»   » ಚೆನ್ನೈ ಮಹಾನಗರಿಗೆ ಅಕ್ಷಯ್ ಕುಮಾರ್ ಮಹಾ ದೇಣಿಗೆ

ಚೆನ್ನೈ ಮಹಾನಗರಿಗೆ ಅಕ್ಷಯ್ ಕುಮಾರ್ ಮಹಾ ದೇಣಿಗೆ

Posted By:
Subscribe to Filmibeat Kannada

ಕಂಡು ಕೇಳರಿಯದ ಅತಿವೃಷ್ಟಿಯಿಂದ ತತ್ತರಿಸಿರುವ ಚೆನ್ನೈ ಮಹಾನಗರಿಗೆ ಶಾರುಖ್ ಖಾನ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿರುವ ವಿಷಯ ನಿಮಗೆ ಗೊತ್ತಿದೆ. ಈಗ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸರದಿ.

ಕುಂಭದ್ರೋಣ ಮಳೆಯಿಂದಾಗಿ ನಲುಗಿರುವ ಚೆನ್ನೈ ಮಹಾನಗರದ ಭೀಕರ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಜನರಿಗೆ ಪುನರ್ವಸತಿ ಕಲ್ಪಿಸಲು ಅಕ್ಷಯ್ ಕುಮಾರ್ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.[ಸೂಪರ್ ಸ್ಟಾರ್ ರಜನಿಕಾಂತ್ 10 ಕೋಟಿ ಕೊಟ್ಟಿದ್ದು ನಿಜಾನಾ?]

Chennai Flood; Akshay Kumar donates Rs.10 crore

ಚೆನ್ನೈ ಸಂತ್ರಸ್ತರಿಗೆ ಆಹಾರ, ಬಟ್ಟೆ ಬರೆಗಳನ್ನು ನೀಡುತ್ತಿರುವ ಭೂಮಿಕಾ ಟ್ರಸ್ಟ್ ಗೆ ಅಕ್ಷಯ್ ಕುಮಾರ್ ಚೆಕ್ ವಿತರಿಸಿದ್ದಾರೆ.[ಚೆನ್ನೈ ಮಳೆ: ಹೆದರಬೇಡಿ ನಿಮಗೆ ನಾವಿದ್ದೇವೆ ಎಂದ ಕಾಲಿವುಡ್ ಸ್ಟಾರ್ಸ್..!]

ತಮಿಳು ಸಿನಿ ಅಂಗಳದ ಕಡೆಯಿಂದ ನಟ ಸೂರ್ಯ ಹಾಗೂ ನಟ ಕಾರ್ತಿ 25 ಲಕ್ಷ ರೂಪಾಯಿ ನೀಡಿದ್ದರೆ, ನಟ ವಿಶಾಲ್ ಕೃಷ್ಣ ರೆಡ್ಡಿ 10 ಲಕ್ಷ ರೂಪಾಯಿ ನೀಡುವ ಮೂಲಕ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುತ್ತಿದ್ದಾರೆ.

English summary
Bollywood Actor Akshay Kumar donated Rs.1 crore for relief work in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada