For Quick Alerts
  ALLOW NOTIFICATIONS  
  For Daily Alerts

  'ಸಂಜು' ಆಪ್ತ ಸ್ನೇಹಿತ ಕಮಲೇಶ್ ಯಾರು?

  By Pavithra
  |

  'ಸಂಜು' ಸಿನಿಮಾ ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್ ದತ್ ಬಗ್ಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳನ್ನು ಚಿತ್ರ ನೋಡಿ ತಿಳಿದುಕೊಂಡಿದ್ದು ಸಿನಿಮಾ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.

  ಸಂಜಯ್ ದತ್ ಅಭಿಮಾನಿಗಳಿಗಂತು ತನ್ನ ನೆಚ್ಚಿನ ಸ್ಟಾರ್ ಜೀವನ ಕಥೆಯನ್ನು ತೆರೆ ಮೇಲೆ ತಂದಿರುವುದು ತುಂಬಾ ಒಳ್ಳೆ ಕೆಲಸ ಎಂದಿದ್ದಾರೆ. ಇನ್ನು ಚಿತ್ರದ ನಿರ್ದೇಶಕರಿಗೂ ಸಾಕಷ್ಟು ಅಭಿಮಾನಿಗಳಿದ್ದು ಒಟ್ಟಾರೆ 'ಸಂಜು' ಚಿತ್ರ ಎಲ್ಲಾ ಕಡೆಗಳಿಂದ ಅಭಿಮಾನಿಗಳನ್ನ ಗಿಟ್ಟಿಸಿಕೊಂಡಿದ್ದೆ.

  'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!

  ಬಾಕ್ಸ್ ಆಫೀಸ್ ನಲ್ಲಿ 'ಸಂಜು' ಸಿನಿಮಾ 300 ಕೋಟಿ ಮೀರಿಸಿದ್ದು ಚಿತ್ರ ನೋಡಿ ಬಂದ ಜನರಿಗೆ 'ಸಂಜು' ಚಿತ್ರದಲ್ಲಿ ಸ್ನೇಹಿತನ ಪಾತ್ರದಲ್ಲಿ ಅಭಿನಯ ಮಾಡಿದ್ದ ಕಮಲೇಶ್ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸ್ನೇಹಿತನೆಂದರೆ ಆ ರೀತಿ ಇರಬೇಕು ಎನ್ನುವುದು ಅನೇಕರ ಮಾತಾಗಿದೆ. ಹಾಗಾದರೆ ಸಂಜಯ್ ನಿಜ ಜೀವನದ ಕಮಲೇಶ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

  ಕಮಲೇಶ್ ಮೆಚ್ಚಿದ ಪ್ರೇಕ್ಷಕರು

  ಕಮಲೇಶ್ ಮೆಚ್ಚಿದ ಪ್ರೇಕ್ಷಕರು

  'ಸಂಜು' ಸಿನಿಮಾದಲ್ಲಿ ಸಂಜಯ್‌ ದತ್‌ ಪಾತ್ರ ಮಾಡಿದ ರಣಬೀರ್ ಕಪೂರ್ ಅಭಿನಯಕ್ಕೆ ಪ್ರೇಕ್ಷಕರು ಫುಲ್‌ ಮಾರ್ಕ್ಸ್ ಕೊಟ್ಟಿದ್ದಾರೆ. ರಣಬೀರ್ ಅಭಿನಯಕ್ಕೆ ಮನಸೋತಿರುವ ಸಿನಿಮಾ ಪ್ರಿಯರು ಮತ್ತೆ ಮತ್ತೆ ಸಿನಿಮಾ ನೋಡಲು ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ. 'ಸಂಜು' ಸಿನಿಮಾದಲ್ಲಿ ಸಂಜಯ್ ಅಷ್ಟೇ ಗಮನ ಸೆಳೆದ ಪಾತ್ರ ಕಮಲೇಶ್.

  ರಿಯಲ್ ಕಮಲೇಶ್ ಬಗ್ಗೆ ಕುತೂಹಲ

  ರಿಯಲ್ ಕಮಲೇಶ್ ಬಗ್ಗೆ ಕುತೂಹಲ

  ಚಿತ್ರದಲ್ಲಿ ಕಮಲೇಶ್ ಪಾತ್ರವನ್ನು ವಿಕಿ ಕೌಶಾಲ್ ನಿರ್ವಹಿಸಿದ್ದರು. ಸಂಜಯ್‌ ದತ್‌ ಬದುಕಿನಲ್ಲಿರುವ ಸ್ನೇಹಿತನ ನಿಜವಾದ ಹೆಸರು ಪರೇಶ್ ಘಿಲಾನಿ. ಚಿತ್ರ ಬಿಡುಗಡೆಯ ಬಳಿಕ ತಮ್ಮ ಸಾಮಾಜಿಕ ತಾಣದಲ್ಲಿ ಸಂಜಯ್‌ದತ್‌ಗೆ ತುಂಬಾ ಭಾವನಾತ್ಮಕ ಪತ್ರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

  ಉದ್ಯಮಿ ಆಗಿರುವ ಪರೇಶ್ ಘಿಲಾನಿ

  ಉದ್ಯಮಿ ಆಗಿರುವ ಪರೇಶ್ ಘಿಲಾನಿ

  ಪರೇಶ್ ಶ್ರೀಮಂತ ಉದ್ಯಮಿ. ಮೂನ್ ಎಕ್ಸ್ಪ್ರೆಸ್ ಮತ್ತು ಎಕ್ಸ್ಪ್ರೈಜ್ ಮತ್ತು ರಾಡಿಮ್ಮುನ್ ಸೇರಿದಂತೆ ಕಂಪೆನಿಗಳ ಶೇರ್ ಓಲ್ಡರ್. BPG ಮೋಟಾರ್ಸ್ನ ಅಧ್ಯಕ್ಷರಾಗಿರುವ ಪರೇಶ್ ಘಿಲಾನಿ ಕ್ರಾಸ್ಒವರ್ ಮತ್ತು ಆಫ್-ರೋಡ್ ವಾಹನಗಳ ತಯಾರಾಗುವ ಸಂಸ್ಥೆಯನ್ನು ಹೊಂದಿದ್ದಾರೆ.

  ನ್ಯೂಯಾರ್ಕ್ ನಿಂದ ಆರಂಭವಾದ ಸ್ನೇಹ

  ನ್ಯೂಯಾರ್ಕ್ ನಿಂದ ಆರಂಭವಾದ ಸ್ನೇಹ

  ಸಂಜಯ್ ದತ್, ಪರೇಶ್ ಅವರನ್ನು ಪ್ಯಾರಿಯಾ ಎಂದೇ ಕರೆಯುತ್ತಾರೆ. ಸಂಜಯ್ ಮತ್ತು ಪ್ಯಾರಿಯಾ ಮೊದಲ ಬಾರಿಗೆ ಭೇಟಿ ಆಗಿದ್ದು ನ್ಯೂಯಾರ್ಕ್ನಲ್ಲಿ. ಇಬ್ಬರ ವ್ಯಕ್ತಿತ್ವ ಹಾಗೂ ಆಯ್ಕೆಗಳು ಹೆಚ್ಚಾಗಿ ಒಂದೇ ಆಗಿರುವುದರಿಂದ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿ ಆಗಿ ಉಳಿದುಕೊಂಡಿದೆ. ಸದ್ಯ ಪರೇಶ್ ತಮ್ಮ ಕುಟುಂಬದ ಜೊತೆ ಲಾಸ್ ಏಂಜಲೀಸ್ನಲ್ಲಿ ವಾಸವಾಗಿದ್ದಾರೆ.

  English summary
  Complete information about Sanjay Dutt's real-life close friend Paresh Ghilani .Vashi Kaushal played the role of Paresh Ghilani in Sanju movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X