»   » ಭಜರಂಗಿ 'ಭಾಯಿ' ಕೈವಶವಾದ 10 ದಾಖಲೆಗಳು

ಭಜರಂಗಿ 'ಭಾಯಿ' ಕೈವಶವಾದ 10 ದಾಖಲೆಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಜರಂಗಿ ಭಕ್ತನಾಗಿ ಸಲ್ಮಾನ್ ಖಾನ್ ಎಲ್ಲರ 'ಭಾಯಿ ಜಾನ್' ಅಗಿದ್ದಾರಲ್ಲದೆ ಬಾಕ್ಸಾಫೀಸ್ ನಲ್ಲೂ ಭರ್ಜರಿ ಗಳಿಕೆ ದಾಖಲಿಸುವ ಮೂಲಕ ನಿರ್ಮಾಪಕರಿಗೂ 'ಪ್ಯಾರಿ ಜಾನ್' ಆಗಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕರ್ನಾಟಕದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ 'ಭಜರಂಗಿ ಭಾಯಿಜಾನ್' ಗೆಲುವಿನ ನಾಗಾಲೋಟ ಮುಂದುವರೆದಿದೆ. ಪ್ರಮುಖ 10 ಬಾಕ್ಸಾಫೀಸ್ ರೆಕಾರ್ಡ್ ಗಳ ಮಾಹಿತಿ ಇಲ್ಲಿದೆ.

ಭಾಯಿಜಾನ್ ಚಿತ್ರ ಬಿಡುಗಡೆಯಾದ ಮೊದಲ 6 ದಿನಗಳಲ್ಲೇ 335 ಕೋಟಿ ರು ಗಳಿಸಿತ್ತು. ಪಿಕೆ, ಚೆನ್ನೈ ಎಕ್ಸ್ ಪ್ರೆಸ್ ಅಷ್ಟೇ ಏಕೆ ಸಲ್ಮಾನ್ ಖಾನ್ ಅವರ ಕಿಕ್ 2 ಸೇರಿದಂತೆ ಎಲ್ಲಾ ಚಿತ್ರಗಳ ಗಳಿಕೆಯನ್ನು ಮೀರಿ ಆಗಸದ ಎತ್ತರಕ್ಕೆ ಭಜರಂಗಿ ನಿಂತಿದ್ದಾನೆ. ಭಾರತದಲ್ಲಷ್ಟೇ ಅಲ್ಲದೆ ಯುಎಸ್ ಟಾಪ್ 10 ಬಾಕ್ಸಾಫೀಸ್ ಪಟ್ಟಿ, ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ.[ಸತ್ಯಬಿಚ್ಚಿಟ್ಟ ರಾಜಮೌಳಿ ತಂದೆ]

ಚಿತ್ರ ಬಿಡುಗಡೆಯಾಗಿ ಎರಡು ಮೂರು ವಾರ ಕಳೆದರೂ ಚಿತ್ರದ ಗಳಿಕೆ ಹಿಗ್ಗಲು ಕಾರಣ ಎಲ್ಲೆಡೆಯಿಂದ ಸಿಕ್ಕಿದ ಗುಣಾತ್ಮಕ ವಿಮರ್ಶೆ ಎನ್ನಬಹುದು.[ಮೋದಿಗೆ ಮನವಿ ಮಾಡಿಕೊಂಡ ಸಲ್ಲೂ 'ಭಾಯಿ ಜಾನ್']

ಮುನ್ನಿ, ಭಜರಂಗಿ ಪಾತ್ರಗಳು, ಭಾವನಾತ್ಮಕ ದೃಶ್ಯಗಳು ಎಲ್ಲಾ ಸ್ತರದ, ಎಲ್ಲಾ ಪ್ರದೇಶಗಳ ಜನ ಮನ ಮುಟ್ಟಿದೆ. ಬಿಡುಗಡೆಯಾದ ನಾಲ್ಕು ದಿನಕ್ಕೆ 260 ಕೋಟಿ ರು ಗಳಿಸಿದಾಗಲೇ ಪಿಕೆ, ಧೂಮ್ 3 ದಾಖಲೆಯನ್ನು ಅಳಿಸಿ ಹಾಕಿತ್ತು. ಒಟ್ಟಾರೆ, ಭಜರಂಗಿ ಮುರಿದು ಹಾಕಿರುವ ದಾಖಲೆಗಳ ಪಟ್ಟಿ ಮುಂದಿದೆ...

ಈದ್ ರಿಲೀಸ್: ಅತ್ಯಧಿಕ ಓಪನರ್ ಕೊಟ್ಟ ಚಿತ್ರ

ಈದ್ ಹಬ್ಬದ ರಿಲೀಸ್: ಅತ್ಯಧಿಕ ಓಪನರ್ ಕೊಟ್ಟ ಚಿತ್ರ ಇದಾಗಿದ್ದು, ಜುಲೈ 17ಕ್ಕೆ ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 27.25 ಕೋಟಿ ರು ಗಳಿಸಿತ್ತು. ಸಲ್ಮಾನ್ ಅವರ ಕಿಕ್ ಚಿತ್ರ 26.40 ಕೋಟಿ ರು ಈ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

2015ರ ಬಹುದೊಡ್ಡ ಆರಂಭಿಕ ಗಳಿಕೆ

2015ರ ಬಹುದೊಡ್ಡ ಆರಂಭಿಕ ಗಳಿಕೆ ತಂದುಕೊಟ್ಟ ಚಿತ್ರ ಇದಾಗಿದೆ. ತನು ವೆಡ್ಸ್ ಮನು ರಿಟರ್ನ್ಸ್, ಎಬಿಸಿಡಿ 2, ಪಿಕು ದಾಖಲೆ ಮುರಿದಿದೆ. ಭಜರಂಗಿ ಭಾಯಿಜಾನ್ ಚಿತ್ರ ಆರಂಭಿಕ ಮುನ್ನಡೆ ಮೊತ್ತ 27.25 ಕೋಟಿ ರು ನಷ್ಟಿದ್ದು ಇದು ಈ ವರ್ಷದ ಇಲ್ಲಿತನಕದ ಅತ್ಯಧಿಕ ಆರಂಭಿಕ ಗಳಿಕೆ ಮೊತ್ತವಾಗಿದೆ.

ಅತಿ ಹೆಚ್ಚು 100 ಕೋಟಿ ರು ಕ್ಲಬ್ ಸೇರಿದ ಸಲ್ಮಾನ್

ಅತಿ ಹೆಚ್ಚು 100 ಕೋಟಿ ರು ಕ್ಲಬ್ ಸೇರಿದ ಚಿತ್ರಗಳ ಪೈಕಿ ಸಲ್ಮಾನ್ ಖಾನ್ ಮುಂದಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿನ ಗಳಿಕೆಯಲ್ಲೇ 100 ಕೋಟಿ ರು ಕ್ಲಬ್ ಅತ್ಯಂತ ತ್ವರಿತವಾಗಿ ಸೇರಿದ ನಾಯಕರುಗಳ ಪೈಕಿ ಸಲ್ಮಾನ್ ಅಗ್ರಸ್ಥಾನದಲ್ಲಿದ್ದು, ಇದುವರೆವಿಗೆ ಅವರ 8 ಚಿತ್ರಗಳು ಈ ಕ್ಲಬ್ ನಲ್ಲಿ ಕಾಣಿಸಿಕೊಂಡಿವೆ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ದಾಖಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಆರಂಭಿಕ ಗಳಿಕೆಯಲ್ಲಿ ಭಜರಂಗಿ ದಾಖಲೆ ಬರೆದಿದೆ. ಮೊದಲ ವಾರದಲ್ಲೇ 8 ಮಿಲಿಯನ್ ಡಾಲರ್ (50.89 ಕೋಟಿ ರು) ಗಳಿಸಿದ್ದು, ಇದಕ್ಕೆ ಮುಂಚೆ ಸಲ್ಮಾನ್ ಅವರ ಯಾವ ಚಿತ್ರವೂ ಇಷ್ಟು ಗಳಿಕೆ ಮಾಡಿದ್ದಿಲ್ಲ.

ಒಂದು ದಿನದ ಗಳಿಕೆಯಲ್ಲೂ ದಾಖಲೆ

ಸಲ್ಮಾನ್ ಖಾನ್ ಚಿತ್ರಗಳು ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಳ್ಳುವುದು ಹೊಸತೇನಲ್ಲ. ಅದರೆ, ಆರಂಭಿಕ ದಿನವನ್ನು ಮೀರಿಸಿ ಮಿಕ್ಕ ದಿನದಲ್ಲಿ ಭರ್ಜರಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. 2ನೇ ದಿನ 36.50 ಕೋಟಿ ರು ಗಳಿಸಿದ್ದು ಒಂದು ದಿನದ ಗಳಿಕೆಯಲ್ಲಿ ಹೊಸ ದಾಖಲೆಯಾಗಿದೆ.

ಮೊದಲ ನಾಲ್ಕು ದಿನದ ಗಳಿಕೆಯಲ್ಲೂ ಬೆಸ್ಟ್

ಬಿಡುಗಡೆಯಾದ ಮೊದಲ ನಾಲ್ಕು ದಿನದ ಗಳಿಕೆಯಲ್ಲಿ ಇಲ್ಲಿ ತನಕದ ಟಾಪ್ 3 ಸ್ಥಾನದಲ್ಲಿರುವ ಚಿತ್ರಗಳು:
1. ಭಜರಂಗಿ ಭಾಯಿ ಜನ್ :260 ಕೋಟಿ ರು.
2. ಪಿಕೆ : 252 ಕೋಟಿ ರು.
3. ಧೂಮ್ 3: 245 ಕೋಟಿ ರು

ಪಾಕಿಸ್ತಾನದ ಗಳಿಕೆಯಲ್ಲೂ ಭಜರಂಗಿ ಟಾಪ್

ಪಾಕಿಸ್ತಾನದ ಗಳಿಕೆಯಲ್ಲೂ ಭಜರಂಗಿ ಟಾಪ್ ಸ್ಥಾನದಲ್ಲಿದೆ. ಭಾರತೀಯ ಸಿನಿಮಾವೊಂದು ಪಾಕಿಸ್ತಾನದಲ್ಲಿ ಇದುವರೆವಿಗೂ ಗಳಿಸಿದ್ದಷ್ಟು ಮೊತ್ತವನ್ನು ಆರಂಭಿಕ ದಿನವೇ ಭಜರಂಗಿ ಗಳಿಸಿದೆ. ಮೊದಲ ದಿನವೇ 6.5 ಕೋಟಿ ರು ಗಳಿಸಿದ್ದು ದಾಖಲೆ.

ಯುಎಸ್ ಬಾಕ್ಸಾಫೀಸ್ ಪಟ್ಟಿಯಲ್ಲಿ ಸ್ಥಾನ

ಯುಎಸ್ ಬಾಕ್ಸಾಫೀಸ್ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದು ಎಲ್ಲರ ಹುಬ್ಬೇರಿಸಿದೆ.

ಸಾಗರೋತ್ತರ ದೇಶಗಳ ಗಳಿಕೆ ಸೂಪರ್

ಸಾಗರೋತ್ತರ ದೇಶಗಳ ಗಳಿಕೆ ಸೂಪರ್ ಆಗಿ ಬೆಳೆಯುತ್ತಿದೆ.

ಸಾರ್ವಕಾಲಿಕ ದಾಖಲೆ ಪಟ್ಟಿಗೆ ಸೇರ್ಪಡೆ

ಸಾರ್ವಕಾಲಿಕ ದಾಖಲೆ ಪಟ್ಟಿಗೆ ಸೇರ್ಪಡೆಗೊಳ್ಳುವ ಸನಿಹದಲ್ಲಿದೆ. ಸದ್ಯಕ್ಕೆ ಸಾಗರೋತ್ತರ ಗಳಿಕೆಯಲ್ಲಿ 12ನೇ ಸ್ಥಾನ ಹಾಗೂ ಒಟ್ಟಾರೆ ಗಳಿಕೆಯಲ್ಲಿ 11ನೇ ಸ್ಥಾನದಲ್ಲಿದೆ. ತ್ವರಿತವಾಗಿ ಈ ಸ್ಥಾನಕ್ಕೇರಿದ ಮೊದಲ ಚಿತ್ರ ಇದಾಗಿದೆ. ಇನ್ನೇನು 500 ಕೋಟಿ ರು ಕ್ಲಬ್ ಸೇರಲಿದೆ.

English summary
Salman Khan's Bajrangi Bhaijaan has been shattering all the Box Office records both in the international market as well as in India. In the mean time, check out the Box Office records created by Bajrangi Bhaijaan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada