For Quick Alerts
  ALLOW NOTIFICATIONS  
  For Daily Alerts

  ಮೆಹಂದಿ ಸಮಾರಂಭದಲ್ಲಿ ಭಾವುಕರಾದ ದೀಪಿಕಾ: ಬಿಗಿದಪ್ಪಿದ ರಣ್ವೀರ್

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಪಾಲಿಗೆ ಇಂದು ವಿಶೇಷ ದಿನ. ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಇಂದು ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕಾಲಿಡುತ್ತಿದ್ದಾರೆ.

  ಇಟಲಿಯ ಲೇಕ್ ಕೋಮೋದಲ್ಲಿ ನಿನ್ನೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ನಿಶ್ಚಿತಾರ್ಥ ಸಮಾರಂಭ ನಡೆಯಿತು. 40 ಜನ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದೀಪಿಕಾ-ರಣ್ವೀರ್ ಉಂಗುರ ಬದಲಿಸಿಕೊಂಡರು.

  ನಿಶ್ಚಿತಾರ್ಥದ ಜೊತೆಗೆ ನಿನ್ನೆ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ಕೂಡ ನೆರವೇರಿತು. ಮೆಹಂದಿ ಸಮಾರಂಭದ ವೇಳೆ ಗಾಯಕರಾದ ಹರ್ಷ್ ದೀಪ್ ಕೌರ್ ಮತ್ತು ಶುಭ ಮುದ್ಗಲ್ ಗಾನ ಸುಧೆ ಹರಿಸಿದರು. ಈ ಸಮಯದಲ್ಲಿ ವಧು ದೀಪಿಕಾ ಪಡುಕೋಣೆ ಭಾವುಕರಾದರು. ಮುಂದೆ ಓದಿರಿ...

  ಭಾವುಕರಾದ ವಧು ದೀಪಿಕಾ

  ಭಾವುಕರಾದ ವಧು ದೀಪಿಕಾ

  ಗಾಯಕಿ ಶುಭ ಮುದ್ಗಲ್ ಹಾಡು ಹಾಡುತ್ತಿರುವಾಗ, ವಧು ದೀಪಿಕಾ ಪಡುಕೋಣೆ ಭಾವುಕರಾದರು. ದೀಪಿಕಾ ಕಣ್ಣೀರಿಟ್ಟಿದ್ದನ್ನ ನೋಡಿ ರಣ್ವೀರ್ ಸಿಂಗ್ ಬಿಗಿದಪ್ಪಿ ಸಮಾಧಾನ ಪಡಿಸಿದರು. ಬಳಿಕ ದೀಪಿಕಾ ಮೊಗದಲ್ಲಿ ಮಂದಹಾಸ ಮೂಡಿತು.

  ಕೊಂಕಣಿ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡ ದೀಪಿಕಾ-ರಣ್ವೀರ್

  ಸಭ್ಯಸಾಚಿ ಉಡುಗೆ ತೊಟ್ಟಿದ್ದ ವಧು-ವರ

  ಸಭ್ಯಸಾಚಿ ಉಡುಗೆ ತೊಟ್ಟಿದ್ದ ವಧು-ವರ

  ಸಂಗೀತ ಸಮಾರಂಭಕ್ಕೆ ವಧು ದೀಪಿಕಾ ಪಡುಕೋಣೆ ಮತ್ತು ವರ ರಣ್ವೀರ್ ಸಿಂಗ್ ಪಿಂಕ್ ಮತ್ತು ಕೆಂಪು ಬಣ್ಣದ ಸಭ್ಯಸಾಚಿ ಉಡುಗೆಗಳನ್ನು ತೊಟ್ಟಿದ್ದರು ಎಂದು ವರದಿ ಆಗಿದೆ.

  ದೀಪಿಕಾ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು ಹಾಕಿದ ಜೋಡಿ.!

  ಸಿನಿಮಾ ಶೈಲಿಯಲ್ಲೇ ಎಂಟ್ರಿಕೊಟ್ಟ ರಣ್ವೀರ್

  ಸಿನಿಮಾ ಶೈಲಿಯಲ್ಲೇ ಎಂಟ್ರಿಕೊಟ್ಟ ರಣ್ವೀರ್

  ಮೆಹಂದಿ ಸಮಾರಂಭಕ್ಕೆ 'ತುನೇ ಮಾರಿ ಎಂಟ್ರಿಯಾ...' ಹಾಡಿಗೆ ಸ್ಟೆಪ್ ಹಾಕುವ ಮೂಲಕ ವರ ರಣ್ವೀರ್ ಸಿಂಗ್ ಸಿನಿಮಾ ಶೈಲಿಯಲ್ಲೇ ಎಂಟ್ರಿಕೊಟ್ಟರು.

  ಫೋಟೋ ನೋಡಿ: ಅರಿಶಿಣ ಶಾಸ್ತ್ರ ಮುಗಿಸಿದ ರಣ್ವೀರ್ ಸಿಂಗ್

  ರಿಸೆಪ್ಷನ್ ಯಾವಾಗ.?

  ರಿಸೆಪ್ಷನ್ ಯಾವಾಗ.?

  ಇಂದು ಕೊಂಕಣಿ ಶೈಲಿಯಲ್ಲಿ ದೀಪಿಕಾ-ರಣ್ವೀರ್ ಸಿಂಗ್ ಮದುವೆ ನಡೆಯಲಿದ್ದು, ನಾಳೆ ಸಿಂಧಿ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ನವೆಂಬರ್ 28 ರಂದು ಮುಂಬೈನಲ್ಲಿ ರಿಸೆಪ್ಷನ್ ನೆರವೇರಲಿದೆ.

  ಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರು

  English summary
  Bride Deepika Padukone breaks down during Mehendi ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X