Just In
- 1 hr ago
ಫೋಟೋ ಶೇರ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ನೆನಪಿರಲಿ ಪ್ರೇಮ್ ಪ್ರೀತಿಯ ವಿಶ್
- 14 hrs ago
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- 14 hrs ago
ಬೆಂಕಿ ಹಚ್ಚಿ ಆನೆ ಸಾವು: ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು- ಸುಮಲತಾ
- 16 hrs ago
ನಟಿ ರಾಗಿಣಿಗೆ ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರಲು ಪರದಾಟ
Don't Miss!
- News
ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್
- Lifestyle
ಡಬ್ಬದಲ್ಲಿ ಪ್ಯಾಕ್ ಮಾಡಿದ ಆಹಾರಕ್ಯಾನ್ಡ್ ಫ಼ುಡ್ಸ್ ಅಪಾಯಕಾರಿ ಏಕೆ?
- Sports
ಐಎಸ್ಎಲ್: ಮಿಂಚಲು ಸಜ್ಜಾದ ಬೆಂಗಳೂರಿಗೆ ಒಡಿಶಾ ಎದುರಾಳಿ
- Automobiles
ವಾರದ ಪ್ರಮುಖ ಆಟೋ ಸುದ್ದಿ: ಆಲ್ಟ್ರೊಜ್ ಐಟರ್ಬೋ ಬಿಡುಗಡೆ, ಜಾರಿಗೆ ಬರಲಿದೆ ಹೊಸ ಆಟೋ ಇನ್ಸುರೆನ್ಸ್..
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್‌ಗೆ ಲಿಖಿತ ಮನವಿ ಸಲ್ಲಿಸಿದ ಬಹುರಾಜ್ಯ ಸಿನಿಮಾ ಸಂಘಗಳು
ಹೊಸ ಸಿನಿಮಾಗಳಿಲ್ಲದೆ, ಕೊರೊನಾ ಕಾರಣಕ್ಕೆ ಜನರಿಲ್ಲದೆ ಜಡವೆದ್ದಿರುವ ಚಿತ್ರಮಂದಿರಗಳಿಗೆ ಜೀವ ಕಳೆ ತುಂಬಲು ಸಾಧ್ಯವಿರುವುದು ಸಲ್ಮಾನ್ ಖಾನ್‌ಗೆ. ಇದೇ ಕಾರಣಕ್ಕೆ ವಿವಿಧ ರಾಜ್ಯಗಳ ಸಿನಿಮಾ ಪ್ರದರ್ಶಕರ, ವಿತರಕರ ಹಾಗೂ ಇನ್ನಿತರೆ ಸಿನಿಮಾ ಸಂಘಗಳು ಒಟ್ಟಾಗಿ ಸಲ್ಮಾನ್ ಖಾನ್‌ಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿವೆ.
ಸಲ್ಮಾನ್ ಖಾನ್ ನಟಿಸಿರುವ 'ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು, ಬದಲಿಗೆ ನೇರವಾಗಿ ಸಿನಿಮಾ ಮಂದಿರಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಸಿನಿಮಾ ಸಂಘಗಳು ಸಲ್ಮಾನ್ ಖಾನ್ ಗೆ ಮನವಿ ಮಾಡಿವೆ.
ಉತ್ತರಖಾಂಡ, ಗುಜರಾತ್, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ವಿದರ್ಭ, ತೆಲಂಗಾಣ ಇನ್ನೂ ಅನೇಕ ರಾಜ್ಯಗಳ ಪ್ರದರ್ಶಕರು, ವಿತರಕರು ಇತರೆ ಸಿನಿಮಾ ಸಂಘಗಳು ಒಟ್ಟಾಗಿ ಲಿಖಿತ ಮನವಿಯನ್ನು ಸಲ್ಮಾನ್ ಖಾನ್ ಗೆ ನೀಡಿವೆ.
ಕೊರೊನಾ ದಿಂದಾಗಿ ಚಿತ್ರಮಂದಿರಗಳು ಸತತ ಹತ್ತು ತಿಂಗಳಿನಿಂದ ನಷ್ಟವನ್ನೇ ನೋಡಿದ್ದು, ಜನರನ್ನು ಚಿತ್ರಮಂದಿರಕ್ಕೆ ಸೆಳೆಯಬಲ್ಲಿ ಸಿನಿಮಾ 'ರಾಧೆ' ಹಾಗಾಗಿ ಆ ಸಿನಿಮಾವನ್ನು ಒಟಿಟಿಗೆ ನೀಡಬೇಡಿ ಬದಲಿಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡಲಾಗಿದೆ.
ರಾಧೆ ಸಿನಿಮಾವನ್ನು ಪ್ರಭುದೇವಾ ನಿರ್ದೇಸಿದ್ದು, ಸಿನಿಮಾದಲ್ಲಿ ದಿಶಾ ಪಟಾನಿ ಹಾಗೂ ಮೇಘಾ ಆಕಾಶ್ ನಾಯಕಿಯರಾಗಿದ್ದಾರೆ. ಸಿನಿಮಾದಲ್ಲಿ ರಣದೀಪ್ ಹೂಡಾ, ಜಾಕಿ ಶ್ರಾಫ್ ಸಹ ಇದ್ದಾರೆ.
'ರಾಧೆ' ಸಿನಿಮಾಕ್ಕೆ ಕೆಲವು ಒಟಿಟಿಗಳು ಭಾರಿ ಮೊತ್ತ ನೀಡುವುದಾಗಿ ಬೇಡಿಕೆ ಇಟ್ಟಿದ್ದವು ಆದರೆ ಈ ವರೆಗೆ ಸಲ್ಮಾನ್ ಖಾನ್ ಅವರು ರಾಧೆ ಸಿನಿಮಾವನನ್ನು ಒಟಿಟಿಗೆ ಮಾರಿಲ್ಲ. ಇತ್ತೀಚೆಗೆ ಝೀ ಸ್ಟುಡಿಯೋಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಸಲ್ಮಾನ್ ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾದ ವಿತರಣೆ, ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕನ್ನು ಜೀ ಸ್ಟುಡಿಯೋಸ್ ಗೆ ಮಾರಿದ್ದಾರೆ.