For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ದೌರ್ಜನ್ಯ ಪ್ರಕರಣ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್‌ಶೀಟ್

  |

  ಇತ್ತೀಚಿನ ಹಿಟ್ 'ಪುಷ್ಪ' ಸೇರಿದಂತೆ ಹಲವಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಬಾಲಿವುಡ್‌ನ ಹೆಸರಾಂತ ನೃತ್ಯ ನಿರ್ದೆಶಕ ಗಣೇಶ್ ಆಚಾರ್ಯ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ.

  ಗಣೇಶ್ ಆಚಾರ್ಯ ಭಾರತೀಯ ಚಿತ್ರರಂಗದ ಅತ್ಯುತ್ತಮ ನೃತ್ಯ ನಿರ್ದೇಶಕರಲ್ಲಿ ಒಬ್ಬರು, ಅವರ ವಿರುದ್ಧ 2020 ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

  ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓಶಿವಾರ ಪೊಲೀಸರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

  ಗಣೇಶ್ ಆಚಾರ್ಯ ಮಾತ್ರವೇ ಅಲ್ಲದೆ ಅವರ ಸಹಾಯಕನ ಮೇಲೂ ಸಹ ನೃತ್ಯಾಗಾರ್ತಿ ದೂರು ದಾಖಲಿಸಿದ್ದರು. ಅಸಭ್ಯವಾಗಿ ಸ್ಪರ್ಶಿಸುವುದು, ಹಿಂಬಾಲಿಸುವುದು ಲೈಂಗಿಕ ಚಾಂಚೆಯ ದೃಷ್ಟಿಯಿಂದ ನೋಡುವುದು ಇತರೆ ಆರೋಪಗಳನ್ನು ಸಹ ನೃತ್ಯಗಾರ್ತಿ ಗಣೇಶ್ ಆಚಾರ್ಯ ಹಾಗೂ ಅವರ ಸಹಾಯಕನ ಮೇಲೆ ದಾಖಲಿಸಿದ್ದರು.

  ಚಾರ್ಜ್ ಶೀಟ್ ದಾಖಲಾಗಿರುವ ಬಗ್ಗೆ ಮಾತನಾಡಿರುವ ಗಣೇಶ್ ಆಚಾರ್ಯರ ವಕೀಲ ರವಿ ಸೂರ್ಯವಂಶಿ, ''ನನಗೆ ಚಾರ್ಜ್ ಶೀಟ್ ಇನ್ನೂ ಸಿಕ್ಕಿಲ್ಲ ಹಾಗಾಗಿ ಈ ಬಗ್ಗೆ ಈಗಲೇ ಏನೂ ಮಾತನಾಡಲಾರೆ, ಆದರೆ ಎಫ್‌ಐಆರ್‌ನಲ್ಲಿ ಇರುವ ಎಲ್ಲ ಸೆಕ್ಷನ್‌ಗಳು ಜಾಮೀನು ನೀಡಬಹುದಾದವುಗಳೇ ಆಗಿವೆ'' ಎಂದಿದ್ದಾರೆ.

  2020ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ, ಗಣೇಶ್ ಆಚಾರ್ಯ ಇಟ್ಟಿದ್ದ ಲೈಂಗಿಕ ಬೇಡಿಕೆಯನ್ನು ತಾವು ನಿರಾಕರಿಸಿದ್ದಾಗಿಯೂ, ಗಣೇಶ್ ಆಚಾರ್ಯ ಆಕೆಯನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದಾಗಿ, ನೀಲಿ ಚಿತ್ರಗಳನ್ನು ಬಲವಂತದಿಂದ ತೋರಿಸಿದ್ದಾಗಿ ಹೇಳಿದ್ದರು. 2019 ರಲ್ಲಿ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಗಣೇಶ್ ಆಚಾರ್ಯ ಆ ನೃತ್ಯಗಾರ್ತಿಯನ್ನು ಕೇಳಿದುದಾಗಿ ನೃತ್ಯಗಾರ್ತಿ ಆರೋಪ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕೆಂದರೆ ಇದನ್ನೆಲ್ಲಾ ಮಾಡಬೇಕು ಎಂದು ಗಣೇಶ್ ಆಚಾರ್ಯ ಹೇಳಿದ್ದರಂತೆ.

  ಇಷ್ಟೇ ಅಲ್ಲದೆ, ಗಣೇಶ್ ಆಚಾರ್ಯರ ಸಹಾಯಕಿಯರು ನನ್ನ ಹಿಗ್ಗಾ ಮುಗ್ಗಾ ಹೊಡೆದಿದ್ದರು. ನನ್ನನ್ನು ಅವಾಚ್ಯವಾಗಿ ನಿಂದಿಸಿದರು. ನಂತರ ನಾನು ಪೊಲೀಸ್ ಠಾಣೆಗೆ ಹೋದಾಗ ಸಹ ನನ್ನ ದೂರನ್ನು ಸೂಕ್ತ ರೀತಿಯಲ್ಲಿ ಪೊಲೀಸರು ಸ್ವೀಕರಿಸಲಿಲ್ಲ. ಬಳಿಕ ನಾನು ವಕೀಲರ ಸಹಾಯದಿಂದ ಪ್ರಕರಣ ದಾಖಲಿಸಿದೆ'' ಎಂದು ಆ ನೃತ್ಯಗಾರ್ತಿ ಆರೋಪಿಸಿದ್ದಾರೆ.

  ''ಗಣೇಶ್ ಆಚಾರ್ಯ ಬೇಡಿಕೆಗೆ ನಾನು ಒಪ್ಪದೇ ಹೋದಾಗ, ಭಾರತೀಯ ಸಿನಿಮಾ ಮತ್ತು ಟಿವಿ ಕೊರಿಯೋಗ್ರಾಫರ್ ಸಂಘದಿಂದ ನನ್ನನ್ನು ತೆಗೆದು ಹಾಕಲಾಯಿತು. ನನಗೆ ಬೆದರಿಕೆಗಳನ್ನು ಸಹ ಹಾಕಲಾಯಿತು'' ಎಂದು ನೃತ್ಯಗಾರ್ತಿ ಹೇಳಿದ್ದಾರೆ.

  1992 ರಿಂದಲೂ ಗಣೇಶ್ ಆಚಾರ್ಯ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ನ ಬಹುತೇಕ ಎಲ್ಲ ಸ್ಟಾರ್ ನಟರು, ಈಗಿನ ಯುವ ಸ್ಟಾರ್ ನಟರೊಟ್ಟಿಗೆ ಗಣೇಶ್ ಆಚಾರ್ಯ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಗಣೇಶ್ ಆಚಾರ್ಯ ನೃತ್ಯ ನಿರ್ದೇಶಿಸಿರುವ 'ಪುಷ್ಪ' ಸಿನಿಮಾದ ಹಾಡುಗಳು, ಸ್ಟೆಪ್ಪುಗಳು ಬಹಳ ಫೇಮಸ್ ಆಗಿವೆ. ನೃತ್ಯ ನಿರ್ದೇಶಕ ಮಾತ್ರವೇ ಅಲ್ಲದೆ ನಟನಾಗಿಯೂ ಹಲವು ಸಿನಿಮಾಗಳಲ್ಲಿ ಗಣೇಶ್ ಆಚಾರ್ಯ ನಟಿಸಿದ್ದಾರೆ. ಹಾಗೂ ನಿರ್ದೇಶಕನಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Charge sheet submitted against famous choreographer Ganesh Acharya related to sexual harassment case which is registered in 2020.
  Friday, April 1, 2022, 16:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X