Don't Miss!
- News
ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
- Automobiles
ಭಾರತದಲ್ಲಿ ಯಮಹಾ ಸ್ಕೂಟರ್, ಬೈಕ್ಗಳ ದರ ಹೆಚ್ಚಳ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಾರುಖ್-ಹಿರಾನಿ ಸಿನಿಮಾಕ್ಕೆ ಆರಂಭಿಕ ಹಿನ್ನಡೆ: ಮುಖ್ಯ ವ್ಯಕ್ತಿ ಹೊರಕ್ಕೆ!
ರಾಜ್ ಕುಮಾರ್ ಹಿರಾನಿ ಸೋಲೇ ಕಾರಣ ನಿರ್ದೇಶಕ. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ವಿಜಯ ಸಾಧಿಸುವುದು ಮಾತ್ರವೇ ಅಲ್ಲ ಸಮಾಜಕ್ಕೆ ಒಂದು ಪ್ರಬಲ ಸಂದೇಶವನ್ನು ಸಹ ನೀಡುತ್ತವೆ. ಪ್ರಸ್ತುತ ಭಾರತದ ನಿರ್ದೇಶಕರ ಪೈಕೆ ಅತ್ಯುತ್ತಮ ಎಂದು ರಾಜ್‌ಕುಮಾರ್ ಹಿರಾನಿಯನ್ನು ಗುರುತಿಸಲಾಗುತ್ತದೆ.
ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸಿನಿಮಾ ಮಾಡಲು ಬಾಲಿವುಡ್‌ನ ಸ್ಟಾರ್ ನಟರೇ ಸಾಲುಗಟ್ಟಿ ನಿಂತಿದ್ದಾರೆ. ಸಂಜಯ್ ದತ್, ಅಮೀರ್ ಖಾನ್, ರಣ್ಬೀರ್ ಕಪೂರ್ ಅವರೊಟ್ಟಿಗಷ್ಟೆ ಕೆಲಸ ಮಾಡಿರುವ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.
ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಸಿನಿಮಾಕ್ಕೆ 'ಡಂಕಿ' ಎಂದು ಹೆಸರಿಡಲಾಗಿದೆ. ಸಿನಿಮಾದ ಚಿತ್ರೀಕರಣ ಸಹ ಈಗಾಗಲೇ ಪ್ರಾರಂಭವಾಗಿಬಿಟ್ಟಿದೆ. ಆದರೆ ಆರಂಭದಲ್ಲಿಯೇ ದೊಡ್ಡ ವಿಘ್ನವೊಂದು ಸಿನಿಮಾಕ್ಕೆ ಎದುರಾಗಿದೆ. ಸಿನಿಮಾದ ಪ್ರಮುಖ ತಂತ್ರಜ್ಞರೊಬ್ಬರು ಸಿನಿಮಾದಿಂದ ಹೊರ ನಡೆದಿದ್ದಾರೆ.
ಸಾಮಾನ್ಯವಾಗಿ ಅತ್ಯುತ್ತಮ ತಂತ್ರಜ್ಞರನ್ನೇ ರಾಜ್‌ಕುಮಾರ್ ಹಿರಾನಿ ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತೆಯೇ 'ಡಂಕಿ' ಸಿನಿಮಾಕ್ಕೂ ಕೆಲವು ತಂತ್ರಜ್ಞರನ್ನು ಆರಿಸಿಕೊಂಡಿದ್ದರು. ಈ ಸಿನಿಮಾದ ಸಿನಿಮಾಟೊಗ್ರಫಿ ಜವಾಬ್ದಾರಿಯನ್ನು ಅಮಿತ್ ರಾಯ್‌ಗೆ ವಹಿಸಲಾಗಿತ್ತು. ಈ ಹಿಂದೆ ಇವರು, 'ಲವ್ ಆಜ್ ಕಲ್ 2', 'ಸರ್ಕಾರ್', 'ಸರ್ಕಾರ್ ರಾಜ್' ಸಿನಿಮಾಗಳನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದರು. ಆದರೆ ಈಗ ಅಮಿತ್ 'ಡಂಕಿ' ಸಿನಿಮಾದಿಂದ ಹೊರನಡೆದಿದ್ದಾರೆ.

'ಡಂಕಿ' ಸಿನಿಮಾದಿಂದ ಹೊರಗೆ ಬಂದ ಅಮಿತ್ ರಾಯ್
ತಾವು ಶಾರುಖ್-ಹಿರಾನಿಯ 'ಡಂಕಿ' ಸಿನಿಮಾದಿಂದ ಹೊರಗೆ ಹೋಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅಮಿತ್ ರಾಯ್, ''ನಾನು ಇನ್ನು ಮುಂದೆ ರಾಜ್‌ಕುಮಾರ್ ಹಿರಾನಿಯ 'ಡಂಕಿ' ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ'' ಎಂದಿದ್ದಾರೆ. ಕ್ರಿಯಾಶೀಲ ಕಾರ್ಯದಲ್ಲಿ ಬಂದ ಭಿನ್ನತೆಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಮಿತ್ ರಾಯ್ ಹೇಳಿದ್ದಾರೆ.

ಸೌಹಾರ್ದಯುತವಾಗಿ ಹೊರಬಂದೆ: ಅಮಿತ್
''ನಾನು 'ಡಂಕಿ' ಸಿನಿಮಾಕ್ಕಾಗಿ 18-19 ದಿನಗಳ ಕಾಲ ಕೆಲಸ ಮಾಡಿದೆ. ಆದರೆ ನಾನು ಹಾಗೂ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಎಂದೇ ಕೋನದಿಂದ ದೃಶ್ಯಗಳನ್ನು ನೋಡುತ್ತಿಲ್ಲ. ಇಬ್ಬರಿಗೂ ಸೆಟ್‌ನಲ್ಲಿ ಸಾಕಷ್ಟು ಅಭಿಪ್ರಾಯ ಭೇದಗಳು ಬರುತ್ತಿವೆ. ಹಾಗಾಗಿ ನಾನು ಸಿನಿಮಾದಿಂದ ಹೊರಗೆ ಬರುತ್ತಿದ್ದೇನೆ. ನಾನು ಸೌಹಾರ್ದಯುತವಾಗಿಯೇ ಸಿನಿಮಾದಿಂದ ಹೊರಗೆ ಬರುತ್ತಿದ್ದೇನೆ'' ಎಂದು ವಿವರಣೆ ನೀಡಿದ್ದಾರೆ ಅಮಿತ್ ರಾಯ್.

ಈ ಹಿಂದೆ ಹಿರಾನಿಯೊಟ್ಟಿಗೆ ಕೆಲಸ ಮಾಡಿದ್ದೆ: ಅಮಿತ್
''ನಾನು ಹಾಗೂ ಹಿರಾನಿ ಕೂತು ಮಾತನಾಡಿದ ಬಳಿಕವೇ ನಾನು ಸಿನಿಮಾದಿಂದ ಹೊರಗೆ ಬಂದೆ. ಇಬ್ಬರು ಜಗಳ ಆಡಿದ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳುವುದು ನಮಗೆ ಇಷ್ಟವಿರಲಿಲ್ಲ. ನಾನು ಹಿರಾನಿಯನ್ನು ಬಹಳ ಗೌರವಿಸುತ್ತೇನೆ. ಆದರೆ ಹೀಗೆ ಆಗಿದ್ದು ದುರಾದೃಷ್ಟಕರ'' ಎಂದಿರುವ ಅಮಿತ್, ''ನಾನು ಈ ಹಿಂದೆ ರಾಜ್‌ಕುಮಾರ್ ಹಿರಾನಿಗಾಗಿ 'ಸಂಜು' ಸಿನಿಮಾದ ಹಾಡೊಂದನ್ನು ಚಿತ್ರೀಕರಿಸಿದ್ದೆ, ಆಗೆಲ್ಲ ನಾವು ಎಂಜಾಯ್ ಮಾಡಿಕೊಂಡು ಕೆಲಸ ಮಾಡಿದೆವು, ಹಿರಾನಿಗಾಗಿ ಕೆಲವು ಜಾಹೀರಾತುಗಳನ್ನು ಸಹ ಶೂಟ್ ಮಾಡಿದೆ. ಆದರೆ ಜಾಹೀರಾತಿನಲ್ಲಿ ಆ ಉತ್ಪಾದಕನ ಅಭಿಪ್ರಾಯ, ವಿಶನ್ ಮುಖ್ಯವಾಗಿರುತ್ತದೆ. ಆದರೆ ಸಿನಿಮಾದಲ್ಲಿ ನಿರ್ದೇಶಕನ ದೃಷ್ಟಿ ಮುಖ್ಯವಾದುದು'' ಎಂದಿದ್ದಾರೆ.

ಅಮಿತ್ ಸ್ಥಾನಕ್ಕೆ ಹಿರಾನಿಯ ಹಳೆಯ ಗೆಳೆಯ
''ನಾನು 18-19 ದಿನಗಳ ವರೆಗೆ ಕೆಲಸ ಮಾಡಿದ್ದೇನೆ. ನಾನು ಚಿತ್ರೀಕರಿಸಿದ ದೃಶ್ಯಗಳನ್ನು ಹಿರಾನಿ ಹಾಗೆಯೇ ಉಳಿಸಿಕೊಳ್ಳಲಿದ್ದಾರೆ'' ಎಂದಿದ್ದಾರೆ ಅಮಿತ್ ರಾಯ್. ಈಗ ಅಮಿತ್ ರಾಯ್ ಜಾಗಕ್ಕೆ ಕ್ಯಾಮೆರಾಮನ್ ಸಿಕೆ ಮುರಳಿಧರ್ ಬಂದಿದ್ದಾರೆ. ಈ ಹಿಂದೆ ಹಿರಾನಿ ನಿರ್ದೇಶಿಸಿರುವ 'ಪಿಕೆ', '3 ಇಡಿಯಟ್ಸ್', 'ಲಗೆ ರಹೊ ಮುನ್ನಾಭಾಯಿ' ಸಿನಿಮಾಗಳನ್ನು ಇವರೇ ಚಿತ್ರೀಕರಣ ಮಾಡಿದ್ದರು. ಶಾರುಖ್ ಖಾನ್-ತಾಪ್ಸಿ ಪನ್ನು ನಟಿಸಿರುವ 'ಡಂಕಿ' ಸಿನಿಮಾ 2023ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.