For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ವಿರುದ್ಧ 40 ಲಕ್ಷ ಹಣ ವಂಚನೆ ಆರೋಪ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿರುವ ರಾಜ್ ಕುಂದ್ರಾಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಉದ್ಯಮಿಯೊಬ್ಬರು ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಲಕ್ಷಾಂತರ ರು ವಂಚನೆ ಆರೋಪ ಮಾಡಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ದೆಹಲಿ ಮೂಲದ ಉದ್ಯಮಿಯೊಬ್ಬರು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ವಂಚನೆ ದೂರು ದಾಖಲಿಸಿದ್ದು, ಅವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಸೂಚಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ತಮಗೆ 41 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ದೆಹಲಿ ಮೂಲದ ಉದ್ಯಮಿ ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ತಮ್ಮನ್ನು ಬಲವಂತ ಪಡಿಸಿ 41.30 ಲಕ್ಷ ಹಣವನ್ನು ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿದರು. ಮತ್ತು ಆ ಹಣವನ್ನು ತಮ್ಮ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡರು. ಅದೇ ಹಣವನ್ನು ಕೆಟ್ಟ ಕಾರ್ಯಗಳಿಗೂ ಬಳಸಿಕೊಂಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ.

  ರಾಜ್ ಕುಂದ್ರಾ ಆಪ್ತ ಉಮೇಶ್ ಗೋಯೆಂಕಾ ಒಮ್ಮೆ ಜೈಪುರದಲ್ಲಿ ನಡೆಯುತ್ತಿದ್ದ ರಾಜಸ್ಥಾನ ರಾಯಲ್ಸ್ ಪಂದ್ಯ ನೋಡಲು ಆಹ್ವಾನ ನೀಡಿದ್ದರು. ಪಂದ್ಯದ ವೇಳೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಒಡೆತನದ ವಿಯಾನ್ ಸಂಸ್ಥೆಯು ಭವಿಷ್ಯದಲ್ಲಿ ಸೌಂದರ್ಯ ವರ್ಧಕಗಳು, ಗೇಮಿಂಗ್, ಅನಿಮೇಷನ್ಸ್ ಇನ್ನೂ ಹಲವು ವಿಭಾಗಗಳಲ್ಲಿ ವಿಸ್ತರಣೆ ಮಾಡುವ ಯೋಜನೆಯಲ್ಲಿದ್ದು ಉತ್ತಮ ಲಾಭ ಪಡೆಯಲಿದೆ. ಹಾಗಾಗಿ ಸಂಸ್ಥೆಯಲ್ಲಿ ಹಣ ತೊಡಗಿಸುವಂತೆ ಒತ್ತಾಯಿಸಿದರು ಎಂದಿದ್ದಾರೆ ಉದ್ಯಮಿ.

  ಯಾವುದೇ ಲಾಭ ನನಗೆ ದೊರೆತಿಲ್ಲ: ಉದ್ಯಮಿ

  ಯಾವುದೇ ಲಾಭ ನನಗೆ ದೊರೆತಿಲ್ಲ: ಉದ್ಯಮಿ

  2018ರಲ್ಲಿ ಒಮ್ಮೆ ಹೋಟೆಲ್ ಒಂದರಲ್ಲಿ ರಾಜ್ ಕುಂದ್ರಾ ಅವರನ್ನೂ ಭೇಟಿ ಮಾಡಿದ್ದಾಗಿ ಅವರೂ ಸಹ ಸಂಸ್ಥೆಯಲ್ಲಿ ಹಣ ತೊಡಗಿಸುವಂತೆ ಹೇಳಿದ್ದಾಗಿ ಹೇಳಿರುವ ಉದ್ಯಮಿ, ''ಹಣ ತೊಡಗಿಸಿದ ಮೇಲೆ ಅವರಿಂದ ಯಾವುದೇ ಲಾಭ ನನಗೆ ದೊರೆತಿಲ್ಲ. ವಿಯಾನ್ ಸಂಸ್ಥೆಯ ಷೇರು ಮೌಲ್ಯ ಸಹ ಕುಸಿಯಿತು. ನನ್ನ ಹಣವನ್ನು ತಮ್ಮ ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಂಡಿದ್ದಕ್ಕೆ, ಸುಲ್ಳು ಭರವಸೆ ನೀಡಿದ್ದಕ್ಕೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಸಮನ್ಸ್ ನೀಡಬೇಕು ಎಂದು ಉದ್ಯಮಿ ಒತ್ತಾಯಿಸಿದ್ದಾರೆ. ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮಾತ್ರವೇ ಅಲ್ಲದೆ ದರ್ಶಿತ್ ಶಾ, ಎಂಕೆ ವಡ್ವಾ, ನಂದನ್ ಮಿಶ್ರಾ, ಸತ್ಯೇಂದ್ರ ಸರುಪ್ರಿಯ, ಉಮೇಶ್ ಗೊಯೆಂಕಾ ಮತ್ತು ವಿಯಾನ್ ಇಂಡಸ್ಟ್ರೀಸ್ ವಿರುದ್ಧ ದೂರು ದಾಖಲಿಸಿದ್ದಾರೆ.

  ಜುಲೈ 19ರಂದು ಬಂಧಿತರಾಗಿರುವ ರಾಜ್ ಕುಂದ್ರಾ

  ಜುಲೈ 19ರಂದು ಬಂಧಿತರಾಗಿರುವ ರಾಜ್ ಕುಂದ್ರಾ

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಈಗಲೂ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಜಾಮೀನು ದೊರೆತಿಲ್ಲ. ಪ್ರಕರಣದಿಂದಾಗಿ ಶಿಲ್ಪಾ ಶೆಟ್ಟಿ ಸಹ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ಒಳಗಾಗಿದ್ದಾರೆ. ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಇಂದ ದೂರಾಗುವ ನಿರ್ಣಯ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

  ಮುಂಬೈ ಪೊಲೀಸರ ಆರೋಪ ಏನು?

  ಮುಂಬೈ ಪೊಲೀಸರ ಆರೋಪ ಏನು?

  ಮುಂಬೈನಲ್ಲಿ ಸ್ಥಳೀಯ ನಟಿಯರಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಲಂಡನ್‌ನಲ್ಲಿರುವ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು, ಆ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಹೊರಿಸಿದ್ದಾರೆ.

  ಅಶ್ಲೀಲ ವಿಡಿಯೋ ವಿಷಯ ಶಿಲ್ಪಾ ಶೆಟ್ಟಿಗೂ ಗೊತ್ತಿತ್ತು?!

  ಅಶ್ಲೀಲ ವಿಡಿಯೋ ವಿಷಯ ಶಿಲ್ಪಾ ಶೆಟ್ಟಿಗೂ ಗೊತ್ತಿತ್ತು?!

  ರಾಜ್ ಕುಂದ್ರಾ ಬಂಧನವಾದ ಬಳಿಕ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಹಾಗೂ ಇತರ ಕೆಲವು ನಟಿಯರು ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಶಿಲ್ಪಾ ಶೆಟ್ಟಿಗೆ ಸಹ ಅಶ್ಲೀಲ ವಿಡಿಯೋ ಪ್ರಕರಣದ ವಿಷಯ ಗೊತ್ತಿತ್ತು. ಹಲವು ವಿಡಿಯೋಗಳನ್ನು ಆಕೆಯೇ ನೋಡಿ ಅಂತಿಮಗೊಳಿಸುತ್ತಿದ್ದರು ಎಂದು ಸಹ ಕೆಲವರು ಹೇಳಿದ್ದಾರೆ. ಗೆಹನಾ ವಶಿಷ್ಟ ಸೇರಿ ಇನ್ನು ಕೆಲವರು ರಾಜ್ ಕುಂದ್ರಾಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

  English summary
  Delhi based Businessman alleged that Raj Kundra and Shilpa Shetty cheated him 41 lakh rs. He sought court to instruct police to file FIR against them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X