»   » ಟೀನಾ ಅಂಬಾನಿ ಕೊಟ್ಟ ಉಡುಗೊರೆ ನೋಡಿ ಕಣ್ಣೀರಿಟ್ಟ ಬೋನಿ ಕಪೂರ್

ಟೀನಾ ಅಂಬಾನಿ ಕೊಟ್ಟ ಉಡುಗೊರೆ ನೋಡಿ ಕಣ್ಣೀರಿಟ್ಟ ಬೋನಿ ಕಪೂರ್

Posted By:
Subscribe to Filmibeat Kannada

ಮೋಹಿತ್ ಮಾರ್ವ ಮದುವೆಗೆಂದು ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಭಾರತಕ್ಕೆ ಹಿಂದಿರುಗಿ ಬರಲೇ ಇಲ್ಲ. ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ರು ನಟಿ ಶ್ರೀದೇವಿ. 'ಅತಿಲೋಕ ಸುಂದರಿ'ಯ ಹಠಾತ್ ನಿಧನದಿಂದ ಇಡೀ ಭಾರತವೇ ಆಘಾತಗೊಂಡಿತ್ತು.

ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ, ಅಂಬಾನಿ ಕುಟುಂಬ ಹಾಗೂ ಕಪೂರ್ ಕುಟುಂಬದ ನಡುವೆ ಉತ್ತಮ ಒಡನಾಟ, ಸ್ನೇಹ, ಬಾಂಧವ್ಯ ಇದೆ. ಅಸಲಿಗೆ, ಅನಿಲ್ ಅಂಬಾನಿ ಪತ್ನಿ ಟೀನಾ ಸಂಬಂಧಿಯನ್ನೇ ಬೋನಿ ಕಪೂರ್ ಸಹೋದರಿಯ ಪುತ್ರ ಮೋಹಿತ್ ಮಾರ್ವಾ ವಿವಾಹವಾಗಿರೋದ್ರಿಂದ ಅನಿಲ್ ಅಂಬಾನಿ ಮತ್ತು ಬೋನಿ ಕಪೂರ್ ಸಂಬಂಧಿಗಳಾಗಿದ್ದಾರೆ.

ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲು ಅನಿಲ್ ಅಂಬಾನಿ ತಮ್ಮ ಪ್ರೈವೇಟ್ ಜೆಟ್ ನ ದುಬೈಗೆ ಕಳುಹಿಸಿಕೊಟ್ಟಿದ್ದು ನಿಮಗೆ ನೆನಪಿರಬಹುದು.

Boney Kapoor cried after receiving Tina Ambani's gift

ಅಷ್ಟಕ್ಕೂ, ಶ್ರೀದೇವಿ ಮೃತದೇಹ ತರಲು ಅನಿಲ್ ಅಂಬಾನಿ ಯಾಕೆ ಪ್ರೈವೇಟ್ ಜೆಟ್ ಕಳುಹಿಸಬೇಕು.?

ಶ್ರೀದೇವಿ ಮರಣ ಹೊಂದಿದ ಬಳಿಕ, ಆಕೆಯ ನೆನಪಲ್ಲಿ ಅನಿಲ್ ಅಂಬಾನಿ ಪತ್ನಿ ಟೀನಾ ಬೋನಿ ಕಪೂರ್ ಗೆ ಶ್ರೀದೇವಿಯ ಫೋಟೋ ಒಂದನ್ನ ನೀಡಿದ್ದಾರೆ.

ಟೀನಾ ಅಂಬಾನಿ ಅವರ 61ನೇ ಹುಟ್ಟುಹಬ್ಬದಂದು ಕ್ಲಿಕ್ ಆಗಿದ್ದ ಶ್ರೀದೇವಿಯವರ ಫೋಟೋ ಅದು. ಅದಕ್ಕೆ ಬೆಳ್ಳಿ ಫ್ರೇಮ್ ಹಾಕಿಸಿ, ಬೋನಿ ಕಪೂರ್ ಗೆ ಟೀನಾ ಅಂಬಾನಿ ನೀಡಿದ್ದರು. ಶ್ರೀದೇವಿ ಭಾವಚಿತ್ರವನ್ನ ನೋಡಿ ಬೋನಿ ಕಪೂರ್ ಗದ್ಗದಿತರಾದರು.

ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?

ಅಷ್ಟಕ್ಕೂ, ಟೀನಾ ಅಂಬಾನಿ ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಫೆಬ್ರವರಿ 11, 2018 ರಲ್ಲಿ. ಅಂದ್ರೆ, ಶ್ರೀದೇವಿ ನಿಧನರಾದ ಹದಿಮೂರು ದಿನಗಳ ಹಿಂದೆ.

ಟೀನಾ ಅಂಬಾನಿ ಜನ್ಮದಿನವನ್ನ ನಟಿ ಶ್ರೀದೇವಿ, ಕರಣ್ ಜೋಹರ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ದಿಗ್ಗಜರೆಲ್ಲ ಸೇರಿ ಮುಂಬೈನಲ್ಲಿ ಸೆಲೆಬ್ರೇಟ್ ಮಾಡಿದ್ದರು. ದುರಂತ ಅಂದ್ರೆ, ಅದೇ ನಟಿ ಶ್ರೀದೇವಿಯ ಕಟ್ಟ ಕಡೆಯ ಪಾರ್ಟಿ ಆಗಿದೆ.

English summary
Boney Kapoor cried after receiving Tina Ambani's gift in Sridevi's memory.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada