Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಷ್ಟ್ರೀಯ ಸಿನಿಮಾ ದಿನದ ಎಫೆಕ್ಟ್; ಮತ್ತೆ ತನ್ನ ಟಿಕೆಟ್ ದರ ತಗ್ಗಿಸಿದ ಬ್ರಹ್ಮಾಸ್ತ್ರ!
ಇದೇ ತಿಂಗಳ 9ರಂದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದ ಅಯಾನ್ ಮುಖರ್ಜಿ ನಿರ್ದೇಶನದ, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಯಶಸ್ವಿಯಾಗಿ 2 ವಾರಗಳನ್ನು ಪೂರೈಸಿ ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಾಯ್ಕಾಟ್ ಅಭಿಯಾನದಡಿ ಹಿಂದಿ ಚಿತ್ರರಂಗದ ಸಾಲು ಸಾಲು ಚಿತ್ರಗಳು ಸೋಲುಂಡಿದ್ದವು. ಆದರೆ ಬ್ರಹ್ಮಾಸ್ತ್ರ ಚಿತ್ರ ಮಾತ್ರ ಬಾಯ್ಕಟ್ ಟ್ರೆಂಡ್ ವಿರುದ್ಧ ಗಟ್ಟಿಯಾಗಿ ನೆಲೆಯೂರಿತು.
ಈಗಾಗಲೇ 400 ಕೋಟಿ ಗಳಿಕೆಯನ್ನು ಚಿತ್ರಮಂದಿರದ ಮೂಲಕ ಗಳಿಸಿರುವ ಬ್ರಹ್ಮಾಸ್ತ್ರ ತನ್ನ ಬಜೆಟ್ ಮರಳಿ ಪಡೆಯಲು ಇನ್ನೂ ಹತ್ತು ಕೋಟಿಗಳನ್ನು ಸಂಪಾದಿಸಬೇಕಿದೆ. ಇನ್ನು ಮೊದಲ ವಾರಾಂತ್ಯಕ್ಕೆ 300 ಕೋಟಿ ಬಾಚಿದ್ದ ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್ ನಂತರದ ದಿನಗಳಲ್ಲಿ ಕಡಿಮೆಯಾಗುತ್ತಾ ಸಾಗಿತು.
ರಣಬೀರ್
ಕಪೂರ್
ನಟಿಸುತ್ತಿದ್ದ
ಸಿನಿಮಾ
ಸೆಟ್ಗೆ
ಬೆಂಕಿ!
ಇನ್ನು ಬ್ರಹ್ಮಾಸ್ತ್ರ ತೆರೆಕಂಡ ಒಂದೇ ವಾರಕ್ಕೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಿ ಅಂದಿನ ದಿನದಂದು ಸಿನಿ ರಸಿಕರಿಗೆ 75 ರೂಪಾಯಿಯ ವಿನಾಯಿತಿ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ಈ ನಿರ್ಧಾರದಿಂದ ಬ್ರಹ್ಮಾಸ್ತ್ರ ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ ಎಂದು ಚಿತ್ರತಂಡ ಈ ವಿಶೇಷ ದಿನವನ್ನು ಒಂದು ವಾರದ ಮಟ್ಟಿಗೆ ಮುಂದೂಡಿಸಿತ್ತು. ಅದರಂತೆ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 16ರ ಬದಲಾಗಿ ಸೆಪ್ಟೆಂಬರ್ 23ರಂದು ಆಚರಿಸಲಾಗಿತ್ತು.
ಹೀಗೆ ರಾಷ್ಟ್ರೀಯ ಸಿನಿಮಾ ದಿನದ ರಿಯಾಯಿತಿ ದರದ ಟಿಕೆಟ್ ಯೋಜನೆಯನ್ನು ವಿರೋಧಿಸಿದ್ದ ಬ್ರಹ್ಮಾಸ್ತ್ರ ಚಿತ್ರತಂಡಕ್ಕೆ ಆ ದಿನದಂದು ಬರೋಬ್ಬರಿ 11 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಅದರ ಹಿಂದಿನ ದಿನಕ್ಕಿಂತ 240% ಹೆಚ್ಚು ಹಣವನ್ನು ಬ್ರಹ್ಮಾಸ್ತ್ರ ಗಳಿಸಿತ್ತು. ಹೀಗೆ ರಾಷ್ಟ್ರೀಯ ದಿನದಂದು ಕಡಿಮೆ ದರದ ಟಿಕೆಟ್ ಮೂಲಕ ಒಳ್ಳೆಯ ಕಲೆಕ್ಷನ್ ರುಚಿ ಕಂಡ ಬ್ರಹ್ಮಾಸ್ತ್ರ ಚಿತ್ರತಂಡ ಇದೀಗ ಮತ್ತೆ ಟಿಕೆಟ್ ದರ ಇಳಿಸುವತ್ತ ಮುಖ ಮಾಡಿದೆ.
ಹೌದು, ಸೆಪ್ಟೆಂಬರ್ 26ರ ಸೋಮವಾರದಿಂದ ಸೆಪ್ಟೆಂಬರ್ 29ರ ಗುರುವಾರದ ತನಕ ಬ್ರಹ್ಮಾಸ್ತ್ರ ಚಿತ್ರದ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು 100 ರೂಪಾಯಿಗಳಿಗೆ ಇಳಿಸಿದೆ ಚಿತ್ರತಂಡ. ಈ ಮೂಲಕ ರಾಷ್ಟ್ರೀಯ ಸಿನಿಮಾ ದಿನದಂದು ಕಡಿಮೆ ದರದಲ್ಲಿ ಚಿತ್ರ ನೋಡುವ ಅವಕಾಶ ತಪ್ಪಿಸಿಕೊಂಡ ಸಿನಿಪ್ರೇಕ್ಷಕರು ಈ 4 ದಿನಗಳಲ್ಲಿ ಆ ಅವಕಾಶವನ್ನು ಮತ್ತೆ ಪಡೆಯಬಹುದಾಗಿದೆ.