For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಕೇಸ್: ದಿಶಾ ಬಾಯ್‌ಫ್ರೆಂಡ್‌ ಮನೆಗೆ ಸಿಬಿಐ ಭೇಟಿ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಮಾಡುತ್ತಿರುವ ಸಿಬಿಐ ಅಧಿಕಾರಿಗಳು, ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಬಾಯ್‌ಫ್ರೆಂಡ್‌ ಮನೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೂ ಹಾಗೂ ದಿಶಾ ಸಾಲಿಯಾನ್ ಸಾವಿಗೂ ಸಂಬಂಧವಿದೆ ಎಂಬ ಅನುಮಾದ ಹಿನ್ನೆಲೆ ದಿಶಾ ಮದುವೆ ಆಗಬೇಕಿದ್ದ ರೋಷನ್ ರೈ ಮನೆಗೆ ಸಿಬಿಐ ಭೇಟಿ ನೀಡಿದೆ. ಸುಶಾಂತ್ ಸಾಯುವುದಕ್ಕೆ ಒಂದು ವಾರದ ಹಿಂದೆ ದಿಶಾ ಸಾಲಿಯಾನ್ ತನ್ನ ಫ್ಲ್ಯಾಟ್‌ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

  ಸುಶಾಂತ್ ಸಿಂಗ್ ಸಾವು: ನಿರ್ದೇಶಕ ದಿನೇಶ್ ವಿಜನ್ ಮನೆ ಮೇಲೆ ED ದಾಳಿ

  ವರದಿಗಳ ಪ್ರಕಾರ ಬುಧವಾರ ರಾತ್ರಿ 10 ಗಂಟೆಗೆ ಐದು ಅಧಿಕಾರಿಗಳ ಸಿಬಿಐ ತಂಡ ರೋಷನ್ ರೈ ಮನೆಗೆ ಪ್ರವೇಶ ಮಾಡಿದೆ. ನೋಡಲು ಪೊಲೀಸರಂತೆ ಇರಲಿಲ್ಲ, ಏಜನ್ಸಿ ಸಿಬ್ಬಂದಿಯಂತಿದ್ದರು ಎಂದು ಸೆಕ್ಯೂರಿಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ಪರಿಶೀಲನೆ ಮಾಡಿದ ಅಧಿಕಾರಿಗಳು ರೋಹನ್ ಅವರ ನಿವಾಸದಿಂದ ಕೆಲವು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

  ಸುಶಾಂತ್ ಸಿಂಗ್ ಜ್ಯೂಸ್ ಕುಡಿದ ಗ್ಲಾಸನ್ನು ಪೊಲೀಸರು ಯಾಕೆ ಸಂಗ್ರಹಿಸಿಲ್ಲ? ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada

  ಮೂಲಗಳ ಪ್ರಕಾರ, ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ಬಹುತೇಕ ಮುಗಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲಿ ಕೋರ್ಟ್‌ನಲ್ಲಿ ವರದಿ ಸಹ ಸಲ್ಲಿಸಲಿದ್ದಾರೆ. ಈ ನಡುವೆ ಏಮ್ಸ್ ವಿಧಿವಿಜ್ಞಾನ ವಿಭಾಗ ನೀಡಿದ ವರದಿಯಲ್ಲಿ ಇದು ಕೊಲೆಯಲ್ಲ ಎಂದು ಸಾಬೀತಾಗಿದೆ.

  English summary
  Five Members CBI Team has visited to Sushant singh ex manager disha Salian's fIance Rohan rai home a wednesday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X