For Quick Alerts
  ALLOW NOTIFICATIONS  
  For Daily Alerts

  ಧಾರ್ಮಿಕ ಭಾವನೆಗೆ ಧಕ್ಕೆ: ನಟಿ ರವೀನಾ ಟಂಡನ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲು

  |

  ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಕಾರಣಕ್ಕೆ ಬಾಲಿವುಡ್ ನ ಖ್ಯಾತ ನಟಿ ರವೀನಾ ಟಂಡನ್, ನಿರ್ದೇಶಕಿ ಹಾಗೂ ಕೊರಿಯೋಗ್ರಾಫರ್ ಫರಾ ಖಾನ್ ಮತ್ತು ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ಪಂಜಾಬ್ ನ ಅಮೃತ್ ಸರದಲ್ಲಿ ದೂರು ದಾಖಲಾಗಿದೆ. ಈ ಮೂವರು ನಟಿಯರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಕ್ರಿಶ್ಚಿಯನ್ ಫ್ರಂಟ್ ಆಫ್ ಅಜ್ನಾಲಾ ಬ್ಲಾಕ್‌ನ ಅಧ್ಯಕ್ಷ ಸೋನು ಜಾಫರ್ ದೂರು ಧಾಖಲಿಸಿದ್ದಾರೆ

  ಈ ಮೂವರು ಕಲಾವಿದರು ಕ್ರಿಶ್ಚಿಯನ್ ಧರ್ಮದ ಶಬ್ದವೊಂದನ್ನು ಬಳಸಿ ಗೇಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಸಂಭಂದಿಸಿದ 'ಹಲ್ಲೆಲುಜಾ' ಪದಕ್ಕೆ ಅವಹೇಳನಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಸ್ಮಸ್ ಮುನ್ನಾ ದಿನ ಈ ಕಾರ್ಯಕ್ರಮ ಪ್ರಸಾರವಾಗಿದೆಯಂತೆ. ನಂತರ ಈ ವಿಡಿಯೋ ನೋಡಿ ಕ್ರಿಶ್ಚಿಯನ್ ಫ್ರಂಟ್ ಆಫ್ ಅಜ್ನಾಲಾ ಬ್ಲಾಕ್‌ನ ಅಧ್ಯಕ್ಷ ಸೋನು ಜಾಫರ್ ದೂರು ಧಾಖಲಿಸಿದ್ದಾರೆ. ಜೊತೆಗೆ ವಿಡಿಯೋ ಫೂಟೇಜ್ ಅನ್ನು ನೀಡಿದ್ದಾರೆ.

  'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೃತಸರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಜೀತ್ ದುಗ್ಗಲ್ "ನಾವು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.

  ದೂರು ದಾಖಲಾಗುತ್ತಿದ್ದಂತೆ ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ವಿಡಿಯೋ ಲಿಂಕ್ ಅನ್ನು ಶೇರ್ ಮಾಡಿ, "ದಯವಿಟ್ಟು ಈ ವಿಡಿಯೋ ವೀಕ್ಷಿಸಿ. ಯಾವುದೆ ಧರ್ಮಕ್ಕೆ ಅವಮಾನ ಮಾಡುವಂತ ಪದವನ್ನು ನಾವು ಬಳಸಿಲ್ಲ, ನಾವು ಮೂವರಿಗೂ( ಫರಾ ಖಾನ್ ಮತ್ತು ಬಾರತಿ ಸಿಂಗ್) ಅಪರಾದ ಮಾಡುವಂತೆ ಉದ್ದೇಶ ಇರಲಿಲ್ಲ. ಒಂದು ವೇಳೆ ನಮ್ಮ ಕಡೆಯಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದು ಬರೆದುಕೊಂಡಿದ್ದಾರೆ.

  English summary
  Complaint against Bollywood actress Raveena Tandon, Farah Khan and Bharti singh for allegedly hurting religious sentiments on show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X