For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಕೇಸ್: 5 ಜನರನ್ನು ಟಾರ್ಗೆಟ್ ಮಾಡಿದ ಸಿಬಿಐ!

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ. ಸುಶಾಂತ್ ಸಾವಿನ ಸುದ್ದಿ ತಿಳಿದು ಪೊಲೀಸರು ಫ್ಲ್ಯಾಟ್‌ಗೆ ಹೋಗಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಐದು ಜನರ ಮೇಲೆ ಸಿಬಿಐ ಕಣ್ಣಿಟ್ಟಿದೆ.

  ಸುಶಾಂತ್ ಮೃತಪಟ್ಟ ಮರಣದ ನಂತರ ಫ್ಲ್ಯಾಟ್‌ನಲ್ಲಿ ಹಾಜರಿದ್ದ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿ, ಗೆಳತಿ ರಿಯಾ ಚಕ್ರವರ್ತಿ, ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ, ಸಹೋದರಿ ಮಿತು ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಸಿಬಿಐ ಅಧಿಕಾರಿ ಪ್ರಾಥಮಿಕವಾಗಿ ತನಿಖೆಗೆ ಒಳಪಡಿಸಲಿದ್ದಾರೆ ಎಂದು ತಿಳಿದಿದೆ.

  ಸಾಯುವುದಕ್ಕೂ ಹಿಂದಿನ ದಿನ ನಿರ್ಮಾಪಕನ ಜೊತೆ 15 ನಿಮಿಷ ಮಾತಾಡಿದ್ದ ಸುಶಾಂತ್!ಸಾಯುವುದಕ್ಕೂ ಹಿಂದಿನ ದಿನ ನಿರ್ಮಾಪಕನ ಜೊತೆ 15 ನಿಮಿಷ ಮಾತಾಡಿದ್ದ ಸುಶಾಂತ್!

  ಸುಶಾಂತ್ ಸಾವಿನ ತಿಳಿದು ಫ್ಲ್ಯಾಟ್ ಬಳಿ ಹೋದಾಗ ಅಲ್ಲಿ ಐದು ಜನರು ಇದ್ದರು ಎಂದು ಮುಂಬೈ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಆಧಾರದ ಮೇಲೆ ಸಿಬಿಐ ಐವರ ಹೇಳಿಕೆ ಪಡೆಯಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

  ಅಫಿಡವಿಟ್ ಪ್ರಕಾರ, ಮಧ್ಯಾಹ್ನ 2 ಗಂಟೆಗೆ ಬಾಂದ್ರಾದ ಫ್ಲ್ಯಾಟ್‌ಗೆ ಪೊಲೀಸರು ತಲುಪಿದ್ದಾರೆ. ಈ ವೇಳೆ ಐದು ಜನರು ಘಟನಾ ಸ್ಥಳದಲ್ಲಿದ್ದರು. ಅಷ್ಟೊತ್ತಿಗಾಗಲೇ ಸುಶಾಂತ್ ದೇಹವನ್ನು ಕೆಳಗೆ ಇಳಿಸಲಾಗಿತ್ತು. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ಸುಶಾಂತ್ ದೇಹವನ್ನು ಏಕೆ ಕೆಳಗೆ ಇಳಿಸಲಾಯಿತು ಎಂದು ಪೊಲೀಸರು ಪ್ರಶ್ನಿಸಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

  ಇದುವರೆಗೂ ಸುಶಾಂತ್ ಪ್ರಕರಣದಲ್ಲಿ 56 ಜನರು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಬಿಹಾರ ಸರ್ಕಾರದ ಶಿಫಾರಸ್ಸಿನಂತೆ ಸಿಬಿಐ ಈ ಕೇಸ್ ವಹಿಸಿಕೊಂಡಿದ್ದು, ಪಾಟ್ನಾ ಪೊಲೀಸರ ಎಫ್ಐಆರ್ ವರದಿ ಸಹ ಪಡೆದುಕೊಂಡಿದೆ. ಸುಶಾಂತ್ ಸಿಂಗ್ ತಂದೆ ಹಾಗೂ ಸಹೋದರಿ, ರಿಯಾ ಹಾಗೂ ಇನ್ನಿತರ ಆರು ಜನರ ವಿರುದ್ಧ ಕೇಸ್ ನೀಡಿದ್ದಾರೆ.

  ಸುಶಾಂತ್ ಸಿಂಗ್ ತಂದೆ ಹಾಗೂ ಸಹೋದರಿಯ ಹೇಳಿಕೆಯನ್ನು ಸಿಬಿಐ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸುಶಾಂತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ.

  ಇನ್ನು ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ರಿಯಾ ಚಕ್ರವರ್ತಿ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ನಮೂದಿಸಿದೆ.

  English summary
  Sushant Singh Rajput Death case: CBI has targeted these 5 Key Witnesses for probe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X