»   » ಕ್ರಿಮಿನಲ್ ಕೇಸ್ ನಿಂದ ಕ್ಲೀನ್ ಚಿಟ್ ಪಡೆದ ಹೃತಿಕ್ ಮಾಜಿ ಪತ್ನಿ ಸುಸೇನ್

ಕ್ರಿಮಿನಲ್ ಕೇಸ್ ನಿಂದ ಕ್ಲೀನ್ ಚಿಟ್ ಪಡೆದ ಹೃತಿಕ್ ಮಾಜಿ ಪತ್ನಿ ಸುಸೇನ್

Posted By: ಸೋನು ಗೌಡ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ನ ಸುಂದರ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರ ವಿರುದ್ಧ, ಎರಡು ತಿಂಗಳ ಹಿಂದೆ (ಜೂನ್ ತಿಂಗಳಿನಲ್ಲಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

  ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಸುಮಾರು 1.9 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು, ಆರೋಪಿಸಿ ಎಂ.ಜಿ ಎಂಟರ್ ಪ್ರೈಸಸ್, ಗೋವಾ ಠಾಣೆಗೆ ದೂರು ನೀಡಿತ್ತು.[ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್]

  ಸುಸೇನ್ ಖಾನ್ ವಾಣಿಜ್ಯೋದ್ಯಮಿ ಹಾಗೂ ಒಳಾಂಗಣ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ವಿರುದ್ಧ ಎಂ.ಜಿ ಎಂಟರ್ ಪ್ರೈಸಸ್ ಕಂಪೆನಿ (Emgee Enterprises), ತಮಗೆ ಸುಸೇನ್ ಖಾನ್ ಅವರು ಚೀಟ್ ಮಾಡಿದ್ದಾರೆ ಎಂದು ಗೋವಾ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.[ಮಕ್ಕಳಿಗೋಸ್ಕರ ಮತ್ತೆ ಒಂದಾದ್ರಾ ಹೃತಿಕ್-ಸುಸೇನ್.?]

  ಆದರೆ ಇದೀಗ ಈ ಕಂಟಕದಿಂದ ಸುಸೇನ್ ಅವರಿಗೆ ಮುಕ್ತಿ ದೊರೆತಿದ್ದು, ಹೃತಿಕ್ ಮಾಜಿ ಪತ್ನಿ ಉಸ್ಸಪ್ಪಾ...ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದೆ ಓದಿ......

  ತಳ್ಳಿ ಹಾಕಿದ ಕೋರ್ಟ್

  ಇದೀಗ ಈ ಕೇಸ್ ಅನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಗುರುವಾರ (ಆಗಸ್ಟ್ 25) ದಂದು ಕೇಸ್ ನಡೆಸಿದ ಹೈಕೋರ್ಟ್, ಸುಸೇನ್ ಖಾನ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಅನ್ನು ಸಾರಾಸಗಾಟವಾಗಿ ತಳ್ಳಿ ಹಾಕಿದೆ.[ಉಗ್ರರ ಬಾಂಬ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹೃತಿಕ್]

  ಎಫ್.ಐ.ಆರ್ ನಲ್ಲಿ ಏನೇನೂ ಇಲ್ಲ

  "ಸುಸೇನ್ ಖಾನ್ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ನಲ್ಲಿ ಯಾವುದೇ ರೀತಿಯಲ್ಲಿ ಸರಿಯಾದ ಮಾಹಿತಿ ಇಲ್ಲ. ಜೊತೆಗೆ ಅವರು 1.9 ಕೋಟಿ ರೂಪಾಯಿ ವಂಚನೆ(ಅಪರಾಧ) ಮಾಡಿದ್ದಾರೆ ಅನ್ನೋದು ಕೂಡ ಎಫ್.ಐ.ಆರ್ ನಲ್ಲಿ ಬಹಿರಂಗ ಆಗಲಿಲ್ಲ" ಎಂದು ಕೋರ್ಟ್ ತಿಳಿಸಿದೆ.

  ವಾದ-ವಿವಾದ ಪರಿಶೀಲಿಸಿದ ಕೋರ್ಟ್

  "ಸುಸೇನ್ ಖಾನ್ ಅವರ ವಕೀಲರಾದ ನಿತಿನ್ ಸರ್ ದೇಸಾಯಿ ಮತ್ತು ಹಿತೇಶ್ ಜೈನ್ ಅವರ ವಾದವನ್ನು ಪರಿಶೀಲಿಸಿ, ಈ ಅಪರಾಧವನ್ನು ಸುಸೇನ್ ಅವರು ಮಾಡಿಲ್ಲ" ಎಂಬುದಾಗಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

  'ಮಧ್ಯಂತರ ಆದೇಶ' ಮುಂದೂಡಿದ ಕೋರ್ಟ್

  ಸುಸೇನ್ ಖಾನ್ ಅವರ ಮೇಲೆ ಯಾವುದೇ ರೀತಿಯಲ್ಲಿ ದಬ್ಬಾಳಿಕೆ ಮಾಡೋದಾಗಲಿ, ಅಥವಾ ಇನ್ನಿತರೇ ಆಕ್ಷನ್ ತೆಗೆದುಕೊಳ್ಳುವುದಾಗಲಿ ಮಾಡಬಾರದು ಎಂದು ಕಳೆದ ತಿಂಗಳು ಕೋರ್ಟ್ ಗೋವಾ ಪೊಲೀಸರಿಗೆ ಮಧ್ಯಂತರ ಆದೇಶ ನೀಡಿತ್ತು. ಅದನ್ನೂ ಇಲ್ಲಿಯವರಗೆ ಮುಂದೂಡಲಾಗಿತ್ತು ಕೂಡ.

  ಎಂಟರ್ ಪ್ರೈಸಸ್ ಕೊಟ್ಟ ದೂರಿನಲ್ಲೇನಿತ್ತು.?

  "2013 ರಲ್ಲಿ ಸುಸೇನ್ ಖಾನ್ ಅವರು ತಾನೊಬ್ಬ ವಾಸ್ತು ಶಿಲ್ಪಿ (an architect) ಎಂದು ಹೇಳಿಕೊಂಡು ನಮ್ಮ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ನಿಗದಿತ ಸಮಯದೊಳಗೆ ಒಪ್ಪಿಕೊಂಡ ಕೆಲಸವನ್ನು ಪೂರೈಸುವಲ್ಲಿ ಸುಸೇನ್ ಖಾನ್ ವಿಫಲವಾಗಿದ್ದಾರೆ" ಎಂದು ಎಂ.ಜಿ ಎಂಟರ್ ಪ್ರೈಸನ್ ಗೋವಾ (Emgee Enterprises) ತಮ್ಮ ದೂರಿನಲ್ಲಿ ತಿಳಿಸಿತ್ತು.

  ತಳ್ಳಿ ಹಾಕಿದ್ದ ಸುಸೇನ್

  ಆದರೆ ಈ ಆರೋಪವನ್ನು ಸುಸೇನ್ ಖಾನ್ ಅವರು ಕೂಡ ತಳ್ಳಿ ಹಾಕಿದ್ದರು. ಜೊತೆಗೆ ಇದಕ್ಕೆ ಪ್ರತಿಕ್ರಿಯಿಸಿ, 'ಇಂತಹ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ಇದರಿಂದ ನಾನು ಅಪರಾಧಿಯಲ್ಲ ಎಂಬುದನ್ನು ಸಾಬೀತು ಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ"ಎಂದು ಎಚ್ಚರಿಕೆ ನೀಡಿದ್ದರು.

  English summary
  The Goa bench of the Bombay High Court on Thursday quashed the FIR filed against Sussanne Khan, estranged wife of Bollywood superstar Hritik Roshan, in a cheating case, citing lack of evidence. The order was passed by Justice F.M. Reis and Justice Nutan Sardesai.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more