For Quick Alerts
ALLOW NOTIFICATIONS  
For Daily Alerts

  ಸರ್ಪ್ರೈಸ್ ಕೊಡಲು ಹೋದ ಬೋನಿ ಕಪೂರ್ ಗೆ ಕಾದಿತ್ತು ಶಾಕ್: ಬಾತ್ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿ!

  By Harshitha
  |
  ಶ್ರೀದೇವಿ ಬಾತ್ ಟಬ್ ನಲ್ಲಿ ನಿಶ್ಚಲವಾಗಿ ಬಿದ್ದಿದ್ದನ್ನ ಕಂಡ ಬೋನಿ ಕಪೂರ್ ಶಾಕ್ | Filmibeat Kannada

  ಎಂಥಾ ದುರಂತ ನೋಡಿ... ಪ್ರೀತಿಯ ಪತ್ನಿ ಹಾಗೂ ಪುತ್ರಿ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯಬೇಕು ಎಂದುಕೊಂಡು ಬಂದಿದ್ದ ಬೋನಿ ಕಪೂರ್ ಗೆ ದೊಡ್ಡ ಆಘಾತವೇ ಕಾದಿತ್ತು.

  ದುಬೈನಲ್ಲಿ ಶ್ರೀದೇವಿಗೆ ಇಷ್ಟವಾದ ಡಿನ್ನರ್ ಕೊಡಿಸಬೇಕು ಎಂದು ಬೋನಿ ಕಪೂರ್ ಪ್ಲಾನ್ ಮಾಡಿದ್ರೆ, ವಿಧಿ ಲಿಖಿತವೇ ಬೇರೆ ಆಗಿತ್ತು. ಇನ್ನೇನು ಪತಿ ಜೊತೆಗೆ ಊಟ ಮಾಡಲು ತೆರಳಬೇಕಿದ್ದ ಶ್ರೀದೇವಿ, ಹಠಾತ್ತಾಗಿ ಕುಸಿದು ಬಿದ್ದರು. ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ತೆರಳುವಷ್ಟರಲ್ಲಿ, ಅದಾಗಲೇ ಶ್ರೀದೇವಿ ಸಾವಿನ ಕದ ತಟ್ಟಿದ್ದರು.

  ಶ್ರೀದೇವಿಯ ಅಂತಿಮ ಕ್ಷಣಗಳ ಸಂಪೂರ್ಣ ವರದಿ ಇಲ್ಲಿದೆ, ಓದಿರಿ...

  ಮೋಹಿತ್ ಮಾರ್ವಾ ಮದುವೆ ನಡೆದಿದ್ದು ಯಾವಾಗ.?

  ಮೋಹಿತ್ ಮಾರ್ವಾ ಮದುವೆಯಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳೇ ಹೆಚ್ಚಾಗಿವೆ. ಮೋಹತ್ ಮಾರ್ವಾ ಮದುವೆಯಲ್ಲಿ ಪಾಲ್ಗೊಳ್ಳಲು ಕುಟುಂಬದ ಸಮೇತ ಶ್ರೀದೇವಿ ದುಬೈಗೆ ತೆರಳಿದ್ದು ನಿಜ. ಆದ್ರೆ, ಮದುವೆ ಮುಗಿದ್ಮೇಲೂ, ದುಬೈನಲ್ಲೇ ಶ್ರೀದೇವಿ ತಂಗಿದ್ದರು. ಅಷ್ಟಕ್ಕೂ, ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ನಡೆದಿದ್ದು ಕಳೆದ ಮಂಗಳವಾರ (ಫೆಬ್ರವರಿ 20). ಶ್ರೀದೇವಿ ಕೊನೆಯುಸಿರೆಳೆದಿದ್ದು ಶನಿವಾರ ರಾತ್ರಿ (ಫೆಬ್ರವರಿ 24).

  ಶ್ರೀದೇವಿ ಮೃತದೇಹ ಇನ್ನೂ ಕುಟುಂಬದ ಕೈಸೇರಿಲ್ಲ: ತಡವಾಗುತ್ತಿರುವುದಕ್ಕೆ ಕಾರಣವೇನು.?

  ಮದುವೆ ಮುಗಿದ್ಮೇಲೆ, ಭಾರತಕ್ಕೆ ವಾಪಸ್ ಬಂದಿದ್ದ ಬೋನಿ ಕಪೂರ್

  ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ಮುಗಿದ್ಮೇಲೆ, ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಕಪೂರ್ ಭಾರತಕ್ಕೆ ವಾಪಸ್ ಬಂದಿದ್ದರು. ಆದ್ರೆ, ಶ್ರೀದೇವಿ ಮಾತ್ರ ಸಹೋದರಿ ಶ್ರೀಲತಾ ಜೊತೆ ಕಾಲ ಕಳೆಯಲು ದುಬೈನಲ್ಲೇ ಉಳಿದುಕೊಂಡರು.

  ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

  ಸರ್ ಪ್ರೈಸ್ ಕೊಡಲು ಬಂದ ಬೋನಿ ಕಪೂರ್

  ಭಾರತಕ್ಕೆ ವಾಪಸ್ ಬಂದ ಬೋನಿ ಕಪೂರ್ ಗೆ ಅದೇನು ಫೀಲ್ ಆಯ್ತೋ ಗೊತ್ತಿಲ್ಲ. ವಾಪಸ್ ಪುತ್ರಿ ಜೊತೆಗೆ ದುಬೈಗೆ ಫ್ಲೈಟ್ ಹತ್ತಿದರು. ಖಲೀಜ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ದುಬೈಗೆ ಮರಳಿ ಬಂದ ಬೋನಿ ಕಪೂರ್, ಶ್ರೀದೇವಿಗೆ ಸರ್ ಪ್ರೈಸ್ ಡಿನ್ನರ್ ಕೊಡಲು ಪ್ಲಾನ್ ಮಾಡಿದ್ದರು.

  ಶ್ರೀದೇವಿ ಪಾರ್ಥೀವ ಶರೀರ ತರಲು ದುಬೈಗೆ ಪ್ರೈವೇಟ್ ಜೆಟ್ ಕಳುಹಿಸಿದ ಅನಿಲ್ ಅಂಬಾನಿ

  ಶ್ರೀದೇವಿ ತಂಗಿದ್ದ ರೂಮ್ ಗೆ ಬಂದ ಬೋನಿ ಕಪೂರ್

  ಮುಂಬೈ ನಿಂದ ತೆರಳಿದ ಬೋನಿ ಕಪೂರ್, ದುಬೈನಲ್ಲಿ ಶ್ರೀದೇವಿ ತಂಗಿದ್ದ Jumeirah Emirates Towers Hotel ಗೆ 5.30 ರ ಸುಮಾರಿಗೆ ಬಂದರು.

  ಕೆಲ ಕಾಲ ಹರಟಿದ ದಂಪತಿ

  ಇದ್ದಕ್ಕಿದ್ದಂತೆ ವಾಪಸ್ ಆದ ಪತಿ ಹಾಗೂ ಪುತ್ರಿಯನ್ನು ಕಂಡು ಶ್ರೀದೇವಿ ಸಂತಸಗೊಂಡರು. ಕೆಲ ಕಾಲ ಪತಿ ಜೊತೆ ಶ್ರೀದೇವಿ ಹರಟಿದರು. ಡಿನ್ನರ್ ಗೆ ಹೊರಗೆ ಹೋಗುವ ಬಗ್ಗೆ ಬೋನಿ ಕಪೂರ್ ತಿಳಿಸಿದಾಗ, ರೆಡಿ ಆಗಲು ಶ್ರೀದೇವಿ ಬಾತ್ ರೂಮ್ ಗೆ ತೆರಳಿದರು.

  ಹದಿನೈದು ನಿಮಿಷ ಆದರೂ ಬರಲಿಲ್ಲ

  ಬಾತ್ ರೂಮ್ ಒಳಗೆ ಹೋದ ಶ್ರೀದೇವಿ ಹದಿನೈದು ನಿಮಿಷ ಆದರೂ ಹೊರಗೆ ಬರಲಿಲ್ಲ. ಸದ್ದು ಕೂಡ ಆಗದೇ ಇದ್ದ ಕಾರಣ ಬೋನಿ ಕಪೂರ್ ಗಾಬರಿ ಗೊಂಡರು.

  ಬೋನಿ ಕಪೂರ್ ಗೆ ಕಾದಿತ್ತು ಆಘಾತ

  ಬಾತ್ ರೂಮ್ ಬಾಗಿಲು ತಟ್ಟಿದರೂ, ಒಳಗಿನಿಂದ ಸದ್ದು ಬರಲಿಲ್ಲ. ಬಾಗಿಲು ಮುರಿದು ಒಳಗೆ ಹೋದ ಬೋನಿ ಕಪೂರ್ ಗೆ ದೊಡ್ಡ ಆಘಾತವೇ ಕಾದಿತ್ತು. ನೀರು ತುಂಬಿದ್ದ ಬಾತ್ ಟಬ್ ಒಳಗೆ ಶ್ರೀದೇವಿ ಬಿದ್ದಿದ್ದರು.

  ಆಸ್ಪತ್ರೆಗೆ ಕರೆತಂದ ಬೋನಿ ಕಪೂರ್

  ಕುಸಿದು ಬಿದ್ದಿದ್ದ ಶ್ರೀದೇವಿಯನ್ನ ಕಂಡು ಬೋನಿ ಕಪೂರ್ ಆಘಾತಗೊಂಡರು. ತಕ್ಷಣ ಸ್ನೇಹಿತರಿಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ, ಪೊಲೀಸ್ ಗೂ ವಿಷಯ ಮುಟ್ಟಿತು. ಆಸ್ಪತ್ರೆಗೆ ತಲುಪುವ ಮುನ್ನವೇ ಶ್ರೀದೇವಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

  ಹೋಟೆಲ್ ಸಿಬ್ಬಂದಿ ಹೇಳುವುದೇ ಬೇರೆ.!

  ಕೆಲ ಪತ್ರಿಕೆಗಳು ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ನೀರು ತರುವಂತೆ ರಾತ್ರಿ 10.30ಕ್ಕೆ ರೂಮ್ ಸರ್ವೀಸ್ ಗೆ ಶ್ರೀದೇವಿ ಫೋನ್ ಮಾಡಿದ್ದರಂತೆ. ನೀರು ತೆಗೆದುಕೊಂಡು ಹೋಟೆಲ್ ಸಿಬ್ಬಂದಿ ಹೋದಾಗ, ಶ್ರೀದೇವಿ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಸಿಬ್ಬಂದಿ ರೂಮ್ ಬಾಗಿಲು ತೆಗೆದು ಒಳಗೆ ಹೊಕ್ಕರೆ, ಬಾತ್ ರೂಮ್ ನಲ್ಲಿ ಶ್ರೀದೇವಿ ಕುಸಿದು ಬಿದ್ದಿದ್ದರಂತೆ. ಆಸ್ಪತ್ರೆಗೆ ತೆರಳುವಷ್ಟರಲ್ಲಿ ಶ್ರೀದೇವಿ ನಿಧನಗೊಂಡಿದ್ದರು ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. ಈ ಪೈಕಿ ಯಾವುದು ಸತ್ಯ, ಯಾವುದು ಸುಳ್ಳು... ಶ್ರೀದೇವಿ ಕುಟುಂಬಕ್ಕೆ ಮಾತ್ರ ಗೊತ್ತು.!

  English summary
  According to the latest reports, Sridevi was getting ready for a dream dinner date with her Husband Boney Kapoor in Dubai before she reportedly suffered a cardiac arrest at their hotel room and died on Saturday.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more