Don't Miss!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Sports
ಟೆಸ್ಟ್ನಲ್ಲೂ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಷ್ಟ್ರೀಯ ಸಿನಿಮಾ ದಿನದ 75 ರೂಪಾಯಿ ಟಿಕೆಟ್‌ನಿಂದ ಬ್ರಹ್ಮಾಸ್ತ್ರಕ್ಕೆ ಲಾಭನಾ, ನಷ್ಟನಾ? ಆ ದಿನ ಗಳಿಸಿದ್ದೆಷ್ಟು?
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕಳೆದ ಶುಕ್ರವಾರವೇ ಅಂದರೆ ಸೆಪ್ಟೆಂಬರ್ 16ರಂದೇ ಈ ರಾಷ್ಟ್ರೀಯ ಸಿನಿಮಾ ದಿನದ ಆಚರಣೆ ನಡೆಯಬೇಕಿತ್ತು. ಆದರೆ ಅದರ ಹಿಂದಿನ ವಾರವಷ್ಟೇ ತೆರೆಕಂಡು ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದ ಬ್ರಹ್ಮಾಸ್ತ್ರ ಚಿತ್ರದ ಗಳಿಕೆ ಮೇಲೆ ಈ ಕಡಿಮೆ ದರದ ಟಿಕೆಟ್ ಅಭಿಯಾನ ಪರಿಣಾಮ ಬೀರುತ್ತೆ ಎಂಬ ಕಾರಣದಿಂದಾಗಿ ಚಿತ್ರತಂಡ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜತೆ ಚರ್ಚಿಸಿ ಒಂದು ವಾರ ಈ ವಿಶೇಷ ದಿನವನ್ನು ಮೂಂದೂಡಿತ್ತು.
ಹೀಗಾಗಿಯೇ ರಾಷ್ಟ್ರೀಯ ಸಿನಿಮಾ ದಿನ ನಿನ್ನೆಗೆ ( ಸೆಪ್ಟೆಂಬರ್ 23 ) ನಡೆಯಿತು. ಇನ್ನು ಸಿನಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಉದ್ದೇಶದಿಂದ ಈ ರಾಷ್ಟ್ರೀಯ ದಿನವನ್ನು ಆಚರಿಸಲಾಯಿತು. ಕೊರೊನಾ ಸಮಯದಲ್ಲಿ ಮುಚ್ಚಿದ್ದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಪುನರಾರಂಭಗೊಂಡಾಗ ಮತ್ತೆ ಚಿತ್ರಮಂದಿರಗಳತ್ತ ಬಂದು ಚಿತ್ರ ವೀಕ್ಷಿಸಿ ತಮ್ಮ ವ್ಯವಹಾರ ಮೊದಲಿನಂತೆ ಆಗುವಂತೆ ಮಾಡಿದ ಸಿನಿ ಪ್ರೇಕ್ಷಕರಿಗೆ 75 ರೂಪಾಯಿಗಳಿಗೆ ಟಿಕೆಟ್ ನೀಡುವ ಮೂಲಕ ಧನ್ಯವಾದ ತಿಳಿಸಲಾಯಿತು.
ಇನ್ನು ಇದರಿಂದ ಚಿತ್ರದ ಗಳಿಕೆ ಮೇಲೆ ಹೊಡೆತ ಬೀಳುತ್ತೆ ಎಂದು ಸಿನಿಮಾ ದಿನವನ್ನೇ ಒಂದು ವಾರ ಮುಂದೂಡಿಸಿದ ಬ್ರಹ್ಮಾಸ್ತ್ರ ಚಿತ್ರದ ಮೇಲೆ ನಿನ್ನೆ ನಿಜವಾಗಿಯೂ ಕಡಿಮೆ ಟಿಕೆಟ್ ದರದ ಅಭಿಯಾನದ ಹೊರೆ ಉಂಟಾಯಿತಾ, ಈ ದಿನದಂದು ಬ್ರಹ್ಮಾಸ್ತ್ರ ಎಷ್ಟು ಕೋಟಿ ದೋಚಿತು ಎಂಬ ಮಾಹಿತಿ ಇಲ್ಲಿದೆ.

ಕಡಿಮೆ ಟಿಕೆಟ್ ದರದಲ್ಲಿ ಬಾಕ್ಸ್ ಆಫೀಸ್ ಲೂಟಿ ಮಾಡಿದ ಬ್ರಹ್ಮಾಸ್ತ್ರ
ಸಿನಿಮಾ ದಿನದ ಪ್ರಯುಕ್ತ 75 ರೂಪಾಯಿಗೆ ಮಲ್ಟಿಪ್ಲೆಕ್ಸ್ ಟಿಕೆಟ್‌ಗಳನ್ನು ನೀಡಿದ್ದರಿಂದ ಚಿತ್ರತಂಡಕ್ಕೆ ನಿರಾಸೆಗಿಂದ ಉಪಯೋಗವಾಗಿದ್ದೇ ಹೆಚ್ಚು ಎನ್ನಬಹುದು. ಏಕೆಂದರೆ ಈ ದಿನದಂದು ಸುಮಾರು 15 ಲಕ್ಷದವರೆಗೂ ಬ್ರಹ್ಮಾಸ್ತ್ರ ಚಿತ್ರದ ಟಿಕೆಟ್‌ಗಳು ಮಾರಾಟವಾಗಿದ್ದು, 11 ಕೋಟಿ ಕಲೆಹಾಕಿದೆ. ಈ ಮೂಲಕ ಕಡಿಮೆ ಟಿಕೆಟ್ ದರದ ಮೂಲಕ ಬ್ರಹ್ಮಾಸ್ತ್ರ ಹಿಂದಿನ ದಿನಕ್ಕಿಂತ ಭರ್ಜರಿ ಕಲೆಕ್ಷನ್ ಮಾಡಿದೆ.

ಹಿಂದಿನ ದಿನ ಗಳಿಸಿದ್ದೆಷ್ಟು?
ಇನ್ನು ನಿನ್ನೆ ( ಸೆಪ್ಟೆಂಬರ್ 23 ) ಶುಕ್ರವಾರ ರಾಷ್ಟ್ರೀಯ ಸಿನಿಮಾ ದಿನದಂದು 11 ಕೋಟಿ ಗಳಿಸಿರುವ ಬ್ರಹ್ಮಾಸ್ತ್ರ ಅದರ ಹಿಂದಿನ ದಿನ ಗುರುವಾರದಂದು ಕೇವಲ 3.20 ಕೋಟಿ ಕಲೆಹಾಕಿತ್ತು. ಅಂದರೆ ಗುರುವಾರಕ್ಕಿಂತ ಶುಕ್ರವಾರ ಬರೋಬ್ಬರಿ ಶೇ. 240ರಷ್ಟು ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗೆ ರಾಷ್ಟ್ರೀಯ ಸಿನಿಮಾ ದಿನದಿಂದ ಕಲೆಕ್ಷನ್ ಹೊಡೆತ ಬೀಳುತ್ತೆ ಎಂದಿದ್ದ ಚಿತ್ರಕ್ಕೆ ಅಂದಿನ ದಿನ ಇತರೆ ದಿನಕ್ಕಿಂತ ಹೆಚ್ಚು ಕಲೆಕ್ಷನ್ ಆಗಿದೆ.

ಒಟ್ಟಾರೆ ಕಲೆಕ್ಷನ್ ಎಷ್ಟು?
ಇನ್ನು ಬ್ರಹ್ಮಾಸ್ತ್ರ ಈ ವಿಶೇಷ ದಿನದಂದು 11 ಕೋಟಿ ಗಳಿಸುವುದರ ಮೂಲಕ ಒಟ್ಟಾರೆ ಕಲೆಕ್ಷನ್‌ನಲ್ಲಿ 380 ಕೋಟಿಯನ್ನು ಮುಟ್ಟಿದೆ. ಇನ್ನು 410 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಬ್ರಹ್ಮಾಸ್ತ್ರ ಥಿಯೇಟರ್ ಕಲೆಕ್ಷನ್ ಮೂಲಕ ತನ್ನ ಬಜೆಟ್ ವಾಪಸ್ ಪಡೆಯಲು ಇನ್ನೂ ಮೂವತ್ತು ಕೋಟಿ ಗಳಿಸಬೇಕಿದೆ.