»   » ರಣಬೀರ್ ಜೊತೆಗೆ ಅನುಷ್ಕಾ ಶರ್ಮಾ ಮುತ್ತಿನ ಮಳೆ

ರಣಬೀರ್ ಜೊತೆಗೆ ಅನುಷ್ಕಾ ಶರ್ಮಾ ಮುತ್ತಿನ ಮಳೆ

By: ಜೀವನರಸಿಕ
Subscribe to Filmibeat Kannada

ಕೆಲವು ಸಿನಿಮಾಗಳೇ ಹಾಗೆ ಚಿತ್ರರಸಿಕರು ನಿರೀಕ್ಷಿಸುವಂತೆ ಮಾಡುತ್ತವೆ. ಆ ರೀತಿಯ ಸಿನಿಮಾಗಳನ್ನು ನಿರ್ದೇಶಿಸುವುದರಲ್ಲಿ ನಿಸ್ಸೀಮರಾದವರು ಅನುರಾಗ್ ಕಶ್ಯಪ್. ಅವರ 'ಬಾಂಬೆ ವೆಲ್ವೆಟ್' ಚಿತ್ರ ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈಗಾಗಲೆ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಎಲ್ಲರ ದೃಷ್ಟಿಯನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಎರಡನೇ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಆ ಟ್ರೇಲರ್ ಇಲ್ಲಿದೆ ನೋಡಿ ಆನಂದಿಸಿ. ಚುಂಬನ ಸನ್ನಿವೇಶಗಳಲ್ಲಿ ಅನುಷ್ಕಾ ಶರ್ಮಾ ರೊಚ್ಚಿಗೆದ್ದಿರುವುದನ್ನು ಕಾಣಬಹುದು. [ಅನುಷ್ಕಾ ಶರ್ಮಾ ಹಾಟ್ ಬಿಕಿನಿ 'ವಿರಾಟ್' ರೂಪ]

ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಮೊದಲ ಟ್ರೇಲರ್ ನಲ್ಲಿನ ದೃಶ್ಯಗಳು, ಪಾತ್ರಗಳು 60-70ರ ದಶಕವನ್ನು ನೆನಪಿಸುವಂತಿವೆ. ನಟ, ನಟಿಯರ ಪಾತ್ರಗಳನ್ನು ಹೆಣೆಯುವಲ್ಲಿ ಅನುರಾಗ್ ಕಶ್ಯಪ್ ಸಾಕಷ್ಟು ಎಚ್ಚರ ವಹಿಸಿರುವುದನ್ನು ಕಾಣಬಹುದು.

ಅನುರಾಗ್ ಕಶ್ಯಪ್ ಛಾಪು

ಇದೀಗ ಬಿಡುಗಡೆಯಾಗಿರುವ ಎರಡನೇ ಟ್ರೇಲರ್ ನಲ್ಲೂ ಅನುರಾಗ್ ಕಶ್ಯಪ್ ಅವರ ಛಾಪು ಇದೆ. ಈ ಚಿತ್ರದ ಕಥೆ ಬಾಂಬೆ ವೆಲ್ವೆಟ್ ಎಂಬ ನೈಟ್ ಕ್ಲಬ್ ಹಿನ್ನೆಲೆಯಲ್ಲಿ ನಡೆಯುತ್ತದೆ. ಹಾಗಾಗಿ ಚಿತ್ರಕ್ಕೆ ಆ ಹೆಸರು ಇಡಲಾಗಿದೆ.

ಹೆಸರಿನ ಮೂಲಕವೇ ಗಮನಸೆಳೆದಿರುವ ಚಿತ್ರ

ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ತನ್ನ ಭಿನ್ನ ಹೆಸರಿನ ಮೂಲಕವೇ ಬಾಲಿವುಡ್ ಗಮನಸೆಳೆದಿರುವ ಚಿತ್ರವಿದು. ಕರಣ್ ಜೋಹರ್ ವಿಲನ್ ಆಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಆಕ್ಷನ್ ಹೀರೋ ಆಗಿ ಕಾಣಿಸುತ್ತಿದ್ದಾರೆ.

ರೋಜಿ ಎಂಬ ಗಾಯಕಿ ಪಾತ್ರದಲ್ಲಿ ಅನುಷ್ಕಾ

ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಜಾನಿ ಬಾಲರಾಜ್ ಎಂಬ ಬಾಕ್ಸರ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇನ್ನು ಅನುಷ್ಕಾ ಶರ್ಮಾ ಅವರು ರೋಜಿ ಎಂಬ ಗಾಯಕಿ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಸುಮಾರು ರು.80 ಕೋಟಿ ಬಜೆಟ್ ಚಿತ್ರ

ಸುಮಾರು ರು.80 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಚಿತ್ರವಾಗಿದೆ. ಇತಿಹಾಸಕಾರ ಜ್ಞಾನ್ ಪ್ರಕಾಶ್ ಅವರ ಕೃತಿ 'ಮುಂಬಯಿ ಫೆಬಲ್ಸ್' ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಮೇ.15ರಂದು ಬಿಡುಗಡೆ

ಮೇ.15ರಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಅನುಷ್ಕಾ ಶರ್ಮಾ ಹಾಗೂ ರಣಬೀರ್ ಕಪೂರ್ ನಡುವಿನ ರೋಚಕ ಸನ್ನಿವೇಶಗಳು ಚಿತ್ರರಸಿಕರ ಆಸಕ್ತಿಯನ್ನು ಕೆರಳಿಸಿವೆ.

ಅನುಷ್ಕಾ ಶರ್ಮಾ ಏನಂತಾರೆ?

ಅನುಷ್ಕಾ ಶರ್ಮಾ ಮಾತನಾಡುತ್ತಾ, "ಸಿನಿಮಾ ನೋಡಿದ ಮರುದಿನವೇ ನನ್ನ ಪಾತ್ರವನ್ನು ಮರೆಯುವ ರೀತಿಯಲ್ಲಿ ಮಾಡುತ್ತಿಲ್ಲ. ಆ ಪಾತ್ರಕ್ಕೆ ನನ್ನಿಂದ ಅಷ್ಟೋ ಇಷ್ಟೋ ಪ್ರಯೋಜನವಿರಬೇಕು. ಕೇವಲ ಟೈಟಲ್ ಕಾರ್ಡ್ ನಲ್ಲಿ ನನ್ನ ಹೆಸರಿರಬೇಕೆಂದು ನಾನು ಬಯಸಿಲ್ಲ. ಸಿನಿಮಾದಲ್ಲಿ ನಾನೂ ಭಿನ್ನವಾಗಿ ಇರಬೇಕೆಂದು ಬಯಸುತ್ತೇನೆ" ಎಂದಿದ್ದಾರೆ.

English summary
The cast of the film revealed the second trailer of Bombay Velvet. While a second trailer of the same film carries with it the risk of looking like a mere shifting around of scenes, this trailer, however, tries to reach for more. It tell us more about the emotions in the film; from greed, passion, love, anger, it's all there and it gives you an instant 70s Hindi cinema nostalgia.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada