twitter
    For Quick Alerts
    ALLOW NOTIFICATIONS  
    For Daily Alerts

    ಸೊನಾಲಿ ಪೋಗಟ್ ಸಾವು: ಪ್ರಕರಣ ಕೈಗೆತ್ತಿಕೊಂಡ ಸಿಬಿಐ

    |

    ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ಹರಿಯಾಣಾದ ಬಿಜೆಪಿ ನಾಯಕಿ ಆಗಿದ್ದ ಸೊನಾಲಿ ಪೋಗಟ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.

    ಸೊನಾಲಿ ಪೋಗಟ್, ಆಗಸ್ಟ್ 22 ರಂದು ಗೋವಾದಲ್ಲಿ ನಿಧನ ಹೊಂದಿದ್ದರು. ಶೂಟಿಂಗ್‌ಗೆ ಎಂದು ಹೇಳಿ ಗೋವಾಕ್ಕೆ ತನ್ನಿಬ್ಬರು ಸಹಾಯಕರೊಟ್ಟಿಗೆ ತೆರಳಿದ್ದ ಸೊನಾಲಿ ಪೋಗಟ್ ಅಲ್ಲಿಯೇ ಮರಣ ಹೊಂದಿದ್ದರು. ಆರಂಭದಲ್ಲಿ, ಸೊನಾಲಿಗೆ ಹೃದಯಾಘಾತವಾಗಿದೆ ಎನ್ನಲಾಗಿತ್ತು. ಆದರೆ ಮರಣೋತ್ತರ ವರದಿಯ ಬಳಿಕ ನಟಿಯ ಸಾವಿನ ಬಗ್ಗೆ ಅನುಮಾನಗಳೆದ್ದು, ಇದನ್ನು ಕೊಲೆ ಪ್ರಕರಣವೆಂದು ಗೋವಾ ಪೊಲೀಸರು ತನಿಖೆ ಆರಂಭಿಸಿದರು.

    ಸೊನಾಲಿ ಪೋಗಟ್ ನಿಧನವಾದ ದಿನದಿಂದಲೂ ಆಕೆಯ ಕುಟುಂಬದವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತಿದ್ದರು ಅಂತೆಯೇ ಹರಿಯಾಣ ಸರ್ಕಾರ ಸಹ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿತ್ತು ಅಂತೆಯೇ ಇಂದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಸಿಬಿಐ ಅಧಿಕಾರಿಗಳು ಇಂದು ಗೋವಾಕ್ಕೆ ಆಗಮಿಸಿ ಪ್ರಕರಣವನ್ನು ಹಸ್ತಾಂತರಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಸಾಯುವ ಮುನ್ನ ಸೊನಾಲಿ ಪೋಗಟ್ ಭೇಟಿ ನೀಡಿ ಡ್ರಗ್ಸ್ ಸೇವಿಸಿದ್ದರು ಎನ್ನಲಾಗುತ್ತಿರುವ ಪಬ್, ಸೊನಾಲಿ ಗೋವಾದಲ್ಲಿ ಉಳಿದುಕೊಂಡಿದ್ದ ಹೋಟೆಲ್, ಪ್ರಕರಣ ನಡೆದ ಉತ್ತರ ಗೋವಾದ ಅಂಜುಮನ್ ಪೊಲೀಸ್ ಠಾಣೆ ಇನ್ನಿತರೆ ಕಡೆಗಳಿಗೆ ಸಿಬಿಐ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

    CBI Team Arrived In Goa And Took Over Sonali Phogat Case

    ಸೊನಾಳಿ ಪೋಗಟ್ ಸಾವು ಹಲವು ಅನುಮಾನಗಳನ್ನು ಎಬ್ಬಿಸಿದೆ. ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಸೊನಾಲಿಯ ಸಹಾಯಕರಾದ ಸುಧೀರ್ ಸಾಂಗ್ವಾನ್ ಹಾಗೂ ಸುಖ್ವೀಂಧರ್ ಜೊತೆಗೆ ಇವರಿಗೆ ಡ್ರಗ್ಸ್ ಮಾರಾಟ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೊನಾಲಿ ಸಾಯುವ ಕೆಲವು ಗಂಟೆಗಳ ಹಿಂದೆ ಆಕೆಗೆ ತಿಳಿಯದಂತೆ ಡ್ರಗ್ಸ್ ನೀಡಲಾಗಿತ್ತು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಸೊನಾಲಿ ಪೋಗಟ್ ಕೊಲೆಯು ಆಕೆಯ ಆಸ್ತಿಗಾಗಿ ನಡೆದಿದೆ ಎಂಬ ಅನುಮಾನವನ್ನು ಆಕೆಯ ಕುಟುಂಬದವರು ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದ ಸೊನಾಲಿ ಪೋಗಟ್‌ರ ಬ್ಯಾಂಕ್ ಖಾತೆ ವಿವರ, ಆಸ್ತಿ ವಿವರ ಇನ್ನಿತರೆ ವಿಷಯಗಳ ಬಗ್ಗೆಯೂ ತನಿಖೆ ನಡೆಸಲಾಗಿದೆ.

    ಸೊನಾಲಿ ಪೋಗಟ್ ಕಳೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲನುಭವಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಅವರು ಈ ಹಿಂದೆ, ಹಿಂದಿ ಬಿಗ್‌ಬಾಸ್‌ನಲ್ಲಿಯೂ ಸ್ಪರ್ಧಿಸಿದ್ದರು.

    English summary
    CBI team arrived in Goa and took over actress, Haryana's BJP leader Sonali Phogat's case. Five already arrested in this case.
    Friday, September 16, 2022, 20:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X