For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಂಗಲೆ ಮತ್ತು ರೈಲ್ವೇ ನಿಲ್ದಾಣಕ್ಕೆ ಬಾಂಬ್ ಬೆದರಿಗೆ ಕರೆ

  |

  ಶುಕ್ರವಾರ ತಡರಾತ್ರಿ ಮುಂಬೈ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದಾನೆ. ಮುಂಬೈನ ರೈಲು ನಿಲ್ದಾಣ ಮತ್ತು ಅಮಿತಾಬ್ ಬಚ್ಚನ್ ಅವರ ಜುಹು ಬಂಗಲೆಯನ್ನು ಬಾಂಬ್ ಇಟ್ಟು ಸ್ಫೋಟಿಸಿವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

  ಮುಂಬೈನ ಪ್ರಮುಖ ರೈಲು ನಿಲ್ದಾಣಗಳಾದ ಛತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ, ದಾದರ್, ಬೈಕುಲ್ಲಾ ರೈಲು ನಿಲ್ದಾಣಗಳಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಕೆಲ ಸಮಯ ಆತಂಕ ಸೃಷ್ಟಿಯಾಗಿತ್ತು, ರಾತ್ರಿಯಲ್ಲ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಆದರೆ ಅನುಮಾನಾಸ್ಪದವಾಗಿ ಏನು ಕಂಡುಬಂದಿಲ್ಲ ಎಂದು ಪೊಲೀಸರು ಮೂಲಗಳು ಮಾಹಿತಿ ನೀಡಿವೆ.

  ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕರೆ ಬಂದಿತ್ತು. ಸ್ಥಳಿಯ ಪೊಲೀಸ್ ಠಾಣೆಗಳು, ಭಯೋತ್ಪಾನಾ ನಿಗ್ರಹ ದಳ, ಸರ್ಕಾರಿ ರೈಲ್ವೆ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಕ್ಕೆ ತಿಳಿಸಲಾಯಿತು. ಬಳಿಕ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ಆಂಗ್ಲ ಪತ್ರಿಕೆಗೆ ಮಾಹಿತಿ ನೀಡಿದೆ.

  ಸದ್ಯ ಈ ಸಂಬಂಧ ಇಬ್ಬರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮುಂಬೈ ಪೊಲೀಸರು, "ಮುಂಬೈ ಅಪರಾಧ ವಿಭಾಗದ ಸಿಐಯು(ಅಪರಾಧ ಗುಪ್ತಚರ ಘಟಕ) ಇಬ್ಬರನ್ನು ಬಂಧಿಸಿದೆ. ಕಳೆದ ರಾತ್ರಿ ಪೊಲೀಸರು ಸ್ವೀಕರಿಸಿದ ನಕಲಿ ಫೋನ್ ಕರೆಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವರು ಕರೆ ಮಾಡಿ ಮುಂಬೈನ ನಾಲ್ಕು ಸ್ಥಳಗಳಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು" ಎಂದು ಹೇಳಿದ್ದಾರೆ.

  ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದವರು ಬಿಗ್ ಬಿ ಅಮಿತಾಬ್ ಬಚ್ಚನ್ ಬಂಗಲೆಯಲ್ಲೂ ಬಾಂಬ್ ಇರಿಸಿ ಸ್ಫೋಟಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ, ಪೊಲೀಸರು ಅಮಿತಾಬ್ ಅವರ ನಾಲ್ಕು ಬಂಗಲೆಯಲ್ಲೂ ಶೋಧ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜುಹು ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಶಶಿಕಾಂತ್, "ನಾವು ಅಮಿತಾಬ್ ಬಚ್ಚನ್ ಅವರ ನಾಲ್ಕು ಬಂಗಲೆಯನ್ನು ಹೊರಗಿನಿಂದ ಪರಿಶೀಲನೆ ನಡೆಸಿದ್ದೇವೆ. ಯಾವುದಾದರೂ ದುಷ್ಕೃತ್ಯ ನಡಿತಿದ್ಯಾ ಪರಿಶೀಲನೆ ನಡೆಸಿದ್ದೇವೆ. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲವಾದ್ದರಿಂದ ಇದು ನಕಲಿ ಕರೆ" ಎಂದು ಪೊಲೀಸರು ತಿಳಿಸಿದ್ದಾರೆ.

  ಕಳೆದ ವರ್ಷ ನಟ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತಮಿಳು ನಟ ವಿಜಯ್ ಮನೆಗೂ ಬಾಂಬ್ ಇಡುವುದಾಗಿ ಬೆದರಿಕೆ ಕರೆ ಮಾಡಿದ್ದರು. ಅನಾಮಿಕ ವ್ಯಕ್ತಿ ಕರೆ ಮಾಡಿ, ಬಾಂಬ್ ಬೆದರಿಕೆ ಹಾಕಿದ್ದರು. ಬಳಿಕ ರಜನಿಕಾಂತ್ ಮತ್ತು ವಿಜಯ್ ಮನೆಯನ್ನು ಶೋಧ ನಡೆಸಿದ್ದರು. ಬಾಂಬ್ ಬೆದರಿಗೆ ಸುದ್ದಿ ಕೇಳಿ ಅಭಿಮಾನಿಗಳ ಸಹ ಆತಂಕಪಟ್ಟಿದ್ದರು. ಬಳಿಕ ಹುಸಿ ಬಾಂಬ್ ಕರೆ ಎಂದು ಗೊತ್ತಾದ ಬಳಿಕ ನಿಟ್ಟುಸಿರು ಬಿಟ್ಟಿದ್ದರು.

  ಸದ್ಯ ಅಮಿತಾಬ್ ಬಂಗಲೆ ಮತ್ತು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಕರೆ ಮಾಡಿರುವುದು ಸಹ ಆತಂಕ ಸೃಷ್ಟಿಸಿತ್ತು. ಆದರೆ ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತಾಬ್ ಬಚ್ಚನ್ ಸದ್ಯ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಹ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಚಹ್ರೆ ಬಿಡುಗಡೆಗೆ ಕಾಯುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದಾರೆ. ಮೇಡೇ ಮತ್ತು ತೆಲುಗು ಸಿನಿಮಾ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bomb threat call causes scare at Amitabh Bachchan's Mumbai bungalow and 3 Railway Stations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X