವುದಕ್ಕೆ ಬರಲ್ವಾ? ಸಮಂತಾ ಮಾತಿನ ಅರ್ಥವೇನು?ಕರಣ್ ಜೋಹರ್‌ಗೆ ಸಿನಿಮಾ ಮಾಡುವುದಕ್ಕೆ ಬರಲ್ವಾ? ಸಮಂತಾ ಮಾತಿನ ಅರ್ಥವೇನು?

    ಜಾನ್ ಅಬ್ರಹಾಂ

    ಜಾನ್ ಅಬ್ರಹಾಂ

    ಬಾಲಿವುಡ್‌ ಮಸಲ್ ಮ್ಯಾನ್ ಜಾನ್ ಅಬ್ರಹಾಂ ಕೂಡ ವೀಗನ್ ಆಗಿ ಬದಲಾಗಿದ್ದಾರೆ. ಮಾಂಸವನ್ನು ಸೇವಿಸದೇ ಬಾಡಿಯನ್ನು ಬಿಲ್ಡ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಜಾನ್ ಅಬ್ರಹಾಂ ವೀಗನ್ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೆ ಇವರೂ ಕೂಡ ಪ್ರಾಣಿಗಳ ಮೇಲೆ ವ್ಯಕ್ತಿಯ ಕ್ರೂರತೆಯನ್ನು ವಿರೋಧಿಸುತ್ತಿದ್ದಾರೆ.

    ಸೋನಂ ಕಪೂರ್

    ಸೋನಂ ಕಪೂರ್

    ಪಂಜಾಬ್ ಮೂಲದ ನಟಿ ಸೋನಂ ಕಪೂರ್ ಪಕ್ಕಾ ಮಾಂಸಹಾರಿಯಾಗಿದ್ದರು. ಆದರೆ, ಕೆಲವು ವರ್ಷಗಳಿಂದ ಸೋನಂ ಕಪೂರ್ ಮಾಂಸಹಾರವನ್ನು ತ್ಯಜಿಸಿ ಸಸ್ಯಹಾರಿಯಾಗಿದ್ದರು. ಬಳಿಕ ವೀಗನ್ ಆಗಿ ಬದಲಾಗಿದ್ದಾರೆ. ಹಲವು ಬಾರಿ ಇವರೂ ಕೂಡ ಪ್ರಾಣಿಗಳ ರಕ್ಷಣೆಯ ಬಗ್ಗೆ ಧ್ವನಿ ಎತ್ತಿದ್ದರು. 2018ರಲ್ಲಿ PETA ಈ ನಟಿಯಗೆ 'ವರ್ಷದ ಅತ್ಯುತ್ತಮ ವ್ಯಕ್ತಿ' ಎಂಬ ಗೌರವ ನೀಡಿತ್ತು. ಇನ್‌ಸ್ಟಾಗ್ರಾಂನಲ್ಲಿ ಹಲವು ಬಾರಿ ವೀಗನ್ ರೆಸೆಪಿಗಳನ್ನು ಪೋಸ್ಟ್ ಮಾಡಿದ್ದು ಇದೆ.

    ಶ್ರದ್ಧಾ ಕಪೂರ್

    ಶ್ರದ್ಧಾ ಕಪೂರ್

    ಪ್ರಾಣಿಗಳ ಮೇಲಿನ ಪ್ರೀತಿಗಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ 2019ರಿಂದ ವೀಗನ್ ಆಗಿ ಬದಲಾಗಿದ್ದಾರೆ. ಶ್ರದ್ಧಾ ಕಪೂರ್ ತಾನು ಸ್ಮಾರ್ಟ್ ಈಟರ್ ಹಾಗೂ ಉತ್ತಮ ಆಹಾರವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. PETA 2020ರಲ್ಲಿ 'ಹಾಟೆಸ್ಟ್ ವೆಜಿಟೇರಿಯನ್' ಎಂದು ಅನೌನ್ಸ್ ಮಾಡಿತ್ತು.

    ಆಲಿಯಾ ಭಟ್

    ಆಲಿಯಾ ಭಟ್

    ಬಾಲಿವುಡ್‌ನ ನಂ 1 ನಟಿ ಆಲಿಯಾ ಭಟ್ ಕೂಡ ವೀಗನ್ ಆಗಿ ಬದಲಾಗಿದ್ದಾರೆ. ಆಲಿಯಾಗೂ ಪ್ರಾಣಿಗಳೆಂದರೆ ಬಲು ಪ್ರೀತಿ. ಈ ಕಾರಣಕ್ಕೆ ಆಲಿಯಾ ಭಟ್ ಪ್ರಾಣಿಗಳಿಗಾಗಿಯೇ 'ಕೋಎಗ್ಸಿಸ್ಟ್' ಎಂಬ ಚಾರಿಟಬಲ್ ಟ್ರೆಸ್ಟ್ ಅನ್ನು ಸ್ಥಾಪಿಸಿದ್ದಾರೆ.

    ರಿಚಾ ಚಡ್ಡಾ

    ರಿಚಾ ಚಡ್ಡಾ

    ಬಾಲಿವುಡ್‌ನ ಬೋಲ್ಡ್ ನಟಿ ರಿಚಾ ಚಡ್ಡಾ ಹಲವು ಬಾರಿ ಸಸ್ಯಹಾರವನ್ನು ಸೇವಿಸುವಂತೆ ಧ್ವನಿ ಎತ್ತಿದ್ದರು. ಮೊದಲಿಂದಲೂ ಸಸ್ಯಹಾರಿಯಾಗಿದ್ದ ರಿಚಾ ಚಡ್ಡಾ ವೀಗನ್ ಆಗಿ ಬದಲಾಗಿದ್ದಾರೆ. ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಗಮನ ಹರಿಸಿದ್ದಾರೆ.

    English summary
    Why Bollywood Stars Shraddha Kapoor, John Abraham, Sonam Kapoor, R Madhavan Became Vegan, Know More.
    Friday, July 8, 2022, 19:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X